Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಜೀರ್ಣಕ್ರಿಯೆಗೆ ಉತ್ತಮವಾದುದ್ದು, ಈ ಕ್ಯಾಬೇಜ್ ದೋಸೆ ರೆಸಿಪಿ
ಸಾಮಾನ್ಯವಾಗಿ ಎಲೆಕೋಸು ಅಥವಾ ಕ್ಯಾಬೇಜನ್ನು ಪಲ್ಯ, ಪಕೋಡಾ ಮಾಡಲು ಬಳಕೆ ಮಾಡುತ್ತೇವೆ. ಆದರೆ ಇದರಿಂದ ದೋಸೆ ತಯಾರಿಸುವವರ ಸಂಖ್ಯೆ ತೀರಾ ಕಡಿಮೆ. ಅದಕ್ಕಾಗಿ ನಾವಿಂದ ಕ್ಯಾಬೇಜ್ ನಿಂದ ಬಿಸಿಬಿಸಿ ದೋಸೆ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಲಿದ್ದೇವೆ. ಕ್ಯಾಬೇಜ್ ನಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಉತ್ತಮವಾಗಿರುತ್ತದೆ. ಆದ್ದರಿಂದ ಇದರ ದೋಸೆಯನ್ನು ನಿಮ್ಮ ಬೆಳಗಿನ ಉಪಹಾರದಲ್ಲಿ ಸೇರಿಸಿಕೊಳ್ಳುವುದರಿಂದ, ನಿಮಗೆ ಸಾಕಷ್ಟು ಉತ್ತಮವಾದ ಪೋಷಕಾಂಶಗಳು ಲಭ್ಯವಾಗುತ್ತವೆ. ಹಾಗಾದ್ರೆ ಬನ್ನಿ ಕ್ಯಾಬೇಜ್ ದೋಸೆ ಮಾಡುವ ವಿಧಾನವನ್ನು ನೋಡಿಕೊಂಡು ಬರೋಣ.

Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಸಾಮಾಗ್ರಿಗಳು:
1 ಕಪ್ ಅಕ್ಕಿ
2 ಚಮಚ ಉದ್ದಿನ ಬೇಳೆ
½ ಟೀಸ್ಪೂನ್ ಮೆಂತ್ಯೆ
10 ಒಣ ಮೆಣಸಿನಕಾಯಿ
1 ಕಪ್ ತೆಂಗಿನಕಾಯಿ
2 ಟೀಸ್ಪೂನ್ ಕೊತ್ತಂಬರಿ ಬೀಜ
1 ಚಮಚ ಜೀರಿಗೆ
¼ ಕಪ್ ಬೆಲ್ಲ
3 ಚಮಚ ಹುಣಸೆಹಣ್ಣಿನ ತಿರುಳು
ಅರ್ಧ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಉಪ್ಪು
3 ಕಪ್ ಎಲೆಕೋಸು (ನುಣ್ಣಗೆ ಕತ್ತರಿಸಿದ)
1 ಕಪ್ ನೀರು
-
ತಯಾರಿಸುವ ವಿಧಾನ:
ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ, 2 ಟೀಸ್ಪೂನ್ ಉದ್ದಿನ ಬೇಳೆ ಮತ್ತು ½ ಟೀಸ್ಪೂನ್ ಮೆಂತ್ಯೆ ತೆಗೆದುಕೊಂಡು, ಚೆನ್ನಾಗಿ ತೊಳೆದು, 10 ಒಣ ಮೆಣಸಿನಕಾಯಿ ಸೇರಿಸಿ, 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
5 ಗಂಟೆಗಳ ನಂತರ, ಮೆಣಸಿನಕಾಯಿ ಚೆನ್ನಾಗಿ ನೆನೆದಿರುತ್ತದೆ.
