Just In
Don't Miss
- News
ಐಎಂಐ ಸತ್ಯ ಒಪ್ಪಿಕೊಳ್ಳುತ್ತಿಲ್ಲ; ಕೊರೋನಿಲ್ ಸಮರ್ಥಿಸಿಕೊಂಡ ಪತಂಜಲಿ
- Education
CSIR UGC NET June 2020 Results: ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ?
- Automobiles
ದೆಹಲಿಯಲ್ಲಿ ಹೊಸ ಇವಿ ನೀತಿ ನಂತರ ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆ
- Finance
ನೀರವ್ ಮೋದಿಯವರನ್ನು ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಅನುಮೋದನೆ
- Sports
ಇಂಗ್ಲೆಂಡ್ vs ಭಾರತ: ದಾಖಲೆಗಳ ದಾಖಲೆ ಬರೆದ ಆರ್ ಅಶ್ವಿನ್
- Movies
ನಟ ಹೃತಿಕ್ ರೋಷನ್ಗೆ ಬರಲಿದೆ ಕ್ರೈಂ ಬ್ರ್ಯಾಂಚ್ನಿಂದ ನೊಟೀಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗರಿಗರಿ ಚಿಕನ್ ಕಟ್ಲೆಟ್ ನೀವೊಮ್ಮೆ ಟ್ರೈ ಮಾಡಿ
ಸಂಜೆ ಸಮಯದ ಲಘು ಉಪಹಾರಕ್ಕೆ ಚಿಕನ್ ಕಟ್ಲೆಟ್ ಅತ್ಯುತ್ತಮವಾದ ಆಯ್ಕೆಯಾಗಿದೆ. ಮಾಂಸಹಾರಿ ಪಾಕವಿಧಾನವನ್ನು ಬಯಸುವವರಿಗೆ ಚಿಕನ್ ಕಟ್ಲೆಟ್ ಅದ್ಭುತ ರುಚಿಯನ್ನು ನೀಡುತ್ತದೆ. ಚಿಕನ್ ಕಟ್ಲೆಟ್ ಅನ್ನು ಬೇಕಾದ ಸಮಯಕ್ಕಿಂತ ಮೊದಲೇ ತಯಾರಿಸಿ ಇಟ್ಟುಕೊಳ್ಳಬಹುದು. ಸವಿಯುವ ಸಮಯದಲ್ಲಿ ಒಮ್ಮೆ ಬಿಸಿ ಮಾಡಿಕೊಂಡರೆ ಸಾಕು. ಅದ್ಭುತ ಮಸಾಲೆಗಳೊಂದಿಗೆ ತಯಾರಿಸಲಾಗುವ ಈ ಕಟ್ಲೆಟ್ ಅನ್ನು ಈರುಳ್ಳಿಯೊಂದಿಗೆ ಸವಿದರೆ ನಾಲಿಗೆಯು ಮತ್ತೆ ಮತ್ತೆ ಬೇಕೆಂದು ಚಪ್ಪರಿಸುತ್ತದೆ. ರುಚಿಕರವಾದ ಚಿಕನ್ ಕಟ್ಲೆಟ್ ಅನ್ನು ಮನೆಯಲ್ಲಿ ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು. ನೀವು ನಿಮ್ಮ ಬಿಡುವಿನ ಸಮಯದಲ್ಲಿ ಈ ಪಕವಿಧಾನವನ್ನು ಮಾಡಿ, ನಿಮ್ಮವರಿಗೆ ಸವಿಯಲು ನೀಡಿ.
Recipe By: Shreeraksha
Recipe Type: Non Vegetarian
Serves: 4
-
ಪ್ರಮುಖ ಸಾಮಗ್ರಿಗಳು:
500 ಗ್ರಾಮ್ಸ್ ಬೇಯಿಸಿದ ಕೋಳಿ
3 - ಬೇಯಿಸಿದ ಆಲೂಗಡ್ಡೆ
3 - ಕತ್ತರಿಸಿದ ಈರುಳ್ಳಿ
2 ಚಮಚ ಕತ್ತರಿಸಿದ ಬೆಳ್ಳುಳ್ಳಿ
2 ಚಮಚ ಕತ್ತರಿಸಿದ ಶುಂಠಿ
3 - ಕತ್ತರಿಸಿದ ಹಸಿಮೆಣಸಿನಕಾಯಿ
2 ಚಮಚ ಪುಡಿ ಮಾಡಿದ ಕರಿಮೆಣಸು
3 ಚಮಚ ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಪುಡಿ
3 - ಕತ್ತರಿಸಿದ ಕೆಂಪು ಮೆಣಸು
ಅಗತ್ಯಕ್ಕೆ ತಕ್ಕಷ್ಟು ಚಾಟ್ ಮಸಾಲ
ಅಗತ್ಯಕ್ಕೆ ತಕ್ಕಷ್ಟು ಗರಂ ಮಸಾಲ ಪುಡಿ
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಅಗತ್ಯಕ್ಕೆ ತಕ್ಕಷ್ಟು ಇಂಗು
5 - ಅಗತ್ಯಕ್ಕೆ ತಕ್ಕಷ್ಟು ಬ್ರೆಡ್ ಪೀಸ್ಗಳು
2 - ಮೊಟ್ಟೆ
1 ಮುಷ್ಟಿಯಷ್ಟು
ಅಗತ್ಯಕ್ಕೆ ತಕ್ಕಷ್ಟು ಕರಿಬೇವು
ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ
-
ತಯಾರಿಸುವ ವಿಧಾನ:
- ಕುಕ್ಕರ್ ಪಾತ್ರೆಯಲ್ಲಿ ಮೊದಲೇ ಬೇಯಿಸಿಕೊಂಡ ಚಿಕನ್, ಅರಿಶಿನ ಪುಡಿ, ಮೆಣಸಿನ ಪುಡಿ, ಸ್ವಲ್ಪ ವಿನೆಗರ್ ಹಾಕಿ, 3-4 ಸೀಟಿ ಕೂಗಿಸಿ ಬೇಯಿಸಿಕೊಳ್ಳಿ.
