Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗಿನ ಉಪಹಾರಕ್ಕೆ ಮೊಸರಿಡ್ಲಿ
ಇದು ದಕ್ಷಿಣಭಾರತದ ಪ್ರಸಿದ್ಧ ತಿಂಡಿಗಳಲ್ಲಿ ಒಂದು. ಈ ತಿಂಡಿಯ ವಿಶೇಷತೆಯೆಂದರೆ ನಿಮ್ಮ ದೇಹ ಮತ್ತು ಚರ್ಮಕ್ಕೆ ಒಳ್ಳೆಯ ಪೋಷಣೆ ನೀಡುವ ಮೊಸರನ್ನು ಇದರಲ್ಲಿ ಬಳಸಲಾಗುತ್ತದೆ. ಇದು ದೇಶದ ಬಹುಭಾಗದಲ್ಲಿ ಅಷ್ಟಾಗಿ ಜನಪ್ರಿಯವಾಗಿಲ್ಲ. ಜನ ಹೆಚ್ಚು ಮಾಮೂಲಿ ಅಕ್ಕಿ ಇಡ್ಲಿಯನ್ನೇ ಇಷ್ಟಪಡುತ್ತಾರೆ. ಮೊಸರಿನಿಂದಾಗಿ ಇದಕ್ಕೆ ವಿಶೇಷ ರುಚಿ ಬರುತ್ತದೆ. ಆದರೆ ಇದನ್ನು ಮಾಡಲು ನಿಮ್ಮ ಬಳಿ ಸಮಯವಿರಬೇಕು.

ಬೇಕಾಗುವ ಸಾಮಗ್ರಿಗಳು
ಇಡ್ಲಿಗಳು- 20
ಮೊಸರು- 5 ಕಪ್
ಹಾಲು- 2 ಕಪ್
ಕೊತ್ತಂಬರಿ ಸೊಪ್ಪು- ಸ್ವಲ್ಪ
ಕ್ಯಾರೆಟ್- 1 (ತುರಿದಿಟ್ಟುಕೊಳ್ಳಿ)
ಸಕ್ಕರೆ- 1 ಟೀಚಮಚ
ಉಪ್ಪು- ರುಚಿಗೆ ತಕ್ಕಷ್ಟು
ರುಬ್ಬಿಕೊಳ್ಳಲು
ಹುರಿಗಡಲೆ - 500 ಗ್ರಾಂ
ಕೊಬ್ಬರಿ- 3 ಟೀಚಮಚ
ಹಸಿಮೆಣಸಿನಕಾಯಿ- 4
ಒಗ್ಗರಣೆಗೆ
ಸಾಸಿವೆ- 1 ಟೀಚಮಚ
ಕರಿಬೇವಿನೆಲೆ- 8
ಉದ್ದಿನ ಬೇಳೆ- 1 ಟೀಚಮಚ
ಒಣಮೆಣಸಿನಕಾಯಿ- 5
ಇಂಗು- ಒಂದು ಚಿಟಿಕೆ
ಎಣ್ಣೆ- 2 ಟೀಚಮಚ
ಮಾಡುವ ವಿಧಾನ
1. ಮೊದಲಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಇಡ್ಲಿಯನ್ನು ತಯಾರಿಸಿಕೊಳ್ಳಿ. ನಂತರ ಇವನ್ನು ತುಂಡುಗಳಾಗಿ ಮಾಡಿಟ್ಟುಕೊಳ್ಳಿ.
2. ಮೊಸರು ಮತ್ತು ಹಾಲನ್ನು ಎಗ್ ಬೀಟರ್ ಬಳಸಿ ಕಡೆದುಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಉಪ್ಪನ್ನು ಸೇರಿಸಿ ಮತ್ತೆ ಕಲಸಿ.
3. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಇದಕ್ಕೆ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.
4. ಇದಕ್ಕೆ ಕಡೆದಿಟ್ಟುಕೊಂಡ ಮೊಸರು ಮತ್ತು ಇಂಗು ಸೇರಿಸಿ.
5. ಇದಕ್ಕೆ ಹುರಿಗಡಲೆ, ಹಸಿಮೆಣಸಿನಕಾಯಿ ಮತ್ತು ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕಲಸಿ.
6. ಇದರೊಳಗೆ ಇಡ್ಲಿಯನ್ನು ಹಾಕಿ 15 ನಿಮಿಷ ಬೇಯಲು ಬಿಡಿ.
7. ನಂತರ ಕ್ಯಾರೆಟ್ ತುರಿಯೊಂದಿಗೆ ಇಡ್ಲಿಯನ್ನು ತಟ್ಟೆಗೆ ಬಡಿಸಿರಿ.
ಮೊಸರಿಡ್ಲಿಯನ್ನು ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿ ತಿಂದರೆ ಅದರ ರುಚಿ ಹೆಚ್ಚುತ್ತದೆ.



Click it and Unblock the Notifications
