Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮಜ್ಜಿಗೆ ಹುಲ್ಲಿನ ತಂಬುಳಿ
ಪರಿಮಳಯುಕ್ತ ಹಾಗೂ ಅರೋಗ್ಯಕರ ಮಜ್ಜಿಗೆಹುಲ್ಲಿನ(Lemon grass)ತಂಬುಳಿ.

ನಿಂಬೇಹುಲ್ಲಿನ ಉಪಯೋಗಗಳು ಹಲವಾರು.
* ಇದರ ಕಷಾಯಮಾಡಿ ಕುಡಿದರೆ ಶೀತ, ಕೆಮ್ಮು, ಅಲರ್ಜಿಕ್ ಜ್ವರ, ಅಜೀರ್ಣದಿಂದ ಬರುವ ಜ್ವರ ಮುಂತಾದ ಸಣ್ಣಪುಟ್ಟ ಖಾಯಿಲೆಗಳು ಹೇಳದೇ ಕೇಳದೆ ನಾಪತ್ತೆ.
* ಸಣ್ಣ ಮಕ್ಕಳಿಗೆ ಹೊಟ್ಟೆನೋವು ಬಂದರೆ ನಿಂಬೇಹುಲ್ಲಿನ ಸಣ್ಣಚೂರಿಗೆ ಸ್ವಲ್ಪ ನೀರನ್ನು ಹಾಕಿ ಕುದಿಸಿ ಕುಡಿಸಿದರೆ ಹೊಟ್ಟೆನೋವು ಮಾಯ.
* ನಿಂಬೇಹುಲ್ಲಿನಿಂದ ತಯಾರಿಸುವ ಎಣ್ಣೆಗೆ ಬಹು ಬೇಡಿಕೆ. ಈ ಎಣ್ಣೆಯನ್ನು ಸುಗಂಧ ದೃವ್ಯಗಳಲ್ಲಿಯೂ ಬಳಸುತ್ತಾರೆ. ಅದೂ ಅಲ್ಲದೇ ಇದರ ಎಣ್ಣೆಯನ್ನು ತಲೆನೋವು, ನರಕ್ಕೆ ಸಂಬಂಧಪಟ್ಟ ಖಾಯಿಲೆಗಳಲ್ಲೂ ಮಸಾಜ್ ಮಾಡಲು ಉಪಯೋಗಿಸುತ್ತಾರೆ.
* ಕೆಲವೆಡೆ ಇದನ್ನು ಚಹಾ ತಯಾರಿಸುವಾಗ ವಿಶೇಷ ಸ್ವಾದವನ್ನು ಪಡೆಯಲೂ ಬಳಸುವುದುಂಟು.
ಕಷಾಯ ಮಾಡುವ ವಿಧಾನ :
ಒಂದು ನಿಂಬೇಹಣ್ಣಿಗೆ 5 ನಿಂಬೇಹುಲ್ಲನ್ನು ಸಣ್ಣ ಚೂರಗಳನ್ನಾಗಿಸಿ ಹಾಕಿ ಅದಕ್ಕೆ ಒಂದು ಚಮಚ ಜೀರಿಗೆಯನ್ನು ಬೆರೆಸಿ 6 ಲೋಟ ನೀರನ್ನು ಹಾಕಿ ಹದಿನೈದು ನಿಮಿಷ ಕೊತಕೊತ ಕುದಿಸಬೇಕು. ಆರಿದ ನಂತರ ಅದಕ್ಕೆ ಬೆಲ್ಲ ಅಥವಾ ಉಪ್ಪನ್ನು ಸೇರಿಸಿ ಕುಡಿಯಬೇಕು. ಬೆಲ್ಲ ಅಥವಾ ಉಪ್ಪು ಹಾಕದೆಯೂ ಸೇವಿಸಬಹುದು. ಹಾಕಿದರೆ ಹೆಚ್ಚು ರುಚಿಕರ.
ಮಜ್ಜಿಗೆಹುಲ್ಲಿನ ಕುರಿತು ಹೆಚ್ಚಿನ ಮಾಹಿತಾಗಿ ಹಾಗೂ ಅದರ ಇನ್ನಿತರ ಉಪಯೋಗಗಳನ್ನು ತಿಳಿಯಲು ಈ ಕೆಳಗಿನ ಲಿಂಕ್‌ಗಳಿಗೆ ಭೇಟಿ ಕೊಡಬಹುದು.
http://en.wikipedia.org/wiki/Cymbopogon
http://www.miniperfumebottle.com/lemon_grass_oil.html
5 ಜನಕ್ಕೆ ಬಾಳೆ ಹಾಕುವ ಅಂದಾಜಿದ್ದರೆ ಮಜ್ಜಿಗೆ ಹುಲ್ಲು ತಂಬುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಪ್ರಮಾಣ:
ಶುಂಠಿ : ಸಣ್ಣ ಚೂರು
ಮಜ್ಜಿಗೆಹುಲ್ಲು(ನಿಂಬೇಹುಲ್ಲು) : 3 ಹುಲ್ಲು
ತೆಂಗಿನಕಾಯಿ ತುರಿ : 1/4 ಭಾಗ
ಕಡೆದ ಮಜ್ಜಿಗೆ : 2 ಲೋಟ
ಉಪ್ಪು : ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
*ಮೊದಲು ಶುಂಠಿ ಹಾಗೂ ಮಜ್ಜಿಗೆ ಹುಲ್ಲನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಬೇಕು.
*ಇದಕ್ಕೆ ಕಾಯಿತುರಿಯನ್ನು ಹಾಕಿ ರುಬ್ಬಿ ಚೆನ್ನಾಗಿ ಗಾಳಿಸಬೇಕು(ಸೋಸಬೇಕು).
*ಸೋಸಿ ರಸಹಿಂಡಿ ತೆಗೆದ ಮಿಶ್ರಣಕ್ಕೆ ಕಡೆದ ಮಜ್ಜಿಗೆ ಹಾಗೂ ಉಪ್ಪನ್ನು ಹಾಕಿ ಬೇಕಷ್ಟು ಪ್ರಮಾಣದಲ್ಲಿ ನೀರನ್ನು ಬೆರೆಸಬೇಕು. ಈಗ ಪರಿಮಳಯುಕ್ತ, ಸ್ವಾದಭರಿತ ಹಾಗೂ ಆರೋಗ್ಯಕರ ತಂಬುಳಿ ಸೇವಿಸಲು ತಯಾರು.



Click it and Unblock the Notifications