- ಬೇಯಿಸಿಕೊಂಡ ಚಿಕನ್ ಅನ್ನು ಸಣ್ಣದಾಗಿ ಹೆಚ್ಚಿಕೊಂಡು, ಕಿವುಚಿಕೊಳ್ಳಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಬೆರೆಸಿ.
- ದಪ್ಪ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನ ಕಾಯಿ ಉಪ್ಪು ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ, 2-3 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ
ನಂತರ ಈರುಳ್ಳಿ ಸೇರಿಸಿ, 2-3 ನಿಮಿಷಗಳ ಕಾಲ ಹುರಿಯಿರಿ. ಬಳಿಕ ಚಿಕನ್ ಮಸಾಲ, ಮೆಣಸಿನ ಪುಡಿ, ಧನಿಯಾ, ಅರಿಶಿನ ಪುಡಿಯನ್ನು ಸೇರಿಸಿ.
- ಅದೇ ಬಾಣಲೆಗೆ ಕಿವುಚಿಕೊಂಡ ಆಲೂಗಡ್ಡೆ, ಚಿಕನ್ ಮತ್ತು ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ. ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಹೀಗೆ ಮಾಡುವುದರಿಂದ ಮಸಾಲೆಯ ಪದಾರ್ಥಗಳು ಚೆನ್ನಾಗಿ ಬೆರೆತುಕೊಳ್ಳುತ್ತವೆ.
-ಕಟ್ಲೆಟ್ ಮಸಾಲ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಒಂದು ಬೌಲ್ ಅಲ್ಲಿ ಮೊಟ್ಟೆಯನ್ನು ಒಡೆದು ಹಾಕಿ, ಅದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಒಂದು ಬೌಲ್ ಅಲ್ಲಿ ಬ್ರೆಡ್ಗಳನ್ನು ಚುಡಿಯನ್ನಾಗಿ ಮಾಡಿಕೊಳ್ಳಿ. ಕಟ್ಲೆಟ್ ಮಸಾಲದ ಉಂಡೆಯನ್ನು ಮೊಟ್ಟೆಯ ರಸದಲ್ಲಿ ಅದ್ದಿ.- ನಂತರ ಬ್ರೆಡ್ ಪುಡಿಯ ಮೇಲೆ ಹೊರಳಾಡಿಸಿ. ಬಳಿಕ ಅದನ್ನು ಕಟ್ಲೆಟ್ ಆಕಾರದಲ್ಲಿ ತಟ್ಟಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಿದ್ಧಪಡಿಸಿಕೊಂಡ ಕಟ್ಲೆಟ್ ಅನ್ನು ಹಾಕಿ, ಕರಿಯಿರಿ. ಕಟ್ಲೆಟ್ ಎರಡು ಭಾಗದಲ್ಲೂ ಚೆನ್ನಾಗಿ ಬೆಂದು, ಕಂದು ಬಣ್ಣಕ್ಕೆ ಬಂದ ಮೇಲೆ ಎಣ್ಣೆಯಿಂದ ತೆಗೆಯಿರಿ. ಬಿಸಿ ಇರುವಾಗಲೇ ಕಟ್ಲೆಟ್ ಅನ್ನು ಸಾಸ್ ನೊಂದಿಗೆ ಸವಿಯಲು ನೀಡಿ.
- ಬೇಯಿಸಿಕೊಂಡ ಚಿಕನ್ ಅನ್ನು ಸಣ್ಣದಾಗಿ ಹೆಚ್ಚಿಕೊಂಡು, ಕಿವುಚಿಕೊಳ್ಳಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಬೆರೆಸಿ.
- People - 4
- ಎನರ್ಜಿ - 115 ಕ್ಯಾ
- ಕೊಬ್ಬು - 1.5ಗ್ರಾ
- ಪ್ರೋಟೀನ್ - 28ಗ್ರಾ
- ಕಾರ್ಬೋಹೈಡ್ರೇಟ್ - ೦