Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರೆಸಿಪಿ: ಸುಲಭವಾಗಿ ಮಾಡಬಹುದು ಚೈನೀಸ್ ಕೇಕ್
ಹೊಸ ವರ್ಷ ಬರ್ತಾ ಇದೆ. ಕೊರೊನ ಹಾವಳಿಯಿಂದ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ.ಹಾಗಂತ ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡಬಾರದೆಂಬ ಯಾವುದೇ ನಿಯಂತ್ರಣವನ್ನು ಯಾರೂ ಹೇರಿಲ್ಲ. ನಿಮ್ಮ ಕುಟುಂಬದವರ ಹಾಗೂ ಪ್ರೀತಿ ಪಾತ್ರರ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಬಹುದು. ಹೊಸ ವರ್ಷಕ್ಕೆ ಮೊದಲು ಬೇಕಾಗೋದು ವಿಧವಿಧವಾದ ಸ್ವೀಟ್ಸ್ ಹಾಗೂ ಕೇಕ್‌ಗಳು.

ಹೆಚ್ಚಿನವರು ಮನೆಯಲ್ಲಿಯೇ ವಿವಿಧ ತರಹದ ಕೇಕ್ ತಯಾರಿಸಿ, ಮನೆಯವರೆನ್ನೆಲ್ಲಾ ಸಂತೋಷಗೊಳಸಿಬೇಕು ಎಂಬ ಆಸೆ ಹೊಂದಿರುತ್ತಾರೆ.
ಅಂತಹವರಿಗೆ ಇಂದು ನಾವು ಸುಲಭವಾಗಿ ಯಾವುದೇ ಓವನ್ ಇಲ್ಲದೇ ಸರಳವಗಿ ಕೇಕ್ ತಯಾರಿಸುವುದು ಎಂಬುದನ್ನು ಹೇಳಿದ್ದೇವೆ. ಈ ಕೇಕ್‌ನ್ನು ಮನೆಯಲ್ಲಿಯೇ ತಯಾರಿಸಿ ಹಾಗೂ ಹೊಸ ವರ್ಷವನ್ನು ಸಿಹಿಯಿಂದ ಸ್ವಾಗತಿಸಿ.
Recipe By: Shreeraksha
Recipe Type: sweet
Serves: 4
-
ಬೇಕಾಗುವ ಸಾಮಾಗ್ರಿಗಳು:
2 ಕಪ್ ಬಿಸಿ ನೀರು
1 ಪ್ಯಾಕೇಜ್ ಚೈನೀಸ್ ಬ್ರೌನ್ ಶುಗರ್
3 ಕಪ್ ಸಿಹಿ ಅಕ್ಕಿ ಹಿಟ್ಟು (ಸುಮಾರು 3 ಕಪ್)
2 ಚಮಚ ವೆಜೆಟೇಬಲ್ ಎಣ್ಣೆ
2 ಚಮಚ ಬಾದಾಮಿ ಪೌಡರ್
1/2 ಚಮಚ ಹುರಿದ ಎಳ್ಳು
ಅಲಂಕರಿಸಲು 10 ಒಣಗಿದ ಖರ್ಜೂರ
-
ತಯಾರಿಸುವ ವಿಧಾನ:
1. ಸಮನಾದ ಅಳತೆಯೊಂದಿಗೆ ನೀರು ಮತ್ತು ಬೌನ್ ಶುಗರ್‌ನ್ನು ಪಾತ್ರೆಗೆ ಸೇರಿಸಿ. ಇದನ್ನು ಮೀಡಿಯಂ ಫ್ಲೇಮ್‌ನೊಂದಿಗೆ ಕಾಯಿಸಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಸುಮಾರು 10 ನಿಮಿಷಗಳವರೆಗೆ ಬೆರೆಸಿ.(ಅದನ್ನು ಕುದಿಯಲು ಬಿಡಬೇಡಿ.) ಸ್ಟವ್ ಆಫ್ ಮಾಡಿ, ಮುಟ್ಟಲು ಆಗುವಷ್ಟು ತಣ್ಣಗಾಗಲು ಬಿಡಿ.
