Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೋಲ್ಡ್ ಬೆಲ್ ಪೆಪ್ಪರ್ ಸಲಾಡ್ ರೆಸಿಪಿ
ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಲಾಡ್ ಅನ್ನು ಅನೇಕ ರುಚಿಯಲ್ಲಿ, ಅನೇಕ ಬಗೆಯಲ್ಲಿ ತಯಾರಿಸಬಹುದು. ಇಲ್ಲಿ ನಾವು ದುಂಡು ಮೆಣಸಿನಕಾಯಿ, ತರಕಾರಿಗಳು ಹಾಗೂ ಮಯೋನೈಸ್ ಹಾಕಿ ತಯಾರಿಸುವ ರುಚಿಕರವಾದ ಸಲಾಡ್ ನ ರೆಸಿಪಿ ನೀಡಿದ್ದೇವೆ. ಈ ಸಲಾಡ್ ತಂಪಾಗಿ, ರುಚಿಕರವಾಗಿರುತ್ತದೆ.
ಈ ಸಲಾಡ್ ಅನ್ನು ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
ಲೆಮನ್ ಜೆಲ್ಲಿ
ಎಲೆಕೋಸು ಕಾಲು ಭಾಗದಷ್ಟು (ಚಿಕ್ಕದಾಗಿ ಕತ್ತರಿಸಿದ್ದು)
ಕೆಂಪು ದುಂಡು ಮೆಣಸಿನಕಾಯಿ 1 (ಚಿಕ್ಕದಾಗಿ ಕತ್ತರಿಸಿದ್ದು)
ಹಳದಿ ದುಂಡು ಮೆಣಸಿನ ಕಾಯಿ 1 (ಚಿಕ್ಕದಾಗಿ ಕತ್ತರಿಸಿದ್ದು)
ಹಸಿರು ಬಣ್ಣದ ದುಂಡು ಮೆಣಸಿನಕಾಯಿ 1 (ಕತ್ತರಿಸಿದ್ದು)
ಸೆಲರಿ 2-3 (ಚಿಕ್ಕದಾಗಿ ಕತ್ತರಿಸಿದ್ದು)
ಪೈನಾಪಲ್ ಅರ್ಧದಷ್ಟು
ಮಯೋನೈಸ್ 1 ಕಪ್
ಸೋಯಾ ಸಾಸ್ 1-2 ಚಮಚ
ವಿನಿಗರ್ 1 ಚಮಚ
ಕರಿಮೆಣಸಿನ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಲೆಮನ್ ಜೆಲ್ಲಿಯನ್ನು ಬಾಣಲೆಯಲ್ಲಿ ಹಾಕಿ ಉರಿಯಲ್ಲಿಟ್ಟು ಕರಗಿಸಬೇಕು.
2. ಜೆಲ್ಲಿ ಕರಗಿದ ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಬೇಕು. ನಂತರ ಕತ್ತರಿಸಿದ ಎಲ್ಲಾ ದುಂಡು ಮೆಣಸಿನ ಕಾಯಿ, ಎಲೆಕೋಸು, ಸೆಲರಿ, ಸೌತೆಕಾಯಿ ಹಾಕಬೇಕು, ಕ್ಯಾರೆಟ್ ಕೂಡ ಸೇರಿಸಬೇಕು.
3. ನಂತರ ಮಯೋನೈಸ್ ಹಾಕಿ ಸೋಯಾ ಸಾಸ್, ವಿನಿಗರ್ ಹಾಕಿ ಚೆನ್ನಾಗಿ ತಿರುಗಿಸಬೇಕು. ನಂತರ ಪೈನಾಪಲ್ ತುಂಡುಗಳನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಫ್ರಿಜ್ ನಲ್ಲಿಡಬೇಕು. ( ಈ ಸಲಾಡ್ ಅನ್ನು ಸರ್ವ್ ಮಾಡುವ 30-45 ನಿಮಿಷ ಮುನ್ನ ತಯಾರಿಸಿದರೆ ಸಾಕು). ಹೀಗೆ ಮಾಡಿದ ಸಲಾಡ್ ತಿನ್ನಲು ರುಚಿಯಾಗಿರುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.



Click it and Unblock the Notifications
