Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಖಾರ ಹುಳಿ ಸಂಗಮದ ಹಸಿಮೆಣಸಿನಕಾಯಿ ತೊಕ್ಕು

ಬೇಕಾಗುವ ಸಾಮಾನುಗಳು
ಖಾರ ತಳಿಯ ಹಸಿ ಮೆಣಸಿನಕಾಯಿ 100 ಗ್ರಾಂ
ದೊಡ್ಡ ನಿಂಬೆಹಣ್ಣಿನ ಗಾತ್ರದಷ್ಟು ಹುಣಿಸೇಹಣ್ಣು
ಮೂರು ಟೀ ಚಮಚ ಪುಡಿ ಮಾಡಿದ ಬೆಲ್ಲ
ಸಾಸಿವೆ ಎರಡು ಚಮಚ, ಎಣ್ಣೆ ನಾಲಕ್ಕು ಚಮಚ
ಕೊತ್ತಂಬರಿ ಸೊಪ್ಪು ಒಂದು ಕಟ್ಟು
ರುಚಿಗೆ ಹೊಂದುವಷ್ಟು ಕಲ್ಲುಪ್ಪು, ಚಿಟಿಕೆ ಇಂಗು
ತಯಾರಿಕೆ ವಿಧಾನ
ತವದ ಮೇಲೆ ಅಥವಾ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿರಿ. ಕುದುರೆ ಪಟಾಕಿ ಥರ ಸಿಡಿಸಿಡಿಸಿಡಿ ಎನ್ನಲಿ. ಇಡೀ ಹಸಿಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಬಾಡಿಸಿ ನಂತರ ಅದಕ್ಕೆ ಬೆಲ್ಲ, ಕೊತ್ತಂಬರಿ ಸೊಪ್ಪು, ಹುಣಿಸೇಹಣ್ಣು ಮತ್ತು ಉಪ್ಪನ್ನು ಹಾಕಿ ಮತ್ತೆ ಸ್ವಲ್ಪ ಬಾಡಿಸಿ. ಕೊನೆಯಲ್ಲಿ ಇಂಗಿನ ಪುಟು ಹಾಕಿ ಚಮಚೆಯಲ್ಲಿ ಬೆರೆಸಿರಿ.
ಇದನ್ನು ಚೂರೂ ಕೂಡ ನೀರು ಹಾಕದೆ ತರಿತರಿಯಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಖಾಲಿಯಾಗಿರುವ ಹಾರ್ಲಿಕ್ಸ್ ಬಾಟಲಿಯಲ್ಲಿ ಅಥವಾ ಗಾಳಿಯಾಡದ ಏರ್ ಟೈಟ್ ಸ್ಟೀಲ್ ಡಬ್ಬದಲ್ಲಿ ತುಂಬಿ ತಂಪುಪೆಟ್ಟಿಗೆಯಲ್ಲಿ ಇಡಿ. ಎಂಟು ದಿನ ಕಳೆದರೆ ತೊಕ್ಕು ಎಕ್ಸ್ ಪೈರ್ ಆಗುತ್ತದೆ. ಗಮನವಿರಲಿ.
ನಾಲಿಗೆ ಕೆಟ್ಟಿದೆ, ಅಡುಗೆ ಖಾರ ಇಲ್ಲ ಎಂದು ಗೊಣಗುವವರು ಈ ತೊಕ್ಕಿನ ಬಾಟಲಿಯನ್ನು ಊಟದ ತಟ್ಟೆಯ ಪಕ್ಕ ಇಟ್ಟುಕೊಳ್ಳುವುದು ಕ್ಷೇಮ. ದೋಸೆ, ರೊಟ್ಟಿ, ಚಪಾತಿ ಮತ್ತು ಮೊಸರನ್ನದೊಂದಿಗೆ ಚಪ್ಪರಿಸಿಕೊಂಡು ನೆಂಚಿಕೊಳ್ಳಲು ಚೆನ್ನಾಗಿರುತ್ತದೆ. ಕಚೇರಿಗೆ ನಿತ್ಯ ಊಟದ ಡಬ್ಬ ತೆಗೆದುಕೊಂಡು ಹೋಗುವವರು ಒಂದು ಸಣ್ಣ ಡಬ್ಬಿಯಲ್ಲಿ ತೊಕ್ಕನ್ನು ಹಾಕಿ ಟೇಬಲ್ ಡ್ರಾಯರ್ ನಲ್ಲಿ ಇಟ್ಟುಕೊಂಡು ತಿಂದರೆ ಸರಿ. ಖಾರ ನೆತ್ತಿಗೇರಿದರೆ ಊಟವಾದ ನಂತರ ತೇಲಿಬರುವ ಮಂಪರು ನಿದ್ದೆ ತಪ್ಪುತ್ತದೆ.



Click it and Unblock the Notifications
