Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಾಕಶಾಲೆ: ತರಕಾರಿ ಕುರ್ಮಾದ ಮರ್ಮಾ
ಕರ್ನಾಟಕದಲ್ಲಿ ಈಗ ಮಳೆರಾಯನ ಪ್ರತಾಪ ಅಧಿಕವಾಗಿ ಕಚಗುಳಿ ಇಡುವಂಥಾ ತಣ್ಣನೆ ಚಳಿ ಅನುಭವವೂ ಇದೆ. ಚಳಿಯನ್ನು ನೀಗಿಕೊಳ್ಳಲು, ಮೈಯನ್ನು ಬೆಚ್ಚಗಾಗಿಸಿಕೊಳ್ಳಲು ಬಿಸಿಬಿಸಿ ರೊಟ್ಟಿ, ಚಪಾತಿಯೊಂದಿಗೆ ತರಕಾರಿ ಕುರ್ಮಾ ಜೊತೆಗಿದ್ದರೆ ಸಾಕು.
*ಶ್ರೀರಕ್ಷಾ, ಬೆಂಗಳೂರು
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ: 3 (ಸಿಪ್ಪೆ ತೆಗೆಯಬೇಕು)
ಬಟಾಣಿ: ¼ ಕಪ್ಪು
ಕ್ಯಾರೆಟ್: 2
ಹಸಿ ಹುರುಳಿಕಾಯಿ: 10 (ಸಣ್ಣಗೆ ಹೆಚ್ಚಿಕೊಳ್ಳಬೇಕು)
ಉಪ್ಪು: ರುಚಿಗೆ ತಕ್ಕಷ್ಟು
ಮೊಸರು:½ ಕಪ್ಪು
ಯಾವುದಾದರೂ ಹಿಟ್ಟು: 1ಟೇಬಲ್ ಚಮಚ
ಬೆಣ್ಣೆ: 1 ಟೇಬಲ್ ಚಮಚ
ರುಬ್ಬಿಕೊಳ್ಳುವ ಪದಾರ್ಥಗಳು:
ಕೊಬ್ಬರಿ: ¼ ಕಪ್ಪು
ಗಸಗಸೆ: 1 ಟೇಬಲ್ ಚಮಚ
ಬೇಯಿಸದ ಗೋಡಂಬಿ: 8
ಈರುಳ್ಳಿ: ½
ಬೆಳ್ಳುಳ್ಳಿ: 1
ಹಸಿ ಮೆಣಸಿನಕಾಯಿ: 3 (ಖಾರ ಹೆಚ್ಚ್ಚಿಗೆ ಬೇಕೆನ್ನುವವರು ಇನ್ನೊಂದು)
ಕೊತ್ತಂಬರಿ ಸೊಪ್ಪು: ½ ಹಿಡಿ
ರುಬ್ಬಿಕೊಳ್ಳಬೇಕಾದ ಪದಾರ್ಥಗಳನ್ನೆಲ್ಲಾ ಕೆಲ ನಿಮಿಷಗಳ ಕಾಲ ನೀರಿನಲ್ಲಿ ನೆನಸಿ ನಂತರ ಮಿಕ್ಸರ್ ಅಥವಾ ಒರಳು ಕಲ್ಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಕುರ್ಮಾ ಮಾಡುವ ವಿಧಾನ:
ಎಲ್ಲ ತರಕಾರಿಗಳನ್ನು ಸಮಗಾತ್ರದಲ್ಲಿ ಹೆಚ್ಚಿಕೊಳ್ಳಿ. ಒಂದು ಕಪ್ ನೀರಿನಲ್ಲಿ ಎಲ್ಲ ತರಕಾರಿಗಳನ್ನು ಚೆನ್ನಾಗಿ ಕುದಿಸಿ. ಉಪ್ಪು, ಹಿಟ್ಟು, ರುಬ್ಬಿಕೊಂಡ ಮಸಾಲೆ ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿ. ಸಣ್ಣ ಉರಿಯಲ್ಲಿ ಕೆಲ ನಿಮಿಷಗಳ ಕಾಲ ಹಾಗೆ ಇಡಿ. ತರಕಾರಿಗಳೆಲ್ಲಾ ಚೆನ್ನಾಗಿ ಬೆಂದು ಮಸಾಲೆ ವಾಸನೆ ಮೂಗಿಗೆ ಅಡರುತ್ತಿದ್ದಂತೆ ಬೆಣ್ಣೆಯನ್ನು ಸೇರಿಸಿ. ಒಂದೆರಡು ನಿಮಿಷ ಬೇಯಿಸಿದ ನಂತರ ತರಕಾರಿ ಕುರ್ಮಾ ಸಿದ್ಧವಾದಂತೆ. ಇದನ್ನು ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ನಂಜಿಕೊಂಡು ತಿನ್ನಬಹುದು. ತರಕಾರಿ ಪಲ್ಯಗಳ ಬದಲಾಗಿ ಕುರ್ಮಾವನ್ನೂ ಬಳಸಬಹುದು.



Click it and Unblock the Notifications
