Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಸಾಲೆ ತುಂಬಿದ ಮಾವಿನಕಾಯಿ ಉಪ್ಪಿನಕಾಯಿ

ಬೇಕಾಗುವ ಸಾಮಾಗ್ರಿಗಳು:
* 2 ಕೆಜಿ ಮಾವಿನಕಾಯಿ
* ಸಾಸಿವೆ ಪುಡಿ 8 ಚಮಚ
* ಹುರಿದು ಪುಡಿ ಮಾಡಿದ ಮೆಂತೆ 3 ಚಮಚ
* ಕೆಂಪು ಮೆಣಸಿನ ಪುಡಿ 4 ಚಮಚ
* ಚಕ್ಕೆ ಪುಡಿ 8 ಚಮಚ
* ಚಿಟಿಕೆಯಷ್ಟು ಇಂಗು
* ಅರಿಶಿಣ 2 ಚಮಚ
* ಅರ್ಧ ಚಮಚ ಅಜಮೋದ
* ಅರ್ಧ ಲೀಟರ್ ಎಣ್ಣೆ
* 12 ಚಮಚ ಉಪ್ಪು
ತಯಾರಿಸುವ ವಿಧಾನ:
1. ಮಾವಿನ ಕಾಯಿಗಳನ್ನು ತೊಳೆದು ಒಣಗಿಸಬೇಕು. ನಂತರ ಪ್ರತಿಯೊಂದು ಮಾವಿನ ಕಾಯಿಯನ್ನು 4 ಭಾಗಗಳಾಗಿ ಅದರ ಅರ್ಧದಷ್ಟು ಕತ್ತರಿಸಿ ಒಳಗಿನ ಬೀಜ ತೆಗೆಯಬೇಕು (ಪೂರ್ಣ ಕತ್ತರಿಸಬೇಡಿ)
2. ಈ ಮಾವಿನ ಕಾಯಿಗಳ ಒಳಗೆ ಮತ್ತು ಹೊರಗೆ ಉಪ್ಪು ಸವರಿ 8 ಗಂಟೆ ಕಾಲ ಇಡಬೇಕು.
3. ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಇಂಗು ಹಾಕಿ, ಇಂಗು ಕಂದು ಬಣ್ಣ ಬರುವವರಗೆ ಬಿಸಿ ಮಾಡಬೇಕು. ಈ ಎಣ್ಣೆಯಲ್ಲಿ ಉಳಿದೆಲ್ಲಾ ಮಸಾಲ ಸಾಮಾಗ್ರಿಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಈಗ ಸ್ವಲ್ಪ ಗಟ್ಟಿಯಾಗಿರುವ ಈ ಮಸಾಲೆಯನ್ನು ಮಾವಿನ ಕಾಯಿಯೊಳಗೆ ತುಂಬ ಬೇಕು.
4. ಈ ಮಸಾಲೆ ತುಂಬಿದ ಮಾವಿನ ಕಾಯಿಗಳನ್ನು ಮಸಾಲೆ ಗಾಜಿನ ಡಬ್ಬದಲ್ಲಿ ಹಾಕಿ ಉಳಿದ ಎಣ್ಣೆಯನ್ನು ಅದೇ ಡಬ್ಬಕ್ಕೆ ಸುರಿದು ಮುಚ್ಚಳವನ್ನು ಗಟ್ಟಿಯಾಗಿ ಹಾಕಿ 2-3 ದಿನ ಬಿಸಿಲಿನಲ್ಲಿಟ್ಟು ನಂತರ ಒಳಗಡೆ ಇಡಬೇಕು.
5. ಈ ಉಪ್ಪಿನಕಾಯಿ ಡಬ್ಬವನ್ನು 15 ದಿನಗಳವರಿಗೆ ದಿನಕ್ಕೊಮ್ಮೆ ಅಲುಗಾಡಿಸಿ ಇಡಬೇಕು. 15 ದಿನದ ಬಳಿಕ ತಿನ್ನಲು ರುಚಿಕರವಾದ ಮಸಾಲೆ ತುಂಬಿದ ಮಾವಿಕಾಯಿ ಉಪ್ಪಿನಕಾಯಿ ರೆಡಿಯಾಗಿರುತ್ತದೆ.



Click it and Unblock the Notifications
