Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕುಂಬಳಕಾಯಿ ತಿರುಳಿನ ಸ್ವಾದಿಷ್ಟ ದೋಸೆ ರೆಸಿಪಿ
ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾದ ಖಾದ್ಯ ದೋಸೆ. ಉತ್ತರ ಭಾರತದಲ್ಲಿ ಚಪಾತಿ ಹೇಗೆ ಜನಪ್ರಿಯವೋ ಅಂತೆಯೇ ದಕ್ಷಿಣದಲ್ಲಿ ದೋಸೆಯ ಕಾರುಬಾರು ಹೆಚ್ಚು. ದೋಸೆಯಲ್ಲೂ ವಿಧ ವಿಧ ಬಗೆಗಳಿದ್ದು ಮನೆಯಲ್ಲೇ ತಯಾರಿಸುವ ಸಾಮಾನ್ಯ ಉದ್ದಿನ ದೋಸೆಯಿಂದ ಹಿಡಿದು ಪಂಚತಾರಾ ಉಪಹಾರ ಮಂದಿರಗಳಲ್ಲಿ ದೊರೆಯುವ ವಿಭಿನ್ನ ರುಚಿಯ ತರಕಾರಿ ದೋಸೆಯವರೆಗೆ ದೋಸೆ ತನ್ನ ಪ್ರಭಾವವನ್ನು ಬೀರಿದೆ ಎಂದೇ ಹೇಳಬಹುದು.
ಇಂತಹುದೇ ಒಂದು ವಿಶೇಷ ಅತಿ ಸರಳವಾಗಿ ತಯಾರಿಸಬಹುದಾದ ಕುಂಬಳ ಕಾಯಿ ತಿರುಳಿನ ದೋಸೆಯೊಂದಿಗೆ ನಾವು ನಿಮ್ಮ ಮುಂದೆ ಇದ್ದೇವೆ. ಕುಂಬಳ ಕಾಯಿಯ ತಿರುಳನ್ನು ಬೇರ್ಪಡಿಸಿ ಅಕ್ಕಿ, ಮೊಸರಿನೊಂದಿಗೆ ಇದನ್ನು ರುಬ್ಬಿ ಈ ಸ್ವಾದಿಷ್ಟ ದೋಸೆಯನ್ನು ತಯಾರಿಸಲಾಗುತ್ತದೆ.
ಕುಂಬಳ ಕಾಯಿ ತಿರುಳಿನ ದೋಸೆ ರುಚಿಯೊಂದಿಗೆ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ನಿಮ್ಮ ಹೆಚ್ಚಿನ ಸಮಯವನ್ನು ಉಳಿಸಿ ಅತಿ ಕಡಿಮೆ ಕಾಲಾವಕಾಶದಲ್ಲಿ ಈ ದೋಸೆಯನ್ನು ನಿಮಗೆ ತಯಾರಿಸಬಹುದಾಗಿದೆ. ಹಾಗಿದ್ದರೆ ಇನ್ನೇಕೆ ತಡ, ಕೆಳಗೆ ನಾವು ನೀಡಿರುವ ಕುಂಬಳ ಕಾಯಿ ತಿರುಳಿನ ಪಾಕ ವಿಧಾನವನ್ನು ಅರಿತುಕೊಳ್ಳಿ ಮತ್ತು ಬಿಸಿ ಬಿಸಿ ದೋಸೆ ತಯಾರಿಸಿ. ಸವಿರುಚಿಯ ಹೆಸರು ಕಾಳಿನ ದೋಸೆ

ಪ್ರಮಾಣ: 4
ಸಿದ್ಧತಾ ಸಮಯ: 1 ಗಂಟೆ
ಅಡುಗೆಗೆ ಬೇಕಾದ ಸಮಯ: 1/2 ಗಂಟೆ
ಸಾಮಾಗ್ರಿ
*ಬೆಳ್ತಿಗೆ ಅಕ್ಕಿ - 2-5 ಕಪ್
*ಕುಂಬಳ ಕಾಯಿ ತಿರುಳು
*ಮೆಂತೆ - 2 ಚಮಚ
*ಮೊಸರು 1/2 ಕಪ್
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- ಸ್ವಲ್ಪ ಮಟನ್ ಗ್ರೇವಿ ಜೊತೆ ಸವಿಯಲು ಮಟನ್ ದೋಸೆ
ಮಾಡುವ ವಿಧಾನ
*ಮೊದಲು ಮೆಂತೆ ಮತ್ತು ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಸಿಡಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ. ಕುಂಬಳಕಾಯಿ ತಿರುಳನ್ನು ಬೇರ್ಪಡಿಸಿ ನಂತರ ಅದನ್ನು ಚೆನ್ನಾಗಿ ತೊಳೆಯಿರಿ.
*ನಂತರ ಅಕ್ಕಿ, ಮೆಂತೆ ಮತ್ತು ಕುಂಬಳಕಾಯಿ ತಿರುಳನ್ನು ಮೊಸರಿನೊಂದಿಗೆ ಕಡೆಯಿರಿ ರಾತ್ರಿ ಈ ಹಿಟ್ಟನ್ನು ಹಾಗೆಯೇ ತೆಗೆದಿಡಿ. ಹಿಟ್ಟು ತುಸು ದಪ್ಪವಾಗಿರಲಿ
*ತವಾವವನ್ನು ತುಸು ಬಿಸಿ ಮಾಡಿಕೊಳ್ಳಿ ಮಧ್ಯಭಾಗಕ್ಕೆ ಹಿಟ್ಟನ್ನು ಹುಯ್ದು ದೋಸೆಯಾಕಾರಕ್ಕೆ ತನ್ನಿರಿ ಎಣ್ಣೆ ಅಥವಾ ತುಪ್ಪವನ್ನು ದೋಸೆಯ ಮಧ್ಯಭಾಗಕ್ಕೆ ಹಾಕಿರಿ. ಮುಚ್ಚಳ ಮುಚ್ಚಿ.
*ದೋಸೆಯ ಎರಡೂ ಭಾಗವನ್ನು ಬೇಯಿಸಿಕೊಳ್ಳಿ ಕುಂಬಳ ಕಾಯಿ ತಿರುಳಿನ ದೋಸೆ ಸವಿಯಲು ಸಿದ್ಧವಾಗಿದೆ. ಚಟ್ನಿ ಅಥವಾ ಸಾಂಬಾರ್ ಈ ದೋಸೆಗೆ ಸೂಪರ್ ಕಾಂಬಿನೇಷನ್ ಆಗಿದೆ.



Click it and Unblock the Notifications
