Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ವೆಜಿಟಬಲ್ ನೂಡಲ್ಸ್
ರುಚಿರುಚಿಯಾದ ಶಾವಿಗೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಈ ಮಾಘ ಮಾಸದ ಚಳಿಗೆ ನಾಲಿಗೆ ಸ್ವಲ್ಪ ಖಾರದ ವ್ಯಂಜನಗಳನ್ನು ಬಯಸುವುದು ಸಹಜ. ಅಣಬೆ, ಶುಂಠಿ, ಜೋಳದ ಹಿಟ್ಟು, ಕ್ಯಾರೆಟ್ಟು ಸೇರಿಸಿ ಪೌಷ್ಟಿಕವಾದ 'ವೆಜಿಟಬಲ್ ನೂಡಲ್ಸ್'ನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ರುಚಿಯ ಜತೆಗೆ ಸತ್ವಯುತವಾದ ರಸಪಾಕವನ್ನು ತಿಂದಂತಾಗುತ್ತದೆ. ಹಾಗಿದ್ದರೆ ತಡ ಯಾಕೆ!?
- ಸುಮನಾ, ಬೆಂಗಳೂರು
ಬೇಕಾಗುವ ಪದಾರ್ಥಗಳು :
ನೂಡಲ್ಸ್ : 300 ಗ್ರಾಂ.
ಕ್ಯಾರೆಟ್ : 2
ದಪ್ಪ ಮೆಣಸಿನಕಾಯಿ : 3
ಖಾರದಪುಡಿ : 1 ಟೇಬಲ್ ಚಮಚ
ಮುಸುಕಿನ ಜೋಳದ ಹಿಟ್ಟು : 2 ಟೇಬಲ್ ಚಮಚ
ಸಣ್ಣಗೆ ಹೆಚ್ಚಿದ ಶುಂಠಿ : 1 ಟೇಬಲ್ ಚಮಚ
ಹೆಚ್ಚಿದ ಅಣಬೆ : 1 ಕಪ್
ಈರುಳ್ಳಿ : 2
ಸಕ್ಕರೆ : 1 ಟೀ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಸೋಯಾ ಸಾಸ್ : 1 ಟೇಬಲ್ ಚಮಚ
ಅಜಿನೋಮೊಟೊ : 1 ಟೇಬಲ್ ಚಮಚ
ಹೀಗೆ ಮಾಡಿ :
ಮೊದಲು ನೂಡಲ್ಸ್‌ನೊಂದಿಗೆ ತರಕಾರಿ, ಶುಂಠಿ, ಈರುಳ್ಳಿ ಮತ್ತು ಅಣಬೆಯನ್ನು ಎಣ್ಣೆಯಲ್ಲಿ ಬೇಯಿಸಿಕೊಳ್ಳಿ. ಅಣಬೆ ಬೇಯುತ್ತಿದ್ದಂತೆ ಈ ಮಿಶ್ರಣಕ್ಕೆ ಕ್ಯಾರೆಟ್ಟನ್ನು ಹಾಕಿ ಬೇಯಿಸಬೇಕು. ಮತ್ತಷ್ಟು ರುಚಿ ಬರಲು ಸೋಯಾ ಸಾಸ್, ಅಜಿನೊಮೊಟೊ, ಉಪ್ಪು ಮತ್ತು ಸಕ್ಕರೆಯನ್ನು ಬೆರಸಿ.
ಚೆನ್ನಾಗಿ ಬೆಂದ ನೂಡಲ್ಸ್‌ಗೆ ಒಂದು ಕಪ್ ನೀರು ಹಾಕಿ ಕಲಸಬೇಕು. ಈಗ ಖಾರದಪುಡಿ ಹಾಗೂ ಸಣ್ಣಗೆ ಹೆಚ್ಚಿಕೊಂಡ ದಪ್ಪ ಮೆಣಸಿನಕಾಯಿಯನ್ನು ಸೇರಿಸಿ. ಈ ಮಿಶ್ರಣವೆಲ್ಲಾ ಬೆಂದಿದೆ ಎಂದಾಗ ಜೋಳದ ಹಿಟ್ಟನ್ನು ಸೇರಿಸಬೇಕು. ಎರಡು ನಿಮಿಷ ಬೇಯಿಸಿದ ನಂತರ ವೆಜಿಟಬಲ್ ನೂಡಲ್ಸ್ ತಯಾರಾದಂತೆ.



Click it and Unblock the Notifications
