Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರೀತಿಯಲ್ಲಿ ಜೋಳದ ದೋಸೆ ಟ್ರೈ ಮಾಡಿದ್ದೀರಾ?
ದೋಸೆಯನ್ನು ನೂರಕ್ಕಿಂತ ಅಧಿಕ ಬಗೆಯಲ್ಲಿ ತಯಾರಿಸಬಹುದು. ದೋಸೆ ಮಾಡಲು ಬಳಸುವ ಸಾಮಾಗ್ರಿಗಳಲ್ಲಿ ಹಾಗೂ ಅದನ್ನು ಮಾಡುವ ವಿಧಾನದಲ್ಲಿ ದೋಸೆಯ ರುಚಿ ಅಡಗಿದೆ. ಇಲ್ಲಿ ನಾವು ಜೋಳ ದೋಸೆಯ ಬಗ್ಗೆ ಹೇಳಿದ್ದೇವೆ.
ಇದರಲ್ಲಿ ಜೋಳವನ್ನು ಅಕ್ಕಿ ಜೊತೆ ಹಾಕಿ ಅರೆಯುವುದಿಲ್ಲ, ಅದರ ಬದಲು ಜೋಳವನ್ನು ಬೇಯಿಸಿ ತಯಾರಿಸಲಾಗುವುದು. ಆ ಜೋಳದ ದೋಸೆಯ ರೆಸಿಪಿ ನೋಡೋಣ ಬನ್ನಿ:

ಬೇಕಾಗುವ ಸಾಮಾಗ್ರಿಗಳು:
* ಜೋಳ ಅರ್ಧ ಕಪ್ (ಬೇಯಿಸಿದ)
* ಅಕ್ಕಿ 2 ಕಪ್
* ಏಲಕ್ಕಿ 2
* ಈರುಳ್ಳಿ 2(ಕತ್ತರಿಸಿದ್ದು)
* ಹಸಿಮೆಣಸಿನ ಕಾಯಿ 2
* ಟೊಮೆಟೊ 2 (ಕತ್ತರಿಸಿದ್ದು)
* ರುಚಿಗೆ ತಕ್ಕ ಉಪ್ಪು
* ಎಣ್ಣೆ 1 ಕಪ್
* ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
1. ಅಕ್ಕಿಯನ್ನು 5-6 ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಬೇಕು. ನಂತರ ಅದಕ್ಕೆ ರುಚಿಗೆ ತಕ್ಕ ಉಪ್ಪು, ಏಲಕ್ಕಿ ಹಾಕಿ ನುಣ್ಣನೆ ರುಬ್ಬಬೇಕು.
2. ಒಂದು ಬಟ್ಟಲಿನಲ್ಲಿ ಜೋಳ, ಚಿಕ್ಕದಾಗಿ ಕತ್ತರಿಸಿದ ಟೊಮೆಟೊ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನ ಕಾಯಿ, ಚಿಟಿಕೆಯಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪುಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
3. ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಸೌಟ್ ನಿಂದ ಒಂದು ಸೌಟ್ ನಷ್ಟು ದೋಸೆ ಹಿಟ್ಟು ತೆಗೆದುಕೊಂಡು ದೋಸೆ ಹುಯ್ಯಬೇಕು. ದೋಸೆ ಸ್ವಲ್ಪ ಬೆಂದಾಗ ಅದರ ಮೇಲೆ ಸ್ವಲ್ಪ ಜೋಳದ ಮಿಶ್ರಣವನ್ನು ತೆಗೆದುಕೊಂಡು ಹರಡಬೇಕು. ನಂತರ ಬೆಂದ ದೋಸೆಯನ್ನು ಮಡಚಿ ತಟ್ಟೆಯಲ್ಲಿ ಹಾಕಬೇಕು.
ಬಿಸಿಬಿಸಿಯಾದ ಈ ದೋಸೆಯನ್ನು ಚಟ್ನಿ ಜೊತೆ ಸವೆಯಿರಿ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
