Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ವಾರೆವ್ಹಾ! ಕ್ಯಾಬೇಜ್ ರಾಯಿತಾ ಬೊಂಬಾಟ್
ಅಡುಗೆ ಅಂದ್ರೆ ಅದೊಂದು ಪ್ಯಾಷನ್ ಇದ್ದ ಹಾಗೆ. ರುಚಿರುಚಿಯಾಗಿ ತಿನ್ನಬೇಕು
ಅನ್ನೋದು ಪ್ರತಿಯೊಬ್ಬನ ಬಯಕೆ ಆಗಿರುತ್ತದೆ. ಆದರೆ ಸಮಯದ ಅಭಾವದಿಂದಾಗಿ ಹೊಟೆಲ್
ಫುಡ್ ಗಳಿಗೆ ಮೊರೆ ಹೋಗಲಾಗುತ್ತದೆ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರುಚಿರುಚಿ
ಅಡುಗೆಗಳ ಅಗತ್ಯತೆ ಪ್ರತಿಯೊಬ್ಬರಿಗೂ ಇದ್ದೇ ಇದೆ. ಹಾಗಾಗಿ ಜಟಾಪಟ್ ಅಂತ
ತಯಾರಿಸಬಹುದಾದ ರೆಸಿಪಿಯೊಂದನ್ನ ನಾವಿಲ್ಲಿ ನಿಮಗೆ
ತಿಳಿಸಿಕೊಡುತ್ತಿದ್ದೇವೆ.

ಅದರಲ್ಲೂ ಬ್ಯಾಚುಲರ್ ಲೈಫ್ ನಲ್ಲಿರುವವರಿಗೆ ಅಡುಗೆ ಒಂದು ಸವಾಲೇ ಸರಿ. ಅಂತವರು ಟ್ರೈ ಮಾಡಬಹುದಾದ ಸುಲಭದ ರೆಸಿಪಿ ಇದು. ಹೌದು ಅದುವೇ ಕ್ಯಾಬೇಜ್ ರಾಯಿತಾ.

ಸಲಾಡ್ ನಂತೆ ಸೇವಿಸಲೂ ಆಗುವ ಮತ್ತು ಅನ್ನದ ಜೊತೆಗೆ ಕಲಸಿ ತಿನ್ನಬಹುದಾದ ಸ್ಪೆಷಲ್ ರೆಸಿಪಿ ಇದು. ಎಲ್ಲಕ್ಕಿಂತ ಮುಖ್ಯವಾಗಿ ಬಹುಬೇಗನೆ ತಯಾರಿಸಬಹುದಾದ ಅಡುಗೆ ಕ್ಯಾಬೇಜ್ ರಾಯಿತಾ. ಹಾಗಾದ್ರೆ ಇದನ್ನು ತಯಾರಿಸುವ ಬಗೆ ಹೇಗೆ ತಿಳಿಯೋಣ ಬನ್ನಿ.

