Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಬಾಯಿಯಲ್ಲಿ ನೀರೂರಿಸುವ ಹೂಕೋಸಿನ ಪಲಾವ್!
ಮಾರುಕಟ್ಟೆಯಲ್ಲಿ ಇದೀಗ ಹೂಕೋಸಿನ ಕಾರುಬಾರು, ಬೇಸಿಗೆಯ ಸೀಸನ್‌ನಲ್ಲಿ ಇದನ್ನು ಬಳಸಿ ಮಾಡುವ ಹಲವಾರು ತಿನಿಸುಗಳು ನಿಮ್ಮನ್ನು ಇನ್ನಷ್ಟು ಸಂತುಷ್ಟಗೊಳಿಸುತ್ತದೆ. ಮ್ಮ ನಾಲಗೆ ರುಚಿ ತಣಿಸಲು ಹಾಗೂ ನಿಮ್ಮ ವಾರದ ಉಪಹಾರ ಪಟ್ಟಿಗೆ ಇದನ್ನು ಹೊಸದಾಗಿ ಸೇರ್ಪಡಿಸಿಕೊಳ್ಳಬಹುದು ಮತ್ತೇಕೆ ತಡ ಈ ತರಕಾರಿಯನ್ನು ಬಳಸಿ ರುಚಿಕರವಾದ ತಿಂಡಿಗಳನ್ನು ಮಾಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಾಲಿಗೆಯ ರುಚಿ ತಣಿಸುವ ವೆಜ್ ಬಿರಿಯಾನಿ!
ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ತರಕಾರಿಗಳು ಬಹು ಅವಶ್ಯಕ. ಅದರಲ್ಲೂ, ಹೂಕೋಸು ತಿನ್ನುವುದರಿಂದ ಹೃದಯ ಸುಸ್ಥಿತಿಯಲ್ಲಿರುತ್ತದೆ ಮತ್ತು ಪಾರ್ಶ್ವವಾಯುವಿನಿಂದ ದೂರವಿಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೆ ಹೂಕೋಸು ಇಂಬು ನೀಡುತ್ತದೆ.

ಹೂಕೋಸಿನಲ್ಲಿ ಹಲವು ಆರೋಗ್ಯಕಾರಿ ಗುಣಗಳಿವೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿದೆ. ಕೊಬ್ಬಿನಂಶ ಕಡಿಮೆಯಿದ್ದು ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಉತ್ತಮ. ಇದರಲ್ಲಿ ಫೈಬರ್ ಕೂಡ ಹೆಚ್ಚಿರುತ್ತದೆ. ಇಂದು ನಾವು ನಿಮಗೆ ಕಾಲಿಫ್ಲವರ್ ಪಲಾವ್ ಮಾಡುವ ವಿಧಾನ ಹೇಳಿಕೊಡುತ್ತೇವೆ. ಇದನ್ನು ಮಾಡಲು ಸುಲಭ. ಹೂಕೋಸಿನೊಂದಿಗೆ ಇನ್ನಿತರ ತರಕಾರಿಗಳನ್ನು ಕೂಡ ಸೇರಿಸಬಹುದು. ಇದರಲ್ಲಿ ಪ್ರಮುಖವಾಗಿ ಹೂಕೋಸು ಮತ್ತು ಬಟಾಣಿಯನ್ನು ಬಳಸಲಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಘಮ್ಮೆನ್ನುವ 6 ಸಾಂಬಾರ್ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಕ್ಕಿ- 1 ಕಪ್
ಹೂಕೋಸು- 1 (ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ)
ಬಟಾಣಿ- 1/2 ಕಪ್
ಈರುಳ್ಳಿ- 1 (ಕತ್ತರಿಸಿಕೊಳ್ಳಿ)
ಟೊಮೊಟೊ- 3 (ಕತ್ತರಿಸಿಕೊಳ್ಳಿ)
ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
ಹಸಿಮೆಣಸಿನಕಾಯಿ- 2 8.
ಅರಿಶಿಣ ಪುಡಿ- 1/2 ಟೀ ಸ್ಪೂನ್
ಅಚ್ಚ ಖಾರದ ಪುಡಿ- 1 ಟೀ ಸ್ಪೂನ್
ಜೀರಿಗೆ ಪುಡಿ- 1 ಟೀ ಸ್ಪೂನ್
ಗರಂ ಮಸಾಲ- 1 ಟೀ ಸ್ಪೂನ್
ಮೆಣಸು ಪುಡಿ- 1/2 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಚಕ್ಕೆ- ಸ್ವಲ್ಪ
ಏಲಕ್ಕಿ- 2
ಎಣ್ಣೆ- ಸ್ವಲ್ಪ
ನೀರು- 2 ಕಪ್
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚೆನ್ನಾ ಗ್ರೇವಿ- ಬ್ಯಾಚುಲರ್ ರೆಸಿಪಿ
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ ತದನಂತರ ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಕಾದ ನಂತರ ಜೀರಿಗೆ, ಬೇ ಲೀಫ್, ಚಕ್ಕೆ, ಏಲಕ್ಕಿಯನ್ನು ಹಾಕಿ ಹುರಿಯಿರಿ.
ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 3-4 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಹೂಕೋಸು, ಬಟಾಣಿ, ಹಸಿಮೆಣಸಿನಕಾಯಿ ಹಾಕಿ 3-4 ನಿಮಿಷಗಳವರೆಗೆ ಹುರಿಯಿರಿ.
ಟೊಮೊಟೊ, ಅರಿಶಿಣಪುಡಿ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಮೆಣಸು ಪುಡಿ, ಗರಂ ಮಸಾಲ ಪುಡಿ ಹಾಕಿ ಕೆಲವು ನಿಮಿಷಗಳವರೆಗೆ ಬೇಯಿಸಿ.
ನಂತರ ಬೆಂದಿರುವ ಬಾಸ್ಮತಿ ಅಕ್ಕಿಯನ್ನು ಹಾಕಿ 2-3 ನಿಮಿಷ ಹಾಕಿ ಚಿನ್ನಾಗಿ ಮಿಕ್ಸ್ ಮಾಡಿ.
ನೀರನ್ನು ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 10-12 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ಒಲೆಯನ್ನು ಆರಿಸಿ. ರುಚಿಕರವಾದ ಕಾಲಿಫ್ಲವರ್ ಪಲಾವ್ ಸವಿಯಲು ಸಿದ್ಧ.



Click it and Unblock the Notifications
