Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೂಲಂಗಿ ಚಟ್ನಿ

ಊಟ ಮುಗಿಸಿ ಡೈನಿಂಗ್ ಟೇಬಲ್‌ನಿಂದ ಏಳುವಾಗ, ಉಂಡವರು ‘ಇವತ್ತು ಊಟ ಚೆನ್ನಾಗಿತ್ತು ..’ ಅಂತ ಹೇಳಿದ್ರೆ ಅಲ್ಲೇ ನಿಂತಿರುವ ಮನೆಯಾಕೆಗೆ ಸಂತೋಷ. ಆದರೆ ಈ ಊಟವನ್ನು ಚೆನ್ನಾಗಿಸುವುದು ಹೇಗಪ್ಪಾ ? ಸಾರು, ಪಲ್ಯದ ಹೊರತಾಗಿ ಸಿಹಿ ತಿಂಡಿ, ಖಾದ್ಯಗಳನ್ನು ದಿನ ನಿತ್ಯ ಮಾಡುವುದೇ .., ಊಟ ಮಾಡುವಾಗ ಹೆಚ್ಚಾಗಿ ಚೆನ್ನಾಗಿರುವ ಉಪ್ಪಿನಕಾಯಿಯನ್ನೇ ಎಲ್ಲರ ಕಣ್ಣು ಗಳು ಹುಡುಕುತ್ತಿರುತ್ತವೆ. ಯಾಕೆಂದ್ರೆ ಸಾರಿಗೆ ಖಾರ ಕಡಿಮೆಯಾದ್ರೆ ಅಥವಾ ಸಾಂಬಾರು ಜಾಸ್ತಿ ಖಾರ ಇದ್ರೆ ಅದನ್ನ ಪಕ್ಕಕ್ಕಿಟ್ಟು ಉಪ್ಪಿನಕಾಯಿ ಮೊರೆ ಹೋಗಬಹುದು ಅಲ್ವಾ?
ಹಾಗೇ ವ್ಯಂಜನಗಳ ಸಾಲಿನಲ್ಲಿ ಚಟ್ನಿಗಳೂ ಸೇರಿಕೊಳ್ಳುತ್ತವೆ. ಕಾಯಿಚಟ್ನಿ, ಕಡ್ಲೆ ಚಟ್ನಿ, ಕಾಳಿನ ಚಟ್ನಿ...ಹಳ್ಳಿ ಕಡೆಯಾದರೆ ಚಿಗುರೆಲೆಗಳ ತರಾವಳಿ ಚಟ್ನಿಗಳು.. ಹೀಗೆ ಪಟ್ಟಿ ಬೆಳೆಯುತ್ತದೆ. ಮೊದಲಿಗೆ, ಹೊಸ ಬಗೆಯ ತಯಾರಿಕೆ ವಿಧಾನವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಉಪ್ಪಿನಕಾಯಿ ಬಾಟ್ಲಿ ಫ್ರಿಜ್‌ನಿಂದ ಆಚೆಗೆ ಬಾರದ ಹಾಗೆ ರುಚಿಯನ್ನೆಲ್ಲಾ ತಾನೇ ಹೊತ್ತುಕೊಂಡ ಮಾಡುವುದು ಹೀಗೆ -
ಶುರುವಿಗೆ ಬೇಕಾದ ವಸ್ತುಗಳನ್ನೆಲ್ಲಾ ನಿಮ್ಮ ಅಡಿಗೆಮನೆ ಸ್ಲಾಬ್ ಮೇಲೆ ರೆಡಿಮಾಡಿಟ್ಟುಕೊಳ್ಳಿ.
ಒಂದೆರಡು ಬೆಳ್ಳಗಿನ ತಾಜಾ ಮೂಲಂಗಿ
ಸ್ವಲ್ಪ ಎಣ್ಣೆ ಮತ್ತು ಸಾಸಿವೆ
ಹಸಿ ಮೆಣಸಿನ ಕಾಯಿ
ಕೊಬ್ಬರಿ
ಬೆಲ್ಲ
ಹುಣಸೇ ಹಣ್ಣು
ರುಚಿಗೆ ಬೇಕಾದಷ್ಟು ಉಪ್ಪು
ನಿಮ್ಮ ಶ್ರದ್ಧೆ
ಚಟ್ನಿ ಮಾಡುವ ವಿಧಾನ :
ಸ್ವಲ್ಪ ಎಣ್ಣೆ ಮತ್ತು ನಾಲ್ಕು ಚಿಟಿಕೆ ಸಾಸಿವೆಯಾಂದಿಗೆ ಹೆಚ್ಚಿದ ಮೂಲಂಗಿಯನ್ನು ಬೇಯಿಸಿ. ಒಲೆ ಮೇಲೆ ಮೂಲಂಗಿ ಬೇಯಲಿಟ್ಟು ಎಲ್ಲೂ ಹೋಗಬೇಡಿ. ಯಾಕೆಂದರೆ ಈ ಮೂಲಂಗಿ ಅರ್ಧ ಬೇಯುವಷ್ಟೊತ್ತಿಗೆ ಸರಿಯಾಗಿ ಹಸಿ ಮೆಣಸಿನ ಕಾಯಿಗಳನ್ನು ಹೆಚ್ಚಿ ಬೆರೆಸಿ ಮತ್ತೆ ಬೇಯಲು ಬಿಡಿ. ಫಸ್ಟ್ ರೌಂಡ್ ಮುಗಿದ ಹಾಗೆ.
ಈಗ ನಿಮ್ಮ ಮುಂದೆ ಇರುವುದು ನಿಮ್ಮ ಅಡಿಗೆ ಕೌಶಲ್ಯ ಮೆರೆಸುವ ಅವಕಾಶ... ಅಂದರೆ ಉಪ್ಪು ಹುಳಿ ಬೆರೆಸುವುದು. ಕೊಬ್ಬರಿ, ಎರಡು ಬೆರಳು ಗಾತ್ರದ ಬೆಲ್ಲ, ರುಚಿಗೆ ಬೇಕಾದಷ್ಟು ಹುಣಸೇ ಹುಳಿ, ಉಪ್ಪು ಹಾಗೂ ಬೇಯಿಸಿಟ್ಟುಕೊಂಡ ಮೂಲಂಗಿಯನ್ನು ಸೇರಿಸಿ ಮಿಕ್ಸಿಯಲ್ಲಿ ಅಥವಾ ರುಬ್ಬುವ ಕಲ್ಲಿನಲ್ಲಿ ರುಬ್ಬಿ. ಕಾಡಿಗೆಯಷ್ಟು ನೈಸ್ ಆಗಿ ಅರೆದರೆ ಚಟ್ನಿ ರೆಡಿಯಾದ ಹಾಗೆ. ಒಗ್ಗರಣೆಯ ಉಸಾಬರಿ ಬೇಡ.
ರಾತ್ರಿಯೂಟಕ್ಕೆ ತಟ್ಟೆ ಬದಿಯಲ್ಲಿ ಬಡಿಸಿ ಮನೆ ಮಂದಿಗೆಲ್ಲಾ ಸರ್‌ಪ್ರೆೃಸ್ ಮಾಡ್ತೀರಾ... ಹಾಗೇ ನಿಮ್ಮ ಹೊಸ ರುಚಿ ಪ್ರಯೋಗದ ಅನುಭವವನ್ನು ನಮಗೂ ಬರೆಯಬಾರದೇಕೆ ?



Click it and Unblock the Notifications
