Latest Updates
-
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು?
ಬಿಸಿ ಬಿಸಿ ಆಲೂ ದೋಸೆ ಟೇಸ್ಟ್ ಮಾಡಿ ನೋಡಿ

ಸಾಮಾನ್ಯವಾಗಿ ಮನೆಯಲ್ಲೇ ಸಿಗುವ ಸಾಮಾನುಗಳಿಂದಲೇ ತಯಾರಿಸಬಹುದಾದ ಆಲೂ ದೋಸೆಯನ್ನ ಯಾವ ಸಮಯದಲ್ಲಿ ಬೇಕಾದರೂ ಮಾಡಿ ತಿನ್ನಬಹುದು.
ಬೇಕಾಗುವ ಸಾಮಾನುಗಳು:
* ಬೇಯಿಸಿದ 3 ದೊಡ್ಡ ಆಲೂಗಡ್ಡೆಗಳು
* 1 ಈರುಳ್ಳಿ
* 1 ಕಪ್ ಕತ್ತರಿಸಿದ ಸಬ್ಬಕ್ಕಿ ಸೊಪ್ಪು
* 1 ಕಪ್ ಕತ್ತರಿಸಿದ ಕೊತ್ತಂಬರಿ
* ಕಪ್ಪು ಮೆಣಸಿನ ಪುಡಿ ಅಥವಾ ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನ ಕಾಯಿ ಅಥವಾ ಕೆಂಪು ಮೆಣಸಿನ ಪುಡಿ
* 1 ಚಮಚ ಜೀರಿಗೆ ಪುಡಿ
* 2 ಚಮಚ ಅಕ್ಕಿ ಹಿಟ್ಟು
* 4 ಚಮಚ ಗೋಧಿ ಹಿಟ್ಟು
* 1-2 ಮೊಟ್ಟೆ
* ರುಚಿಗೆ ಉಪ್ಪು, ಎಣ್ಣೆ, ನೀರು
ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ ಕಲೆಸಿಕೊಳ್ಳಬೇಕು. ದೋಸೆ ಹಿಟ್ಟಿನಂತೆ ಚೆನ್ನಾಗಿ ಕಲಸಬೇಕು. ಹದಕ್ಕೆ ತಕ್ಕಂತೆ ನೀರು ಬೆರೆಸಿಕೊಳ್ಳಬೇಕು. ಈ ಮಿಶ್ರಣದ ರುಚಿಯನ್ನು ಒಮ್ಮೆ ಪರೀಕ್ಷಿಸಬೇಕು. ತವೆಯನ್ನು ಕಾಯಿಸಿ ದೋಸೆ ಹಾಕುವ ರೀತಿಯಲ್ಲೇ ಈ ಮಿಶ್ರಣವನ್ನು ಹಾಕಬೇಕು. ಎರಡೂ ಕಡೆ ಬೇಯಿಸಿದ ನಂತರ ಸ್ಪೆಷಲ್ ಆಲೂ ದೋಸೆ ತಿನ್ನಲು ತಯಾರಾಗುತ್ತದೆ.
ಇಷ್ಟು ಬೇಗ ಮಾಡಿ ಮುಗಿಸಬಹುದಾದ ಆಲೂ ಸ್ಪೆಷಲ್ ದೋಸೆಯನ್ನ ನೀವೂ ತಯಾರಿಸಿ ನೋಡಿ...



Click it and Unblock the Notifications
