Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ದಟ್ಸ್ ಕನ್ನಡಪಾಕಶಾಲೆ : ಮಾವಿನಕಾಯಿ ತೊಕ್ಕು
ಹಣ್ಣುಗಳ ರಾಜನನ್ನು ಕೊಂಡು ಬಗೆಬಗೆಯ ತಿನಿಸನ್ನು ಮಾಡಬಹುದು. ಹಾಗೆ ಮಾವಿನಕಾಯಿ ಬಳಸಿ ತೊಕ್ಕು, ಗೊಜ್ಜು, ಉಪ್ಪಿನಕಾಯಿ ಮಾಡುವುದು ಸಾಮಾನ್ಯ. ಜನಪ್ರಿಯ ತೋತಾಪುರಿ ಮಾವಿನಕಾಯಿ ಬಳಸಿ ಸುಲಭವಾಗಿ ತೊಕ್ಕು ಮಾಡಬಹುದಾದ ಬಗೆ ತಿಳಿಯೋಣ
ಬೇಕಾಗುವ ಪದಾರ್ಥಗಳು:
ತೋತಾಪುರಿ ಮಾವಿನಕಾಯಿ,(ಗಿಣಿ ಮೂತಿ ಮಾವಿನಕಾಯಿ) : ದೊಡ್ಡ ಗಾತ್ರ 1
ಸಾಸಿವೆ : 2 ಚಾ ಚಮಚ
ಮೆಂತ್ಯಾ : 2 ಚಾ ಚಮಚ
ಇಂಗು ಕಡಲೆಕಾಯಿಗಾತ್ರದ ಎರಡು ಉಂಡೆ
ಎಣ್ಣೆ : 6 ಟೇಬಲ್ ಚಮಚ
ಮೆಣಸಿನ ಪುಡಿ: 2 ಚಾ ಪುಡಿ
ಉಪ್ಪು : 1 ಹಿಡಿ
ಬೆಲ್ಲ : 100 ಗ್ರಾಮ್ಸ್
ಮಾಡುವ ವಿಧಾನ:
ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿರಿ, ಸಾಸಿವೆ, ಮೆಂತೆಯನ್ನು ಎಣ್ಣೆ ಹಾಕದೆ ಪುಡಿ ಮಾಡಿರಿ. ಇಂಗನ್ನು ಪುಡಿ ಮಾಡಿಕೊಳ್ಳಿರಿ. ಆಮೇಲೆ ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿಯಾಗಲಿಕ್ಕಿಟ್ಟು ಮಾವಿನಕಾಯಿ ತುರಿ ಹಾಕಿ ಮಗುಚಿರಿ, ಬೇಯುವಾಗ ಬೆಲ್ಲವನ್ನು ಜಜ್ಜಿ ಹಾಕಿ ಉಪ್ಪು, ಮೆಣಸಿನ ಪುಡಿ ಹಾಕಿರಿ ಮಗುಚುತ್ತಾ ಇದ್ದು ಸಾಸಿವೆ, ಮೆಂತೆಯ ಪುಡಿ ಹಾಕಿರಿ ಮಗುಚುತ್ತಾ ಇದ್ದು ಜಾಮ್ ನಂತೆ ಆಗುವಾಗ ಇಳಿಸಿರಿ, ಆರಿದ ಮೇಲೆ ಬಾಟಲಿಯಲ್ಲಿ ಹಾಕಿಡಿರಿ. ಒಂದು ವಾರಕೆಡುವುದಿಲ್ಲ. ಚಟ್ನಿಯ ಬದಲು ತಿಂಡಿಗಳ ಜೊತೆಗೆ ಉಪಯೋಗಿಸಬಹುದು.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
