Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪುಳಿಯೋಗರೆ ಗೊಜ್ಜು ಮಾಡಲು ಸಜ್ಜಾಗಿ
ಪುಳಿಯೋಗರೆ ಮಾಡುವುದರಲ್ಲಿ ನಾವೆಲ್ಲರೂ ನಿಸ್ಸೀಮರು. ಅಂಗಡಿಯಿಂದ ಎಂಟಿಆರ್, ಅಯ್ಯಂಗಾರ್ ಪುಳಿಯೋಗರೆ ಪೌಡರ್ ತಂದು ಒಗ್ಗರಣೆ ಹಾಕಿ ಮಿಕ್ಸ್ ಮಾಡಿ ಜಟ್ ಪಟ್ ಆಗಿ ಮಾಡಿ ಮುಗಿಸ್ತಿವಿ. ಆದ್ರೆ ಹೆಚ್ಚಿನವರಿಗೆ ಗೊತ್ತಿಲ್ಲ. ಪುಳಿಯೋಗರೆ ಗೊಜ್ಜು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಂತ.
ಪುಳಿಯೋಗರೆ ಗೊಜ್ಜು ತಯಾರಿಸಲು ಬೇಕಾಗುವ ಸಾಮಾನುಗಳು
* ಮೆಣಸು 10 ಗ್ರಾಂ
* ಕೊತ್ತಂಬರಿ ಬೀಜ: 100 ಗ್ರಾಂ
* ಒಣಮೆಣಸಿನ ಕಾಯಿ 15
* ಎಳ್ಳು: 25 ಗ್ರಾಂ
* ಅರಸಿನ ಪುಡಿ: ಒಂದು ಚಮಚ
* ಬೆಲ್ಲ: ಎರಡು ಅಚ್ಚು
* ಸ್ವಲ್ಪ ಇಂಗು
* ಕಾಲು ಕೇಜಿ ಹುಣಸೆ ಹಣ್ಣು
* ಕಡಲೆ ಎಣ್ಣೆ 150 ಗ್ರಾಂ
* ಕರಿಬೇವು, ಸಾಸಿವೆ, ಮೆಂತ್ಯ, ಚಕ್ಕೆ.
ಪುಳಿಯೋಗರೆ ಗೊಜ್ಜು ಮಾಡೋದು ಹೀಗೆ
* ಮೆಣಸು, ಕೊತ್ತಂಬರಿ ಬೀಜ, ಒಣಮೆಣಸಿನಕಾಯಿ, ಎಳ್ಳು, ಜೀರಿಗೆ, ಸಾಸಿವೆ, ಚಕ್ಕೆ, ಮೆಂತ್ಯ ಇವುಗಳನ್ನೆಲ್ಲ ಫ್ರೈಮಾಡಿ
* ಹುಣಸೆಹಣ್ಣು ಕಿವುಚಿ ಗಟ್ಟಿ ರಸ ತೆಗೆದಿಟ್ಟುಕೊಳ್ಳಿರಿ
* ಫ್ರೈಮಾಡಿದ ಮೆಣಸು, ಎಳ್ಳು ಜೀರಿಗೆ ಇತ್ಯಾದಿಗಳನ್ನೆಲ್ಲ ಕುಟ್ಟಿ ತರಿತರಿ ಮಾಡಿಡಿ
* ಸಾಸಿವೆ, ಕರಿಬೇವು, 4 ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಡಿ.
* ಅದಕ್ಕೆ ಹುಣಸೆನೀರು ಹಾಕಿ ಚೆನ್ನಾಗಿ ಕುದಿಸಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿರಿ.
* ತದನಂತರ, ಬೆಲ್ಲ, ಇಂಗು ಹಾಕಿ ಕುದಿಸಿರಿ.
* ನಂತರ ತರಿತರಿ ಮಾಡಿದ ಮೆಣಸು, ಎಳ್ಳು, ಚಕ್ಕೆ ಇತ್ಯಾದಿಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ. ಮತ್ತೆ ಕೆಳಗಿಳಿಸಿ.
* ನಂತರ ಹುರಿದ ಕಡಲೆಕಾಯಿ, ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿರಿ
;
ಸುಮಾರು ಹತ್ತು ದಿನಗಳ ತನಕ ಈ ಪುಳಿಯೋಗರೆ ಗೊಜ್ಜು ಹಾಳಾಗುವುದಿಲ್ಲ. ಅಂಗಡಿ ಪುಳಿಯೋಗರೆ ಪೌಡರ್ ಗೆ ಬಾಯ್ ಹೇಳಿ. ನೀವೆ ಮನೆಯಲ್ಲಿಯೇ ಸ್ವಂತ ಪುಳಿಯೋಗರೆ ಮಾಡಿ.
;



Click it and Unblock the Notifications
