Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪೌಷ್ಠಿಕವಾದ ಕಡಲೆ-ಎಲೆಕೋಸಿನ ಪಲ್ಯ ಹೀಗೆ ಮಾಡಿ
ತರಕಾರಿ ಹೆಚ್ಚೆಚ್ಚು ಸೇವಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ನಿಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಪಡೆಯಬೇಕೆಂದರೆ ಪ್ರತಿದಿನ ಅತ್ಯುತ್ತಮ ತರಕಾರಿಗಳನ್ನು ಸೇವಿಸಬೇಕು. ಹೆಚ್ಚು ತರಕಾರಿ ಸೇವನೆಗೆ ಅತ್ಯುತ್ತಮವಾದುದ್ದೆಂದರೆ ತರಕಾರಿ ಪಲ್ಯ ಮಾಡುವುದು. ತಿನ್ನಲು ರುಚಿ ಎನಿಸುವ ಪಲ್ಯಗಳು ಆರೋಗ್ಯಕ್ಕೆ ಲಾಭದಾಯಕವೂ ಹೌದು.
ಕಾಳುಗಳು, ತರಕಾರಿ ಸೇವನೆ ಸಾಮಾನ್ಯವಾಗಿ ಮಕ್ಕಳು ಮಾಡುವುದಿಲ್ಲ. ಆದರೆ ಸ್ವಲ್ಪ ಸಿಹಿಸಿಹಿಯಾಗಿ ಅಡುಗೆ ಮಾಡಿದರೆ ಕೆಲವು ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ. ಸ್ವಲ್ಪ ಸಿಹಿಯಾಗಿ ಮಾಡಿದರೆ ರುಚಿ ಅನ್ನಿಸುವ ಸಬ್ಜಿಯೊಂದರ ರೆಸಿಪಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಟೊಮೆಟೋ ಸಾರು ಮಾಡಿದಾಗ ಈ ಪಲ್ಯ ಊಟಕ್ಕೆ ಬೆಸ್ಟ್ ಕಾಂಬಿನೇಷನ್ ಆಗಿರುತ್ತದೆ.

ಹೌದು ಕ್ಯಾಬೇಜ್ ಮತ್ತು ಕಾಬೂಲ್ ಚೆನ್ನಾ ಕಾಳುಗಳು ಅಥವಾ ಕಾಬೂಲ್ ಕಡಲೆಕಾಳು ಬಳಸಿ ಪಲ್ಯ ಮಾಡುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ತಿಳಿಸಿಕೊಡುತ್ತಿದ್ದೇವೆ.

