Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ಮಸಾಲಾ ಬಾದಾಮಿ ಇಡ್ಲಿ

ಕುಸುಮಬಾಲೆ
ಬೇಕಾಗುವ ಪದಾರ್ಥಗಳು :
ಅಕ್ಕಿ : 200 ಗ್ರಾಂ
ಕಡಲೆ ಬೇಳೆ : 100ಗ್ರಾಂ
ಬಾದಾಮಿ ಹೋಳುಗಳು : 100ಗ್ರಾಂ
ಹಸಿ ಮೆಣಸಿನ ಕಾಯಿ : 25ಗ್ರಾಂ
ಶುಂಠಿ : 25ಗ್ರಾಂ
ಕೊತ್ತಂಬರಿ ಸೊಪ್ಪು : ಒಂದು ಹಿಡಿ
ಕರಿಬೇವು : ಎರಡು ಚಮಚ
ಎಣ್ಣೆ : ಬೇಯಿಸಲು ಬೇಕಾದಷ್ಟು
ನೀರು
ಉಪ್ಪು : ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಒಂದು ದಿನ ಮುಂಚಿತವಾಗಿ ಅಕ್ಕಿ, ಕಡಲೆ ಬೇಳೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಎರಡು ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಇಡ್ಲಿ ಹಿಟ್ಟಿನ ರೀತಿ ರುಬ್ಬಿಕೊಳ್ಳಬೇಕು. ಹಿಟ್ಟನ್ನು ರಾತ್ರಿಯಲ್ಲಾ ನೆನೆಸುವುದರಿಂದ ಇಡ್ಲಿಗಳ ರುಚಿ ಹೆಚ್ಚುತ್ತದೆ ಜತೆಗೆ ಹೂವಿನಂತೆ ಮೃದುವಾಗಿ ಬರುತ್ತವೆ.
ಇಡ್ಲಿ ಹಿಟ್ಟಿಗೆ ಬಾದಾಮಿ ಹೋಳುಗಳು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಮರೆಯದೆ ರುಚಿಗೆ ಒಂದಿಷ್ಟು ಉಪ್ಪನ್ನು ಬೆರಸಿ ಕಲಸಬೇಕು. ಈಗ ಇಡ್ಲಿ ಪ್ಲೇಟಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದರಲ್ಲಿ ಇಡ್ಲಿ ಹಿಟ್ಟನ್ನು ಹಾಕಿ ಆವಿಯಲ್ಲಿ ಬೇಯಿಸಿ. ಇಡ್ಲಿಗಳು ತಣ್ಣಗಾದ ನಂತರ ಎಣ್ಣೆಗೆ ಹಾಕಿ ಹೊಂಬಣ್ಣಕ್ಕೆ ಕರಿಯಬೇಕು. ಅಷ್ಟೇ... ಮಸಾಲಾ ಬಾದಾಮಿ ಇಡ್ಲಿಗಳು ತಯಾರಾದಂತೆ. ಬಿಸಿಬಿಸಿ ಇಡ್ಲಿಗಳನ್ನು ಕೊಬ್ಬರಿ ಚಟ್ನಿ
ಅಥವಾ ಟೊಮೊಟೊ ಚಟ್ನಿಯೊಂದಿಗೆ ತಿನ್ನುತ್ತಿದ್ದರೆ ಆ ಸ್ವಾದಿಷ್ಟಕ್ಕೆ ಸರಿಸಾಟಿ ಇಲ್ಲ ಬಿಡಿ. ಹಾಗಿದ್ದರೆ ತಡ ಯಾಕೆ ಪ್ರಯತ್ನಿಸಿ ನೋಡಿ.



Click it and Unblock the Notifications
