Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗಿನ ಬ್ರೇಕ್‌ಫಾಸ್ಟ್‌ಗೆ ತಯಾರಿಸಿ ಸ್ಪೆಶಲ್ ಬ್ರೆಡ್ ಉಪ್ಪಿಟ್ಟು
ಬೆಳಗ್ಗೆ ತಿಂಡಿ ಮಾಡಲು ಸಮಯವಿಲ್ಲದಿದ್ದಾಗ ಸುಲಭದಲ್ಲಿ ತಯಾರಿಸಬಹುದೆಂದು ಉಪ್ಪಿಟ್ಟು ಮಾಡಿ ಬಿಡುತ್ತೇವೆ ಅಲ್ವಾ? ರವೆ ಉಪ್ಪಿಟ್ಟು, ಜೋಳದ ಉಪ್ಪಿಟ್ಟು, ಬ್ರೆಡ್ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು ಹೀಗೆ ಅನೇಕ ಬಗೆಯ ಉಪ್ಪಿಟ್ಟುಗಳನ್ನು ಮಾಡಲು ನಿಮಗೆ ಗೊತ್ತಿರಬಹುದು, ಆದರೆ ಇನ್ನೊಮ್ಮೆ ಉಪ್ಪಿಟ್ಟು ಮಾಡುವಾಗ ಬ್ರೆಡ್ , ರವೆ ಹಾಗೂ ಸ್ವಲ್ಪ ತರಕಾರಿಗಳನ್ನು ಹಾಕಿ ಉಪ್ಪಿಟ್ಟು ತಯಾರಿಸಿ ನೋಡಿ , ಈ ಹೊಸ ರುಚಿ ಖಂಡಿತ ನಿಮಗೆ ಇಷ್ಟವಾಗುವುದು:
ಸ್ವಾದಿಷ್ಟ ಬ್ರೇಕ್‌ಫಾಸ್ಟ್‌ಗಾಗಿ ಸೇಮಿಯಾ ಉಪ್ಮಾ ರೆಸಿಪಿ
ಸ್ಪೆಶಲ್ ಬ್ರೆಡ್ ಉಪ್ಪಿಟ್ಟು ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ಚಿಕ್ಕ ರವೆ 1 ಕಪ್
* ಈರುಳ್ಳಿ 2
* ಕ್ಯಾರೆಟ್ 2
* ಕ್ಯಾಪ್ಸಿಕಂ 1
* ಹಸಿಮೆಣಸಿನಕಾಯಿ 2-4
* ಬಟಾಣಿ ಕಾಲು ಕಪ್
* ಟೊಮೆಟೊ 2
* ಬ್ರೆಡ್ ತುಂಡುಗಳು 8-10
* ಸಾಸಿವೆ 1 ಚಮಚ
* ಜೀರಿಗೆ 1 ಚಮಚ
* ಬೇಳೆ 1 ಚಮಚ (ಪಾಯಸ ಮಾಡುವ ಬೇಳೆ)
* ಅರಿಶಿಣ ಪುಡಿ ಕಾಲು ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಸ್ವಲ್ಪ ಕರಿಬೇವಿನ ಎಲೆ
*ನೀರು
* ಕೊತ್ತಂಬರಿ ಸೊಪ್ಪು
ಚುಮುಚುಮು ಹವೆಗೆ ಬಿಸಿ ಬಿಸಿ ಎಗ್ ಬರ್ಗರ್!
ತಯಾರಿಸುವ ವಿಧಾನ:
*ರವೆಯನ್ನು ಕಂದು ಬಣ್ಣ ಬರುವವರೆಗೆ ರೋಸ್ಟ್ ಮಾಡಿ ಬದಿಯಲ್ಲಿಡಬೇಕು. ಬ್ರೆಡ್ ತುಂಡುಗಳನ್ನು ರೋಸ್ಟ್ ಮಾಡಬೇಕು.
*ಇನ್ನು ಉಪ್ಪಿಟ್ಟು ಮಾಡುವ ಪಾತ್ರೆಯನ್ನು ಉರಿಯಲ್ಲಿಟ್ಟು, ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಜೀರಿಗ, ಕರಿಬೇವಿನ ಎಲೆ, ಕಡಲೆ ಹಾಕಿ ಕಡಲೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
*ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಬೇಕು. ನಂತರ ಟೊಮೆಟೊ, ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ಈಗ ಬಟಾಣಿ ಹಾಕಿ ಒಂದು ನಿಮಿಷ ಹುರಿದು ನೀರು ಹಾಕಿ, ನೀರಿಗೆ ಉಪ್ಪು ಹಾಕಿ ಕುದಿಸಬೇಕು.
*ಈಗ ಹುರಿದ ರವೆಯನ್ನು ಹಾಕಿ ಚೆನ್ನಾಗಿ ಸೌಟ್ ನಿಂದ ತಿರುಗಿಸಿ ಬೇಯಿಸಬೇಕು. ರವೆ ಮುಕ್ಕಾಲು ಭಾಗ ಬೆಂದಾಗ ರೋಸ್ಟ್ ಮಾಡಿದ ಬ್ರೆಡ್ ತುಂಡುಗಳನ್ನು ಹಾಕಿ ಒಮ್ಮೆ ಸೌಟ್ ನಿಂದ ತಿರುಗಿಸಿ ಬೇಯಿಸಬೇಕು, ಉಪ್ಪಿಟ್ಟು ಬೆಂದ ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಂಕರಿಸಿದರೆ ರುಚಿಕವಾದ ಬ್ರೆಡ್ ಮಿಶ್ರಿತ ರವೆ ಉಪ್ಪಿಟ್ಟು ರೆಡಿ.



Click it and Unblock the Notifications