Recipe By: Sushma
Recipe Type: Sabzi
Serves: 3
-
ಬೇಕಾಗುವ ಸಾಮಗ್ರಿಗಳು
ಕೋಸು- ಅರ್ಧ ಕೆಜಿ
ಕಾಬೂಲ್ ಚೆನ್ನಾ ಕಾಳುಗಳು- ಕಾಲು ಕೆಜಿ
ಹಸಿಮೆಣಸು- 4 ರಿಂದ 5
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ- ಅರ್ಧ ಟೀ ಸ್ಪೂನ್
ಉದ್ದಿನ ಬೇಳೆ- ಒಂದು ಟೀ ಸ್ಪೂನ್
ಬೆಲ್ಲ- ಎರಡು ಸ್ಪೂನ್
ಕರಿಬೇವಿನ ಸೊಪ್ಪು- 10 ರಿಂದ 12 ಎಸಳು
ಅರಿಶಿನ- ಚಿಟಿಕೆ
ಅಡುಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ-ನಾಲ್ಕು ಸ್ಪೂನ್
ತೆಂಗಿನ ತುರಿ- ಒಂದು ಸಣ್ಣ ಕಪ್
-
ಮಾಡುವ ವಿಧಾನ
. ಕಾಬೂಲ್ ಚೆನ್ನಾ ಕಾಳುಗಳನ್ನು 12 ತಾಸು ನೀರಿನಲ್ಲಿ ನೆನೆಸಿಡಿ.
. ಮೊದಲಿಗೆ ಚೆನ್ನಾ ಕಾಳುಗಳಿಗೆ ಎರಡು ಲೋಟ ನೀರು ಹಾಕಿ, ಚಿಟಿಕೆ ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ. ಮೂರು ವಿಷಿಲ್ ಬಂದರೆ ಒಳಿತು.
. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.
. ಕೆಂಬಣ್ಣಕ್ಕೆ ಬಂದಾಗ ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸು ಸೇರಿಸಿ.ಸ್ವಲ್ಪ ಹುರಿದ ನಂತರ ಸಣ್ಣದಾಗಿ ಹೆಚ್ಚಿದ ಕೋಸಿನ ಹೋಳುಗಳನ್ನು ಹಾಕಿ.
. ಕೋಸನ್ನು ಹೆಚ್ಚಿದ ನಂತರ ಉಪ್ಪು ಮತ್ತು ಅರಿಶಿನ ಹಾಕಿ ತೊಳೆಯಿರಿ. ನಂತರ ಬಿಸಿನೀರಿನಲ್ಲಿ ಹಾಕಿ ತೊಳೆದುಕೊಂಡರೆ ವಾಸನೆ ಕಡಿಮೆಯಾಗುತ್ತದೆ.
. ಕೋಸು ಸ್ವಲ್ಪ ಬೆಂದ ನಂತರ ಕುಕ್ಕರ್ ನಲ್ಲಿ ಬೇಯಿಸಿದ ಕಾಳುಗಳನ್ನು ಸೇರಿಸಿ ಮಿಕ್ಸ್ ಮಾಡಿ.
. ನಂತರ ರುಚಿಗೆ ಅಗತ್ಯವಿರುವಷ್ಟು ಉಪ್ಪು ಹಾಕಿ,ಅರಿಶಿನ ಹಾಕಿ, ಬೆಲ್ಲ ಹಾಕಿ ನೀರು ಆರುವವರೆಗೆ ಕಾಯಿರಿ.
. ಕೊನೆಯಲ್ಲಿ ತೆಂಗಿನ ತುರಿಯಿಂದ ಅಲಂಕರಿಸಿ ಕೈಯಾಡಿದರೆ ರುಚಿರುಚಿಯಾದ ಕ್ಯಾಬೇಜ್-ಕಾಬೂಲ್ ಚೆನ್ನಾ ಪಲ್ಯ ರೆಸಿಪಿ ಸಿದ್ದವಾಗುತ್ತದೆ.
- ಮಕ್ಕಳಿಗೆ ಹೆಚ್ಚು ಇಷ್ಟವಾಗುವ ರೆಸಿಪಿ ಇದು. ಸಿಹಿಯಾಗಿರುವುದರಿಂದಾಗಿ ಚಪಾತಿ, ಪೂರಿಗೂ ಮ್ಯಾಚ್ ಆಗುತ್ತದೆ. ಟೊಮೆಟೋ ಸಾರಿನ ಅನ್ನಕ್ಕೆ ಈ ಪಲ್ಯ ಸೈಡ್ ಡಿಶ್ ಇದ್ದಂತೆ. ಕ್ಯಾಬೇಜ್ ಅಸಿಡಿಟಿ ಸಮಸ್ಯೆ ಇರುವವರಿಗೆ ಬಹಳ ಒಳ್ಳೆಯದು. ಇದರಲ್ಲರುವ ನ್ಯೂಟ್ರಿಯೆಂಟ್ಸ್ ಗಳು ನಿಮ್ಮ ಆರೋಗ್ಯ ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಕಾಬೂಲ್ ಕಡಲೆ ಹೆಚ್ಚುವರಿ ಸಮಸ್ಯೆ ಮಾಡುವ ಸಾಧ್ಯತೆ ಇದೆ.
- ಕೊಬ್ಬು- - 7 ಗ್ರಾಂ
- ಪೊಟಾಷಿಯಂ - - 170 ಮಿಲಿಗ್ರಾಂ
- ಕಾರ್ಬೋಹೈಡ್ರೇಟ್ – - 6 ಗ್ರಾಂ
- ಸಕ್ಕರೆ- - 10.7 ಗ್ರಾಂ
- ಪ್ರೋಟೀನ್ - - 1.3 ಗ್ರಾಂ



Click it and Unblock the Notifications
