Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿ ರುಚಿಯಾದ ಮಜ್ಜಿಗೆ ದೋಸೆ ರೆಸಿಪಿ
ಇಂದಿನ ಧಾವಂತದ ಜೀವನದಲ್ಲಿ ನಮಗೆ ತಿನ್ನುವುದರ ಕಡೆಗೆ ಲಕ್ಷ್ಯ ಕೊಡುವ ಸಮಯ ಇಲ್ಲವೆಂದೇ ಹೇಳಬಹುದು. ಆರೋಗ್ಯಕರ ಜೀವನ ಶೈಲಿಯನ್ನು ಮರೆತು ಸುಲಭವಾಗಿ ಸಿದ್ದ ಪಡಿಸಿರುವ ಆಹಾರ ಪದ್ಧತಿಯತ್ತ ನಾವೀಗ ಮುಖ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮ ಆಧುನಿಕ ಜೀವನ ಶೈಲಿ ಮತ್ತು ವೇಗವಾಗಿರುವ ಜಗತ್ತಾಗಿದೆ.
ಮೊದಲು ಮನೆಗಳಲ್ಲಿ ಹಿರಿಯರಿದ್ದಾಗ ಅವರು ಕಿರಿಯರ ಊಟ ತಿಂಡಿಗಳ ಮೇಲೆ ಗಮನ ನೀಡುತ್ತಿದ್ದರು. ಮಕ್ಕಳು ಅಥವಾ ಮನೆಯಲ್ಲಿ ಹೊರಗೆ ಕೆಲಸ ಮಾಡುವವರು ಶುಚಿ ರುಚಿಯಾಗಿ ತಿನ್ನಬೇಕೆಂದು ಬಿಸಿ ಬಿಸಿಯಾಗಿ ಆಹಾರ ತಯಾರಿಸುತ್ತಿದ್ದರು.
ಸಾಮಾಗ್ರಿಗಳ ಶುಚಿತ್ವ ಅವುಗಳ ಬಳಕೆ ಹೀಗೆ ಪ್ರತಿಯೊಂದರಲ್ಲೂ ಶಿಸ್ತನ್ನು ಅನುಸರಿಸುತ್ತಿದ್ದರು. ತಾವು ಮಾಡಿದ ಅಡುಗೆ ತಿನ್ನುವವರಿಗೆ ಪ್ರಿಯವಾಗಿರಬೇಕೆಂದು ಶ್ರದ್ಧೆಯಿಂದ ಅಡುಗೆ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಅಂತೆಯೇ ಕೋಲವೂ ಬದಲಾಗಿದೆ. ಬಿಸಿ ಬಿಸಿ ಬಿಟ್ಟು ಸ್ವಲ್ಪ ಬೇಗನೆ ತಿನ್ನುವುದಕ್ಕೆ ಏನು ದೊರಕ್ಕುತ್ತದೆಯೋ ಅದರತ್ತ ನಾವು ಮುಖ ಮಾಡುತ್ತಿರುವುದು ಈಗೀಗ ವಿಪರೀತವಾಗಿದೆ.

ಹಾಗಿದ್ದರೆ ನಿಮ್ಮ ಈ ಹೊಟ್ಟೆಯ ಹಸಿವನ್ನೂ ತಣಿಸಿ ನಿಮ್ಮ ರುಚಿಗೆಟ್ಟ ನಾಲೆಗೆಗೆ ನಳಪಾಕವನ್ನು ಉಣಿಸಲೆಂದೇ ನಾವಿಂದು ಬಂದಿದ್ದೇವೆ ಹೊಸದಾದ ತಿಂಡಿ ಮಜ್ಜಿಗೆ ದೋಸೆಯೊಂದಿಗೆ. ಈ ದೋಸೆ ನಿಮಗೆ ಆರೋಗ್ಯವಂತ ಕ್ಯಾಲೋರಿಯನ್ನು ಒದಗಿಸಿ ನಿಮಗೆ ಸುಗ್ರಾಸ ಭೋಜವನ್ನು ಉಣಿಸುವುದಂತೂ ಖಂಡಿತ. ಹಾಗಿದ್ದರೆ ಮತ್ತೇಕೆ ತಡ, ಈ ಸರಳ ವಿಧಾನದಲ್ಲಿರುವ ಮಜ್ಜಿಗೆ ದೋಸೆ ರೆಸಿಪಿಯನ್ನು ಬರೆದುಕೊಳ್ಳಿ ಮತ್ತು ತಯಾರಿಸಿ ಸವಿಯಿರಿ.
