Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮ ಮನೆಯಲ್ಲೆ ಮಾಡಿ ಘಮಘಮ ಸಾರಿನ ಪುಡಿ

ಪುಡಿಗಳು ಅಂಗಡಿಯಲ್ಲಿ ಸಿಗತ್ತೆ. ಆದರೆ, ಮನೆಯಲ್ಲೆ ಪುಡಿಯಿಂದ ಕುದಿಸಿದ ಸಾರಿನ ಗಮ್ಮತ್ತೇ ಬೇರೆ. ಇದರ ರುಚಿ ನಿಮಗೂ ಗೊತ್ತು. ಆದರೆ ಮೆಣಸಿನಕಾಯಿ, ದನಿಯ ಮುಂತಾದ ಪದಾರ್ಥ ಹುರಿದು ಕುಟ್ಟಿ ಪುಡಿ ಮಾಡಿ ಡಬ್ಬಕ್ಕೆ ತುಂಬಿಡುವುದಕ್ಕೆ ಮೈಬಗ್ಗಲ್ಲ. ಅಲ್ವಾ? ಕೆಲವರಿಗೆ ಸೊಂಟ ಬಗ್ಗತ್ತೆ ಆದರೆ ಟೈಮೇ ಸಿಗಲ್ಲಾರೀ..ಅಂತಾರೆ. ಓಕೆ. ಬರುವ ಶನಿ ಅಥವಾ ಭಾನುವಾರ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1. ಕೊತ್ತಂಬರಿ ಬೀಜ1 ಕಪ್
2. 5-6 ಒಣ ಮೆಣಸಿನಕಾಯಿ
3. ಉದ್ದಿನ ಬೇಳೆ 1 ದೊಡ್ಡ ಚಮಚ
4. ತುರಿದ ಒಣ ಕೊಬ್ಬರಿ 1 ಕಪ್
5. ಚಕ್ಕೆ ಒಂದು ಚಿಕ್ಕ ತುಂಡು
ಮಾಡುವ ವಿಧಾನ:
1. ಕೊತ್ತಂಬರಿಬೀಜವನ್ನು 2 ನಿಮಿಷ ಮೈಕ್ರೋವೇವ್ ಅಥವಾ ಸ್ಟೌವ್ ಮೇಲೆ ಬಾಣಲೆಯಿಟ್ಟು ಹುರಿಯಬೇಕು.
2. ಕೆಂಪು ಮೆಣಸಿನಕಾಯಿ, ಚಕ್ಕೆ, ಕೊಬ್ಬರಿಯನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಬೇಕು.
3. ಉದ್ದಿನ ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.
4. ನಂತರ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಸಣ್ಣಗೆ ಪುಡಿಯಾಗುವವರೆಗೆ ಗಡಗಡ ಮಾಡಿ. ಇದನ್ನು ಗಾಳಿ ನುಸುಳದಂತೆ ಡಬ್ಬದಲ್ಲಿ ಹಾಕಿ ಅದರ ಬಾಯನ್ನು ಮುಚ್ಚಿಡಿ. ಬೇಕೆಂದಾಗ ಬಳಸಿ ಸಾರು ಮಾಡಿ.



Click it and Unblock the Notifications