Recipe By: Sushma
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
ಕ್ಯಾಬೇಜ್- ಕಾಲ್ ಕೆಜಿ
ಈರುಳ್ಳಿ- ಮಧ್ಯಮ ಗಾತ್ರದ ಒಂದು
ಹಸಿಮೆಣಸು - ಎರಡು
ಕರಿಬೇವು- ಹತ್ತು ಎಸಳು
ಜೀರಿಗೆಪುಡಿ - ಅರ್ಧ ಸ್ಪೂನ್
ಅಡುಗೆ ಎಣ್ಣೆ - ಎರಡು ಸ್ಪೂನ್
ಕೆಂಪು ಮೆಣಸು - ಎರಡು
ಸಾಸಿವೆ- ಅರ್ಧ ಟೀ ಸ್ಪೂನ್
ಉದ್ದಿನ ಬೇಳೆ - ಒಂದು ಟೀ ಸ್ಪೂನ್
ಇಂಗು- ಕಡಲೆಗಾತ್ರದಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಮೊಸರು ಅಥವಾ ಮಜ್ಜಿಗೆ- ಅರ್ಧ ಲೀಟರ್
-
ಮಾಡುವ ವಿಧಾನ
. ಕ್ಯಾಬೇಜ್ ಮತ್ತು ಈರುಳ್ಳಿ, ಹಸಿಮೆಣಸನ್ನು ಎಷ್ಟು ಸಣ್ಣದಾಗುತ್ತೋ ಅಷ್ಟು ಸಣ್ಣದಾಗಿ ಹೆಚ್ಚಿಕೊಂಡು ಮಿಕ್ಸ್ ಮಾಡಿಕೊಳ್ಳಿ.
. ಇದಕ್ಕೆ ಅರ್ಧ ಲೀಟರ್ ಮೊಸರು ಅಥವಾ ಮಜ್ಜಿಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
. ಇದಕ್ಕೆ ಜೀರಿಗೆಪುಡಿಯನ್ನು ಸೇರಿಸಿ.
. ಇದೀಗ ಒಗ್ಗರಣೆ ಮಾಡಬೇಕು. ಒಂದೆರಡು ಸ್ಪೂನ್ ಅಡುಗೆ ಎಣ್ಣೆಗೆ ಮೊದಲಿಗೆ ಉದ್ದಿನ ಬೇಳೆ ಹಾಕಿ ಕೆಂಬಣ್ಣಕ್ಕೆ ಬಂದಾಗ ಸಾಸಿವೆ ಹಾಕಿ ಚಟಿಪಟಿ ಮಾಡಿ. ನಂತರ ಕರಿವೇವಿನ ಸೊಪ್ಪು ಮತ್ತು ಕೆಂಪು ಮೆಣಸು ಸೇರಿಸಿ ಹುರಿಯಿರಿ. ನಂತರ ಇಂಗಿನ ಪುಡಿ ಹಾಕಿ..ಇದನ್ನು ರಾಯಿತಕ್ಕೆ ಹಾಕಿ ಒಗ್ಗರಣೆ ಮಾಡಿ.
- ಹಸಿ ತರಕಾರಿ ಸೇವನೆ ಯಾವಾಗಲೂ ಕೂಡ ದೇಹಕ್ಕೆ ಬಹಳ ಹಿತವೆನಿಸುತ್ತದೆ. ಆಗಾಗ ಸಲಾಡ್ ಸೇವನೆ ನಿಮ್ಮ ದೇಹಕ್ಕೆ ಹೆಚ್ಚಿನ ದೃಢತೆಯನ್ನು ನೀಡುತ್ತದೆ. ಈ ರಾಯಿತಾ ರೆಸಿಡ್ ಸಲಾಡ್ ಎಂದೂ ಕೂಡ ಹೇಳಬಹುದು. ಅಸಿಡಿಟಿ ಸಮಸ್ಯೆ ಇರುಔರು ಕೋಸು ಸೇವಿಸುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ. ಕಡಿಮೆ ಕ್ಯಾಲೋರಿ ಇರುವ ಆಹಾರ ಪದಾರ್ಥವಾಗಿರುವುದರಿಂದಾಗಿ ದೇಹದ ಬೊಜ್ಜು ಕರಗಿಸುವಿಕೆಗೂ ಕೂಡ ನೆರವು ನೀಡುತ್ತದೆ. ಅಷ್ಟೇ ಅಲ್ಲ, ಕ್ಯಾಬೇಜ್ ಹೃದಯದ ಆರೋಗ್ಯ ಕಾಪಾಡುತ್ತದೆ.ಜೀರ್ಣಕ್ರಿಯೆ ಹೆಚ್ಚಿಸುವುದಕ್ಕೂ ಇದು ಸಹಕಾರಿ.
- ಕ್ಯಾಲೊರಿ - 25
- ಕೊಬ್ಬಿನಾಂಶ - 0.1ಗ್ರಾಂ
- ಸಕ್ಕರೆ - 3.2 ಗ್ರಾಂ
- ಸೋಡಿಯಂ - 18mg
- ಕ್ಯಾಲ್ಸಿಯಂ - 4%
- ಕಾರ್ಬೊಹೈಡ್ರೇಟ್ - 6ಗ್ರಾಂ



Click it and Unblock the Notifications