ನೀವೂ ಪ್ರಯತ್ನಿಸಿ ಗರಿಗರಿಯಾದ 10 ವಿಧದ ದೋಸೆ
ಪ್ರಮಾಣ: 4
ತಯಾರಿಗೆ ಬೇಕಾದ ಸಮಯ: 3 ಗಂಟೆಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು
ಸಾಮಾಗ್ರಿಗಳು:
*ಉದ್ದಿನ ಬೇಳೆ - 1/2 ಕಪ್
*ಅಕ್ಕಿ - 2 ಕಪ್
*ಮೊಸರು - 1/2 *ಕಪ್
*ಅವಲಕ್ಕಿ - ಒಂದು ಮುಷ್ಟಿ
*ಉಪ್ಪು - ರುಚಿಗೆ ತಕ್ಕಷ್ಟು
*ಬೆಲ್ಲ - ಸ್ವಲ್ಪ
ಮಾಡುವ ವಿಧಾನ:
1. ಮೊದಲಿಗೆ ಅಕ್ಕಿ ಮತ್ತು ಉದ್ದನ್ನು 3 ಗಂಟೆಗಳ ನೆನೆಸಬೇಕು ಮತ್ತು ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುತ್ತಿರುವಾಗ ಅವಲಕ್ಕಿಯನ್ನು ತೊಳೆದು ಹಿಟ್ಟಿಗೆ ಸೇರಿಸಿ.
2. ಅಕ್ಕಿ ಹಿಟ್ಟನ್ನು ಹುಳಿ ಬರುವುದಕ್ಕಾಗಿ ಎಂಟು ಗಂಟೆಗಳ ಕಾಲ ಮುಚ್ಚಿಡಿ.
3. ಇದೇ ಸಮಯದಲ್ಲಿ ಹಿಟ್ಟಿಗೆ ಮೊಸರು ಮತ್ತು ತುರಿದ ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ.
4. ಹಿಟ್ಟು ಹುಳಿ ಬಂದ ನಂತರ ಪಾತ್ರೆಯಲ್ಲಿ ಹಿಟ್ಟಿನ ಪ್ರಮಾಣ ಹೆಚ್ಚಾಗಿರುವುದನ್ನು ನೀವು ಗಮನಿಸಬಹುದು.
5. ಕಾವಲಿಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಒಂದು ಸ್ಪೂನ್‍ನಷ್ಟು ಎಣ್ಣೆಯನ್ನು ಹಾಕಿ.
6. ಒಂದು ಸೌಟಿನಷ್ಟು ಹಿಟ್ಟನ್ನು ತೆಗೆದುಕೊಂಡು ದೋಸೆ ಆಕಾರದಲ್ಲಿ ಹುಯ್ಯಿರಿ.
7. 5 ನಿಮಿಷಗಳ ತರುವಾಯ ದೋಸೆಯ ಎರಡೂ ಬದಿಗೆ ಸ್ವಲ್ಪ ಎಣ್ಣೆ ಸವರಿ ಚೆನ್ನಾಗಿ ಬೇಯಿಸಿಕೊಳ್ಳಿ.
8. 2 ನಿಮಿಷಗಳ ನಂತರ ಕಾವಲಿಯಿಂದ ದೋಸೆಯನ್ನು ತಟ್ಟೆಗೆ ವರ್ಗಾಯಿಸಿ.
9. ನಿಮ್ಮ ಗರಿಯಾದ ಗರಿಯಾದ ಮಜ್ಜಿಗೆ ದೋಸೆ ಸವಿಯಲು ಸಿದ್ಧವಾಗಿದೆ.
ಚಟ್ನಿ ಅಥವಾ ಈರುಳ್ಳಿ ಸಾಂಬಾರ್ ಮಜ್ಜಿಗೆ ದೋಸೆಗೆ ಉತ್ತಮ ಕಾಂಬಿನೇಷನ್ ಆಗಿದೆ. ಈ ದೋಸೆ ನಿಮ್ಮ ಬಾಯಲ್ಲಿ ನೀರೂರಿಸುವುದಂತೂ ಖಂಡಿತ.



Click it and Unblock the Notifications
