Latest Updates
-
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಬೆಳಗಿನ ಸ್ವಾದಮಯ ಉಪಹಾರಕ್ಕಾಗಿ ಅಡೆ ದೋಸೆ ರೆಸಿಪಿ
ಇಂದಿನ ಧಾವಂತ ಜೀವನದಲ್ಲಿ ಬೆಳಗಿನ ತಿಂಡಿಯನ್ನು ಸಿದ್ಧಪಡಿಸುವುದು ತುಸು ಪ್ರಯಾಸದ ಕೆಲಸವೇ ಸರಿ. ಅದರಲ್ಲೂ ಮನೆಯ ಗೃಹಿಣಿ ಹೊರಗೆ ಕಾರ್ಯನಿರ್ವಹಿಸುವವರಾಗಿದ್ದರೆ ನಿಜಕ್ಕೂ ಕಷ್ಟಕರ ಕೆಲಸವಾಗಿರುತ್ತದೆ. ಮನೆಯವರಿಗೆ ತಿಂಡಿ ಸಿದ್ಧ ಮಾಡಿ ತಮಗೂ ಮಾಡಿ ತೆಗೆದುಕೊಂಡು ಹೋಗುವ ಅವಸರ ಉಂಟಾಗುವುದು ಸಹಜವೇ. ಆದ್ದರಿಂದ ಈ ಗೃಹಿಣಿಯರಿಗೆ ಬೆಳಗಿನ ತಿಂಡಿ ಎಂದರೆ ದೊಡ್ಡ ತಲೆನೋವು ಆಗಿರುತ್ತದೆ.
ಆದ್ದರಿಂದಲೇ ಈ ತಲೆನೋವನ್ನು ಹೋಗಲಾಡಿಸುವ ಒಂದು ಸರಳ ಖಾದ್ಯದೊಂದಿಗೆ ನಾವು ಇಂದು ಬಂದಿರುವೆವು. ಈ ದೋಸೆ ಖಾದ್ಯ ನಿಜಕ್ಕೂ ಆರೋಗ್ಯಯುತವಾಗಿದ್ದು ಬಾಯಿಗೆ ಸವಿಯನ್ನು ನೀಡುವುದರ ಜೊತೆಗೆ ಆರೋಗ್ಯದ ಮೇಲೂ ಅದ್ಭುತ ಪರಿಣಾಮವನ್ನು ಉಂಟುಮಾಡುತ್ತದೆ. ಸಣ್ಣವರಿಂದ ಹಿಡಿದು ದೊಡ್ಡವರೂ ಇಷ್ಟಪಡುವ ಈ ದೋಸೆ ಖಾದ್ಯದ ಹೆಸರು ಅಡೆ ದೋಸೆಯಾಗಿದೆ.
ಅಡೆ ದೋಸೆಯಲ್ಲಿ ಅಕ್ಕಿ ಜೊತೆಗೆ ಬೇಳೆಗಳೂ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಕಡಲೆ, ಉದ್ದು, ತೊಗರಿ ಹೀಗೆ ಬೇಳೆಗಳ ವಿವಿಧ ಪಾಕ ಅಸದಳ ರುಚಿಯನ್ನು ಅಡೆ ದೋಸೆಗೆ ನೀಡುವುದರಿಂದ ಈ ದೋಸೆ ಖಾದ್ಯ ಆರೋಗ್ಯಯುತ ಮತ್ತು ರುಚಿಕರವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಅಡೆ ದೋಸೆ ಖಾದ್ಯದ ತಯಾರಿ ವಿಧಾನವನ್ನು ಅರಿತುಕೊಳ್ಳಿ.

ಬೆಳಗಿನ ಉಪಹಾರಕ್ಕಾಗಿ ರುಚಿಯಾದ ಅವಲಕ್ಕಿ ದೋಸೆ
ಪ್ರಮಾಣ: 2
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು
*ಅಕ್ಕಿ - 1 ಕಪ್
*ತೊಗರಿ ಬೇಳೆ - 1/2 ಕಪ್
*ಉದ್ದಿನ ಬೇಳೆ - 1/2 ಕಪ್
*ಕಡಲೆ ಬೇಳೆ - 1/2 ಕಪ್
*ಹಸಿಮೆಣಸು - 4
*ಕಾಳುಮೆಣಸು - 3-4
*ಕೆಂಪು ಮೆಣಸು
*ಸೋರೆ ಕಾಯಿ 1/2 ಕಪ್
*ಕರಿಬೇವಿನೆಲೆ - 1/4
*ತೆಂಗಿನ ತುರಿ - 1/2 ಕಪ್
*ಕೊತ್ತಂಬರಿ - 1 ಚಮಚ
*ಇಂಗು - ಸ್ವಲ್ಪ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಸ್ವಲ್ಪ
ಮಾಡುವ ವಿಧಾನ
*ಅಕ್ಕಿ ಮತ್ತು ಎಲ್ಲಾ ಬೇಳೆಗಳನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
*ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು (ಎಣ್ಣೆಯನ್ನು ಹೊರತುಪಡಿಸಿ) ಮತ್ತೆಲ್ಲವನ್ನೂ ನುಣ್ಣಗೆ ರುಬ್ಬಿ
* ತದನಂತರ ಕಾವಲಿಯನ್ನು ಬಿಸಿ ಮಾಡಿಕೊಳ್ಳಿ, ಹಾಗೂ ಮಧ್ಯಭಾಗಕ್ಕೆ ಒಂದು ಕೈಲಿನಷ್ಟು (ದೋಸೆ ಚಮಚದಷ್ಟು) ಹಿಟ್ಟನ್ನು ಸುರುವಿಕೊಳ್ಳಿ ಮತ್ತು ಕೈಲಿನ ಹಿಂಭಾಗದಿಂದ ದೋಸೆಯನ್ನು ವೃತ್ತಾಕಾರವಾಗಿ ಹುಯ್ಯಿರಿ. ಇದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತು ದೋಸೆಯ ಎರಡೂ ಭಾಗ ಬೇಯುವುದಕ್ಕಾಗಿ 1 ನಿಮಿಷ ಹಾಗೆಯೇ ಬಿಡಿ.
*ದೋಸೆ ಬೇಯುತ್ತಾ ಬಂದಂತೆ ಸ್ವಲ್ಪ ಎಣ್ಣೆ ಹುಯ್ಯಿರಿ
*ದೋಸೆಯ ಎರಡೂ ಬದಿ ಚಿನ್ನದ ಬಣ್ಣಕ್ಕೆ ಬರುವಂತೆ ಬೇಯಿಸಿಕೊಳ್ಳಿ
ನಿಮ್ಮ ಅಡೆ ದೋಸೆ ಸವಿಯಲು ಸಿದ್ಧವಾಗಿದೆ. ಇದನ್ನು ಬೆಣ್ಣೆ ಅಥವಾ ತುಪ್ಪದೊಂದಿಗೆ ನಿಮ್ಮ ಮನೆಮಂದಿಗೆ ಸವಿಯಲು ನೀಡಿ. ನಿಜಕ್ಕೂ ಇದೊಂದು ಆರೋಗ್ಯಯುತ ದೋಸೆಯಾಗಿದೆ.



Click it and Unblock the Notifications