Latest Updates
-
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ?
ತವಾ ಚಿಕನ್ ರೆಸಿಪಿ: ಲೆಗ್ ಪೀಸ್ ಚಿಕನ್ ಹೀಗೆ ಮಾಡಿದರೆ ಸೂಪರ್ ಆಗಿರುತ್ತದೆ
ತವಾ ಚಿಕನ್ ಲೆಗ್ ಟ್ರೈ ಮಾಡಿದ್ದೀರಾ, ತುಂಬಾ ಸರಳವಾದ ರೆಸಿಪಿಯಿದು, ಆದರೆ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ, ಇದನ್ನು ಒಮ್ಮೆ ಮಾಡಿದರೆ ಮತ್ತೆ-ಮತ್ತೆ ತಿನ್ನಬೇಕೆನ್ನುವ ರುಚಿಯ ಚಿಕನ್ ರೆಸಿಪಿಯಿದು, ಇದನ್ನು ಮಾಡಲು ತುಂಬಾ ಸಾಮಗ್ರಿ ಬೇಕಾಗಿಲ್ಲ, ಸುಲಭವಾಗಿ ಮಾಡಬಹುದು, ಬನ್ನಿ ಈ ರುಚಿಯಾದ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಚಿಕನ್ ಲೆಗ್ ಪೀಸ್ 2
ಮೊಸರು 1/2 ಲೀಟರ್
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2 ಚಮಚ ಟಿಕ್ಕಾ ಮಸಾಲ
ಒಂದೂವರೆ ಚಮಚ ಉಪ್ಪಿನ ಪುಡಿ
2 ಚಮಚ ಖಾರದ ಪುಡಿ
1 ಚಮಚ ಜೀರಿಗೆ ಪುಡಿ
1/2 ನಿಂಬೆಹಣ್ಣು
1 ಚಮಚ ಗರಂ ಮಸಾಲ ಪುಡಿ
ಮಾಡುವ ವಿಧಾನ:
- ಲೆಗ್ಪೀಸ್ ತೊಳೆದು ಚಾಕುವಿನಿಂದ ಗೆರೆ ಎಳೆಯಿರಿ
- ಈಗ ಒಂದು ದೊಡ್ಡ ಬೌಲ್ಗೆ ಗಟ್ಟಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಟಿಕ್ಕಾ ಮಸಾಲ ಪುಡಿ, ಉಪ್ಪು, ಕಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ ಹಾಕಿ ಮಿಕ್ಸ್ ಮಾಡಿ, ಅದರಲ್ಲಿ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ ಫ್ರಿಡ್ಜ್ನಲ್ಲಿ 2 ಗಂಟೆ ಇಡಿ.
- ಈಗ ತವಾದಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ
- ಈಗ ಚಿಕನ್ ಲೆಗ್ ಪೀಸ್ ಹಾಕಿ, ನಂತರ ಅದರ ಮೆಲೆ ಉಳಿದಿರುವ ಮಸಾಲೆ ಹಾಕಿ ಬೇಯಿಸಿ
- ಅದರ ಮೇಲೆ ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಗು ನಿಂಬೆಹಣ್ಣಿನ ತುಂಡುಗಳನ್ನು ಹಾಕಿ ಬೇಯಿಸಿ, ಬೆಂದ ಮೇಲೆ ಉರಿಯಿಂದ ಇಳಿಸಿ ನಿಂಬೆರಸ ಹಾಕಿ ಚಪಾತಿ, ರೊಟ್ಟಿ ಅಥವಾ ಅನ್ನದ ಜೊತೆ ಸವಿಯಲು ಟೆಸ್ಟ್ ಸೂಪರ್ ಆಗಿರುತ್ತದೆ.
ಸಲಹೆ: ಈ ಚಿಕನ್ನಲ್ಲಿ ಮೆಣಸಿನ ಪುಡಿ ಬದಲಿಗೆ ಬರೀ ಹಸಿ
ಮೆಣಸಿನಕಾಯಿ ಪೇಸ್ಟ್ ಬಳಸಬಹುದು.
ಇದನ್ನು ಮೊಸರು ಬಳಸಿ ಮಾಡುವುದರಿಂದ ಚಿಕನ್ ತುಂಬಾನೇ ಟೇಸ್ಟ್ ಆಗಿರುತ್ತದೆ.
ನಿಮಗೆ ಡ್ರೈ ಬೇಕಿದ್ದರೆ ಡ್ರೈಯಾಗಿ ಮಾಡಬಹುದು, ಇಲ್ಲ ಗ್ರೇವಿ ಬೇಕಿದ್ದರೆ
ಗ್ರೇವಿ ರೀತಿ ಬಳಸಬಹುದು.
ಗೋಡಂಬ, ಬಾದಾಮಿ ಪೇಸ್ಟ್ ಕೂಡ ರುಚಿ ಹೆಚ್ಚಿಸುತ್ತದೆ
ನಿಮಗೆ ಸ್ವಲ್ಪ ಗ್ರೇವಿ ರೀತಿ ಬೇಕೆಂದರೆ ಇದನ್ನು ಸೇರಿಸಿದರೆ ತುಂಬಾ
ಚೆನ್ನಾಗಿರುತ್ತದೆ.



Click it and Unblock the Notifications