2. ಮಿಕ್ಸಿಂಗ್ ಬೌಲ್‌ನಲ್ಲಿ ಅಕ್ಕಿ ಹಿಟ್ಟನ್ನು ಹಾಕಿ, ಅದಕ್ಕೆ ಸಕ್ಕರೆ ನೀರಿನ ಮಿಶ್ರಣವನ್ನು ನಿಧಾನವಾಗಿ ಸುರಿಯುತ್ತಾ, ಅಕ್ಕಿಹಿಟ್ಟನ್ನು ನಿಧಾನವಾಗಿ ಮಿಶ್ರಣ ಮಾಡುತ್ತಾ ಬನ್ನಿ. ಸುಮಾರು 2ನಿಮಿಷಗಳ ಕಾಲ ಹದ ದೊರೆಯುವ ತನಕ ಮಿಶ್ರಣ ಮಾಡಿ.
3. ಇದಕ್ಕೆ ಎರಡು ಚಮಚದಷ್ಟು ಎಣ್ಣೆಯನ್ನು ಸೇರಿಸಿ ಮತ್ತು ಈ ಎಣ್ಣೆ ಮಿಶ್ರಣದೊಂದಿಗೆ ಸರಿಯಾಗಿ ಹೊಂದಿಕೆ ಆಗುವವರೆಗೂ ತಿರುಗಿಸಿ. ಸುಮಾರು 5 ನಿಮಿಷಗಳ ಕಾಲ ತೆಗೆದುಕೊಳ್ಳಬಹುದು. ನಂತರ ಅದಕ್ಕೆ ಬಾದಾಮಿ ಸಾರವನ್ನು ಸೇರಿಸಿ ಮಿಶ್ರಣ ಮಾಡಿ.
4. ನಿಮ್ಮ ಬಳಿ ಮಿಕ್ಸ್ ಮಡುವಂತಹ ಮಿಕ್ಸರ್ ಇದ್ದರೆ ಅದನ್ನು ಬಳಸಿದರೆ ಉತ್ತಮ, ಇಲ್ಲವಾದಲ್ಲಿ ಕೈಯಲ್ಲಿಯೂ ಮಿಶ್ರಣ ಮಾಡಬಹುದು.
5. ಈ ಮಿಶ್ರಣವನ್ನು ಸಸ್ಯಜನ್ಯ ಎಣ್ಣೆ ಲೇಪನ ಮಾಡಿದ ಕೇಕ್ ಮಾಡುವ ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ ಸ್ಟೀಮ್‌ನಲ್ಲಿಡಿ. ಅಂದರೆ ದೊಡ್ಡ ಪಾತ್ರೆಗೆ ನೀರು ಹಾಕಿ ಅದರೊಳಗೆ ಕೇಕ್ ಮಿಶ್ರಣ ಹಾಕಿರುವಂತಹ ಕೇಕ್ ಪ್ಯಾನ್ ಇಡಬೇಕು. ಸುಮಾರು 40 ರಿಂದ 45 ನಿಮಿಷಗಳ ಕಾಲ ಬೇಯಿಸಿ ನಂತರ ತಣ್ಣಗಾಗಲು ಬಿಡಿ.
6. ಬಳಿಕ ಅದನ್ನು ಚಾಕುವಿನ ಸಹಾಯದಿಂದ ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ, ಖರ್ಜೂರ ಹಾಗೂ ಹುರಿದ ಎಳ್ಳಿನಿಂದ ಅಲಂಕರಿಸಿದರೆ ರುಚಿಯಾದ ಕೇಕ್ ಸವಿಯಲು ಸಿದ್ಧ.
- ಇದನ್ನು ನೀವು ಮೈಕ್ರೋವೇವ್‌ನಲ್ಲೂ ಮಾಡಬಹುದು
- ಕೊಬ್ಬು- - 10ಗ್ರಾಂ
- ಪ್ರೋಟೀನ್- - 5.2ಗ್ರಾ



Click it and Unblock the Notifications
