Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಬೆಳಗಿನ ಉಪಹಾರಕ್ಕಾಗಿ ರುಚಿಯಾದ ಎಣ್ಣೆ ರಹಿತ ದೋಸೆ
ನೀವು ತುಂಬಾ ಕಟ್ಟುನಿಟ್ಟಿನ ಡಯೆಟ್‌ನಲ್ಲಿದ್ದಾಗ, ಎಣ್ಣೆಯನ್ನು ಆದಷ್ಟು ದೂರವಿರಿಸಲು ನೋಡುತ್ತೀರಿ ಅಲ್ಲವೇ? ಒಂದು ತೊಟ್ಟು ಎಣ್ಣೆ ಕೂಡ ನಿಮ್ಮ ಕೊಬ್ಬಿನ ಸಂಗ್ರಹಣೆಯನ್ನು ಹೆಚ್ಚಿಸುತ್ತಿರುತ್ತದೆ. ಹಾಗಿದ್ದರೆ ಎಣ್ಣೆ ಇಲ್ಲದೆ ಆಹಾರವನ್ನು ಸೇವಿಸುವುದು ಹೇಗೆ ಎಂಬುದು ನಿಮ್ಮ ಚಿಂತೆಯಾಗಿದ್ದರೆ ಇಲ್ಲಿ ನಿಮಗಾಗಿ ನಾವು ನೀಡುತ್ತಿದ್ದೇವೆ ಎಣ್ಣೆ ರಹಿತ ಗರಿ ಗರಿ ದೋಸೆ ಖಾದ್ಯವನ್ನು.
ಇದನ್ನು ತಯಾರಿಸಲು ನಿಮ್ಮಲ್ಲಿ ನಾನ್‌ಸ್ಟಿಕ್ ಪ್ಯಾನ್ ಇದ್ದರೆ ಸಾಕು ಎಣ್ಣೆ ಹಾಕದೆಯೇ ಹಾಗೆಯೇ ಮೇಲೇಳುವ ಗರಿ ಗರಿ ದೋಸೆಯನ್ನು ನಿಮಗೆ ಸವಿಯಬಹುದಾಗಿದೆ. ಇದನ್ನು ತಯಾರಿಸುವಾಗ ನೀವು ಗಮನದಲ್ಲಿಡಬೇಕಾದ ಅಂಶವೆಂದರೆ ಇದನ್ನು ನೇರವಾಗಿ ಫ್ರಿಡ್ಜ್‌ನಿಂದ ತೆಗೆದು ಹಾಗೆಯೇ ಬಳಸಿಲ್ಲ ಎಂದಾಗಿದೆ.

ಕಡಿಮೆ ಕ್ಯಾಲೋರಿಗಳನ್ನು ಸೇವಿಸುವವರಿಗೆ ಕಟ್ಟುನಿಟ್ಟಿನ ಡಯೆಟ್ ಪಾಲಿಸುವವರಿಗೆ ಈ ದೋಸೆ ಹೇಳಿ ಮಾಡಿಸಿದ್ದು. ಸಾಮಾನ್ಯ ಮಸಾಲೆ ದೋಸೆಗಿಂತ ಎಣ್ಣೆ ಇಲ್ಲದ ದೋಸೆಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಮತ್ತು ಇದರ ರುಚಿ ಕೂಡ ಅಷ್ಟೇ ಸ್ವಾದಿಷ್ಟವಾಗಿರುತ್ತದೆ.
ಹಾಗಿದ್ದರೆ ಈ ರುಚಿಯಾದ ಕ್ಯಾಲೋರಿ ರಹಿತ ದೋಸೆಯನ್ನು ತಯಾರಿಸುವ ವಿಧಾನವನ್ನು ಸಾಮಾಗ್ರಿಗಳನ್ನು ಕೆಳಗೆ ನೀಡಿದ್ದು ನಿಮ್ಮ ಮನೆಯಲ್ಲೂ ಇದನ್ನು ನೀವು ತಯಾರಿಸಿ ಗ್ರೇಟ್ ಎನ್ನಿಸಿಕೊಳ್ಳಬಹುದು. ಇದನ್ನು ಸವಿಯಲು ಕೊಬ್ಬರಿ ಚಟ್ನಿಗಿಂತ ಪುದೀನಾ ಚಟ್ನಿ ಹೆಚ್ಚು ಹಿತಕಾರಿಯಾಗಿರುತ್ತದೆ. ಇದು ನಿಮ್ಮ ದೇಹವನ್ನು ತಂಪಾಗಿಸಿ ಕಡಿಮೆ ಕ್ಯಾಲೋರಿ ದೇಹಕ್ಕೆ ಸೇರುವಂತೆ ನೋಡಿಕೊಳ್ಳುತ್ತದೆ.
ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ರುಚಿ ರುಚಿಯಾದ ಮಜ್ಜಿಗೆ ದೋಸೆ ರೆಸಿಪಿ
ಸಾಮಾಗ್ರಿಗಳು
*ಅಕ್ಕಿ ಹುಡಿ - 1 ಕಪ್
*ರವೆ - 1 ಕಪ್
*ಮೊಸರು - 3 ಚಮಚ
*ಶುಂಠಿ - ಹಸಿಮೆಣಸಿನ ಪೇಸ್ಟ್ - 2 ಚಮಚ
*ಈರುಳ್ಳಿ - 1/2 ಕಪ್ (ಕತ್ತರಿಸಿದ್ದು)
*ಟೊಮೇಟೊ - 3 (ಕತ್ತರಿಸಿದ್ದು)
*ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ರವೆ, ಮೊಸರು, ಉಪ್ಪು ಮತ್ತು ಅಕ್ಕಿ ಹುಡಿಯನ್ನು ಪಾತ್ರೆಯಲ್ಲಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಇದನ್ನು ಚೆನ್ನಾಗಿ ಮಿಶ್ರಗೊಳಿಸಲು ಅಗತ್ಯವಾಗಿರುವ ನೀರನ್ನು ಬೆರೆಸಿಕೊಳ್ಳಿ.
2.ಇದು ಪೂರ್ತಿ ಆದ ನಂತರ ಇದನ್ನು ಚೆನ್ನಾಗಿ ಮುಚ್ಚಿ, ಆರು ಗಂಟೆಗಳ ಕಾಲ ಹುಳಿ ಬರಲು ಇರಿಸಿ.
3.ಈಗ ಟೊಮೇಟೊ ಪೂರಿ, ಈರುಳ್ಳಿ, ಉಪ್ಪು ಶುಂಠಿ ಹಸಿಮೆಣಸು ಪೇಸ್ಟ್ ಅನ್ನು ಸೇರಿಸಿಕೊಳ್ಳಿ. ಇದೆಲ್ಲಾ ಸಾಮಾಗ್ರಿಗಳನ್ನು ಹಿಟ್ಟಿಗೆ ಸೇರಿಸಿಕೊಳ್ಳಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
4.ಹಿಟ್ಟು ಸಿದ್ಧಗೊಂಡಾಗ, ನಾನ್ ಸ್ಟಿಕ್ ತವಾವನ್ನು ಗ್ಯಾಸ್ ಮೇಲೆ ಇಡಿ ಮತ್ತು ಬಿಸಿಯಾಗುತ್ತಿದ್ದಂತೆ ದೋಸೆಯನ್ನು ಹುಯ್ಯಿರಿ. ವೃತ್ತಾಕಾರವಾಗಿ ಚಪ್ಪಟೆ ಚಮಚದಲ್ಲಿ ದೋಸೆಯನ್ನು ಎಲ್ಲಾ ಕಡೆ ಹರಡಿಸಿ.
5.ಮುಚ್ಚಳವನ್ನು ಮುಚ್ಚಿ ಮತ್ತು ಸ್ವಲ್ಪ ನಿಮಿಷಗಳ ಇದನ್ನು ಬೇಯಿಸಿಕೊಳ್ಳಿ.
6.ಒಂದು ಬದಿಯಲ್ಲಿ ತೆಳು ಕಂದು ಬಣ್ಣ ಬರುತ್ತಿದ್ದಂತೆ ತವಾದಿಂದ ದೋಸೆಯನ್ನು ತೆಗೆಯಿರಿ.
ನಿಮ್ಮ ಎಣ್ಣೆ ಇಲ್ಲದ ದೋಸೆ ಸವಿಯಲು ಸಿದ್ಧವಾಗಿದೆ. ಇದನ್ನು ತಯಾರಿಸುವಾಗ ಬೆಂಕಿಯ ಉರಿಯನ್ನು ಆದಷ್ಟು ಕಡಿಮೆ ಇರಿಸಿಕೊಳ್ಳಬೇಕು ಏಕೆಂದರೆ ಇದಕ್ಕ ಎಣ್ಣೆ ಹಾಕದೇ ಇರುವುದರಿಂದ ಆದಷ್ಟು ಜಾಗರೂಕರಾಗಿ ನಾವಿರಬೇಕು. ದೋಸೆ ತೆಗೆಯುವಾಗ ಪ್ಯಾನ್‌ಗೆ ಅಂಟಿಕೊಂಡಂತಿದ್ದಲ್ಲಿ ಸ್ವಲ್ಪ ನೀರು ಚಿಮುಕಿಸಿ. ಇದರಿಂದ ದೋಸೆ ಮೆತ್ತಗಾಗುತ್ತದೆ.



Click it and Unblock the Notifications