ಪೇಸ್ಟ್ ತಯಾರಿಸಲು, ಈಗ ನೆನೆಸಿದ ಮೆಣಸಿನಕಾಯಿಯನ್ನು ಮಿಕ್ಸಿ ಜಾರ್ ಗೆ ಹಾಕಿ, 1 ಕಪ್ ತೆಂಗಿನಕಾಯಿ, 2 ಚಮಚ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, ¼ ಕಪ್ ಬೆಲ್ಲ, 3 ಸ್ವಲ್ಪ ಹುಣಸೆಹಣ್ಣಿನ ತಿರುಳು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ ನೈಸ್ ಆಗಿ ಪೇಸ್ಟ್ ಮಾಡಿ.
ಮಸಾಲಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಪಕ್ಕಕ್ಕೆ ಇಡಿ.
ಅದೇ ಮಿಕ್ಸಿಗೆ ನೆನೆಸಿದ ಅಕ್ಕಿಯನ್ನು ಹಾಕಿ, ಚೆನ್ನಾಗಿ ಪೇಸ್ಟ್ ಮಾಡಿ, ಅಕ್ಕಿ ಹಿಟ್ಟನ್ನು ಮಸಾಲೆಯ ಪೇಸ್ಟ್‌ನ ಅದೇ ಬಟ್ಟಲಿಗೆ ಹಾಕಿ.
ಈಗ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಗಮನಿಸಿ, ಯಾವಾಗಲೂ ಅಕ್ಕಿ ಮತ್ತು ಮಸಾಲೆಯನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ, ಇಲ್ಲದಿದ್ದರೆ ಮಸಾಲೆ ಸರಿಯಾಗಿ ಗ್ರೈಂಡ್ ಆಗುವುದಿಲ್ಲ.
ಮುಂದೆ, ಈ ಮಿಶ್ರಣಕ್ಕೆ 3 ಕಪ್ ಎಲೆಕೋಸು ಅಥವಾ ಕ್ಯಾಬೇಜ್ ಮತ್ತು 1 ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ದೋಸೆ ಹಿಟ್ಟಿನ ಹದಕ್ಕೆ ರೆಡಿಮಾಡಿಕೊಳ್ಳಿ.
ಪ್ಯಾನ್‌ಗೆ ಎಣ್ಣೆ ಹಾಕಿ, ಹಿಟ್ಟನ್ನು ಸುರಿದು, ನಿಧಾನವಾಗಿ ಹರಡಿ, ಅದರ ಮೇಲೆ ½ ಟೀಸ್ಪೂನ್ ತೆಂಗಿನ ಎಣ್ಣೆಯನ್ನು ಹಾಕಿ.
ದೋಸೆ ಚೆನ್ನಾಗಿ ಬೇಯುವವರೆಗೆ ಮುಚ್ಚಿಟ್ಟು ಬೇಯಿಸಿ. ಒಂದು ನಿಮಿಷದ ನಂತರ ತಿರುಗಿಸಿ ಹಾಕಿ, ಇನ್ನೊಂದು ಬದಿಯಲ್ಲಿ ಬೇಯಿಸಿ. ದೋಸೆ ಸ್ವಲ್ಪ ದಪ್ಪ ಮತ್ತು ಎಲೆಕೋಸು ಹಸಿ ಆಗಿರುವುದರಿಂದ ಎರಡೂ ಬದಿ ಬೇಯಿಸಬೇಕಾಗುತ್ತದೆ.
ಈಗ ಸವಿಯಲು ಬಿಸಿಬಿಸಿ ಕ್ಯಾಬೇಜ್ ದೋಸೆ ಸವಿಯಲು ಸಿದ್ಧ.
- People - 2
- ಕ್ಯಾಲೋರಿಗಳು - 743 ಕೆ.ಸಿ.ಎಲ್
- ಕೊಬ್ಬು - 16 ಗ್ರಾಂ
- ಪ್ರೋಟೀನ್ - 15 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 139 ಗ್ರಾಂ
- ಫೈಬರ್ - 14 ಗ್ರಾಂ



Click it and Unblock the Notifications
