Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಈ ಸುಟ್ಟ ಈರುಳ್ಳಿ ಚಟ್ನಿ ಜೊತೆಗಿದ್ರೆ ಇಡ್ಲಿ- ದೋಸೆ ತುಸು ಹೆಚ್ಚೇ ಹೊಟ್ಟೆ ಸೇರುತ್ತೆ!
ಸಾಮಾನ್ಯವಾಗಿ ಬೆಳಿಗ್ಗೆ ಇಡ್ಲಿ, ದೋಸೆ ಸವಿಯಲು ಜೊತೆಗೆ ಚಟ್ನಿ ಇರಲೇಬೇಕು, ಅಷ್ಟೇ ಅಲ್ಲ, ಮಧ್ಯಾಹ್ನದ ಬಿಸಿಬಿಸಿ ಗಂಜಿ ಊಟಕ್ಕೂ ಚಟ್ನಿ ಬೆಸ್ಟ್ ಸೈಡ್ ಡಿಶ್. ಆದರೆ ಪ್ರತಿದಿನ ಒಂದೇ ರೀತಿಯ ಚಟ್ನಿ ಯಾರಿಗಾದ್ರೂ ಬೇಜಾರು ತರದೇ ಇರದು. ದಿನಾಲೂ ಕಾಯಿ ಚಟ್ನಿ, ಶೇಂಗಾ ಚಟ್ನಿ ತಿಂದು ಬೋರಾಗಿದ್ರೆ ಈ ಸುಟ್ಟ ಈರುಳ್ಳಿ ಚಟ್ನಿ ಒಮ್ಮೆ ಪ್ರಯತ್ನಿಸಿ. ಸುಟ್ಟ ಬದನೆಕಾಯಿ ಚಟ್ನಿ ಎಷ್ಟು ರುಚಿಯಾಗಿರುತ್ತೋ ಅಷ್ಟೇ, ಟೇಸ್ಟ್ ಈ ಸುಟ್ಟ ಈರುಳ್ಳಿ ಬೆಳ್ಳುಳ್ಳಿ ಚಟ್ನಿ ಕೂಡ ನೀಡುತ್ತೆ. ಹಾಗಾದ್ರೆ ಇನ್ಯಾಕೆ ತಡ ಈ ರುಚಿಕರವಾದ ಚಟ್ನಿ ಮಾಡೋದು ಹೇಗೆ ನೋಡ್ಕೊಂಡು ಬರೋಣ.

Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಪದಾರ್ಥಗಳು :
ಹುರಿಯಲು:
10 ಸಣ್ಣ ಈರುಳ್ಳಿ
1 ಸಣ್ಣ ಬೆಳ್ಳುಳ್ಳಿ
2 ಟೀಸ್ಪೂನ್ ಎಣ್ಣೆ
1 ಟೀಸ್ಪೂನ್ ಉದ್ದಿನ ಬೇಳೆ
1 ಚಮಚ ಕಡೆಲೆ ಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ
4 ಒಣಗಮೆಣಸಿನಕಾಯಿ
ಕರಿಬೇವಿನ ಎಲೆಗಳು
ಸಣ್ಣ ತುಂಡು ಹುಣಸೆಹಣ್ಣು
½ ಟೀಸ್ಪೂನ್ ಉಪ್ಪು
¾ ಕಪ್ ನೀರು
1 ಟೀಸ್ಪೂನ್ ಸಾಸಿವೆ
ಪಿಂಚ್ ಹಿಂಗ್
¼ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಮೆಣಸಿನ ಪುಡಿ
-
ತಯಾರಿಸುವ ವಿಧಾನ :
ಮೊದಲನೆಯದಾಗಿ, ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ.
ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ.
ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.
ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ½ ಟೀಸ್ಪೂನ್ ಉಪ್ಪು ಮತ್ತು ¾ ಕಪ್ ನೀರು ಸೇರಿಸಿ.
ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
ಈಗ ಒಗ್ಗರಣೆ ತಯಾರಿಸಲು, 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಒಣಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು ಮತ್ತು ಚಿಟಿಕೆ ಹಿಂಗನ್ನು ಹಾಕಿ, ಜೊತೆಗೆ, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಸೇರಿಸಿ ಒಂದು ನಿಮಿಷ ಬೇಯಿಸಿ. ಇದಕ್ಕೆ
ತಯಾರಾದ ಈರುಳ್ಳಿ-ಬೆಳ್ಳುಳ್ಳಿ ಪೇಸ್ಟ್ ಸುರಿಯಿರಿ ಮತ್ತು ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.
ಮುಂದೆ, ½ ಕಪ್ ನೀರು ಸೇರಿಸಿ ಮತ್ತು ಅಗತ್ಯವಿರುವಂತೆ ಸ್ಥಿರತೆಯನ್ನು ತಯಾರಿಸಿ, ಚಟ್ನಿಯಿಂದ ಎಣ್ಣೆ ಬೇರ್ಪಡುವವರೆಗೆ ಬೇಯಿಸಿದ್ರೆ, ಸುಟ್ಟ ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ಧ.
- People - 2
- ಕ್ಯಾಲೋರಿಗಳು: - 113 ಕ್ಯಾ
- ಕೊಬ್ಬು: - 9 ಗ್ರಾಂ
- ಪ್ರೋಟೀನ್: - 2 ಗ್ರಾಂ
- ಕಾರ್ಬೋಹೈಡ್ರೇಟ್ಗಳು: - 6 ಗ್ರಾಂ



Click it and Unblock the Notifications
