Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಗರಿ-ಗರಿಯಾದ ಟೊಮೆಟೊ ದೋಸೆ
ದೋಸೆ ದಕ್ಷಿಣ ಭಾರತದ ಫೇಮಸ್ ತಿಂಡಿಗಳಲ್ಲಿ ಒಂದಾಗಿದೆ. ದೋಸೆಯಲ್ಲೂ ನೂರಾರು ತರದ ದೋಸೆಗಳನ್ನು ಮಾಡಬಹುದು, ಆದ್ದರಿಂದ ದೋಸೆ ಪ್ರಿಯರಿಗೆ ದೋಸೆ ಯಾವತ್ತೂ ಬೋರಾಗುವುದಿಲ್ಲ. ದೋಸೆಯ ರುಚಿ ಇರುವುದು ಅದಕ್ಕೆ ಬಳಸುವ ಪದಾರ್ಥಗಳಲ್ಲಿ ಹಾಗೂ ಹಿಟ್ಟಿನ ಹದದಲ್ಲಿ. ಇದುವರೆಗೆ ಟೊಮೆಟೊ ದೋಸೆ ಮಾಡಿರದಿದ್ದರೆ ರೆಸಿಪಿ ನೋಡಿ ಇಲ್ಲಿದೆ:
ಟೊಮೆಟೊ ದೋಸೆಯ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
* ದೋಸೆ ಹಿಟ್ಟು 2 ಕಪ್
* ಟೊಮೆಟೊ 2
* ಹಸಿ ಮೆಣಸು 3
* ಜೀರಿಗೆ 1 ಚಮಚ
* 1 ಚಿಕ್ಕ ಪೀಸ್ ಶುಂಠಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ
* ಮೊದಲು ದೋಸೆ ಹಿಟ್ಟು ರೆಡಿ ಮಾಡಿ ( 1 ಗ್ಲಾಸ್ ಅಕ್ಕಿ ಮತ್ತು 1/4 ಗ್ಲಾಸ್ ಗಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆಯನ್ನು ನೀರಿನಲ್ಲಿ 4-5 ಗಂಟೆಗಳ ನೆನೆ ಹಾಕಿ ನಂತರ ರುಬ್ಬಿ 8-9 ಗಂಟೆಗಳ ಕಾಲ ಇಡಿ(ರಾತ್ರಿ ರುಬ್ಬಿಟ್ಟರೆ ಬೆಳಗ್ಗೆ ದೋಸೆಗೆ ಹಿಟ್ಟು ರೆಡಿಯಾಗುವುದು).
* ಬೆಳಗ್ಗೆ ದೋಸೆ ಮಾಡುವ ಅರ್ಧ ಗಂಟೆ ಮೊದಲು ಟೊಮೆಟೊ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಹಾಕಿ ಗಟ್ಟಿಯಾಗಿ ರುಬ್ಬಿ, ಅದನ್ನು ದೋಸೆ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ.
* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ದೋಸೆ ಹುಯ್ಯಿರಿ.
ರೆಡಿಯಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ರುಚಿಯಾಗಿರುತ್ತದೆ.



Click it and Unblock the Notifications

