Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಏನಿದು ವಿಟಮಿನ್ ತಟ್ಟೆ ಇಡ್ಲಿ?
ಹೋಟೆಲ್‌ನಲ್ಲಿ ನಾನಾ ವಿಧದ ಇಡ್ಲಿಗಳು ಸಿಗುತ್ತವೆ. ಮನೆಯಲ್ಲೇ ಸ್ವಾದಿಷ್ಟ ಹಾಗೂ ವಿಟಮಿನ್‌ಯುಕ್ತ ತಟ್ಟೆ ಇಡ್ಲಿ ಮಾಡಿ ತಿನ್ನುವ ಮಜಾನೇ ಬೇರೆ. ಏನಿದು ವಿಟವಿನ್ ಇಡ್ಲಿ ? ಬನ್ನಿ , ತಯಾರಿಸಿ ಸವಿಯೋಣ.
ರವೆ ಇಡ್ಲಿ , ಅಕ್ಕಿ ಇಡ್ಲಿ , ತಟ್ಟೆ ಇಡ್ಲಿ ...ಇಡ್ಲಿಯಲ್ಲಿ ನಾನಾ ವಿಧ.. ಇದರಲ್ಲಿ ತಟ್ಟೆ ಇಡ್ಲಿಗೆ ವಿಶೇಷ ಸ್ಥಾನ- ಮಾನವೇ ಉಂಟು. ಇಡ್ಲಿ ಜತೆಗೆ ಒಂದು ಕಪ್ ಸಾಂಬರ್ ನಾಲ್ಕಾರು ಚಮಚೆ ಕಾಯಿಚಟ್ನಿ ಅಥವಾ ಕಡಲೆಬೇಳೆ ಚಟ್ನಿ ಇದ್ದರೆ ಒಂದು ಬೆಳಗ್ಗೆಯನ್ನು ಗೆದ್ದಂತೆ. ಹದವಾಗಿ ಬೆಂದ , ಮೃದುವಾದ ಇಡ್ಡಲಿಗಳು ಮುಖ್ಯವಾಗಿ ನಿರುಪದ್ರವಿ. ಆರೋಗ್ಯವಂತರಿಗೆ ಹಾಗೂ ಕಾಯಿಲೆ ಕಸಾಲೆ ಬಿದ್ದವರಿಗೆ ಹೇಳಿ ಮಾಡಿಸಿದ ತಿಂಡಿ.
ನೆನೆ ಹಾಕುವ ಹಾಗಿಲ್ಲ, ರುಬ್ಬುವ ತೊಂದರೆ ಇಲ್ಲ.... ದಿಢೀರ್ ತಿಂಡಿಗಳ ಒಂದು ಜಗತ್ತೇ ತೆರೆದುಕೊಂಡಿದ್ದು ಇವತ್ತು ನಿಮಗೆಏನು ಬೇಕೋ ಅದು ಪೊಟ್ಟಣಗಳಲ್ಲಿ ಸಿಗತ್ತೆ. ರವೆ ಇಡ್ಲಿಯ ರೆಡಿ ಮೇಡ್ ಪೌಡರ್ ತಂದು ಮೊಸರಲ್ಲಿ ಕಲಸಿ ಇಡ್ಲಿ ಸ್ಟಾಂಡ್‌ನಲ್ಲಿ ಹಾಕಿ ಕುಕ್ಕರ್‌ನಲ್ಲಿ ಕೂಗಿಸಿದರೆ ಇಡ್ಲಿ ರೆಡಿ. ಆದರೆ, ಮನೆಯಲ್ಲೇ ಸ್ವಾದಿಷ್ಟ ಹಾಗೂ ವಿಟಮಿನ್‌ಯುಕ್ತ ತಟ್ಟೆ ಇಡ್ಲಿ ಮಾಡಿ ತಿನ್ನುವ ಮಜಾನೇ ಬೇರೆ. ಏನಿದು ವಿಟವಿನ್ ಇಡ್ಲಿ ? ಬನ್ನಿ , ತಯಾರಿಸಿ ಸವಿಯೋಣ.
ಬೇಕಾಗುವ ಸಾಮಗ್ರಿ : ಮನೆಯ ಜನರ ಅಗತ್ಯಕ್ಕೆ ತಕ್ಕಂತೆ ಸಾಮಗ್ರಿ ಇರಬೇಕು. ಸಾಮಾನ್ಯವಾಗಿ ಗಂಡ - ಹೆಂಡತಿ, ಇಬ್ಬರು ಮಕ್ಕಳಿರುವ ಮನೆಗೆ 2 ಲೋಟ ರವೆ, ಅರ್ಧ ಲೀಟರ್ ಮೊಸರು, ಹದವಾಗಿ ತೆಂಗಿನಕಾಯಿ ತುರಿ, ಐದಾರು ಎಸಳು ಸಬ್ಬಕ್ಕಿ ಸೊಪ್ಪು, ತೆಳ್ಳಗೆ ಹೆರೆದ ಕ್ಯಾರೆಟ್ ತುರಿ, ಸ್ವಲ್ಪ ಈನೋ ಫ್ರೂಟ್, ಚೂರು ಜೀರಿಗೆ, ಹದವಾಗಿ ಉಪ್ಪು. ಒಗ್ಗರಣೆಗೆ ಎರಡು ಸ್ಪೂನ್‌ನಷ್ಟು ಎಣ್ಣೆ, ಸ್ವಲ್ಪ ಸಾಸಿವೆ, ಕಡಲೆಬೇಳೆ, ನಾಲ್ಕಾರು ಗೋಡಂಬಿ.
ಇದಿಷ್ಟೂ ರೆಡಿ ಇಟ್ಟುಕೊಂಡು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕಡಲೆಬೇಳೆ, ಗೋಡಂಬಿ ಹಾಕಿ ಅದು ಕೆಂಪಾದ ನಂತರ ರವೆ ಹಾಕಿ ಹದವಾದ ಉರಿಯಲ್ಲಿ ಹುರಿಯಿರಿ. ರವೆ ಬಿಸಿ ಆರಿದ ತರುವಾಯ ತೆಂಗಿನ ತುರಿ, ಕ್ಯಾರೆಟ್ ತುರಿ, ಸಣ್ಣಗೆ ಕತ್ತರಿಸಿದ ಸೊಪ್ಪು, ಅದಕ್ಕೆ ಜೀರಿಗೆ, ಉಪ್ಪು ಹಾಕಿ ಹದವಾಗಿ ಬರುವಂತೆ ಈ ಎಲ್ಲವನ್ನೂ ಮೊಸರಲ್ಲಿ ಕಲೆಸಿ.
ಇದಿಷ್ಟೂ ಆದ ಬಳಿಕ ಇಡ್ಲಿ ಸ್ಟಾಂಡ್ ತೊಳೆದು ಒರೆಸಿ, ತಟ್ಟೆಗಳಿಗೆ ಎಣೆ ಸವರಿ ( ಇಡ್ಲಿ ಬೆಂದ ಬಳಿಕ ತೆಗೆಯಲು ಅನುಕೂಲ) ಆ ನಂತರ ಮಿಸ್ರಣಕ್ಕೆ ಈನೋ ಫ್ರೂಟ್ ಸಾಲ್ಟ್ ಹಾಕಿ ಕಲೆಸಿ, ಒಂದು ಪುಟ್ಟ ಹಿಡಿ ಕಾಳು ಮೆಣಸು ಹಾಕಿ. (ಉದ್ದಿನ ಜತೆ ಮೆಣಸು ಇದ್ದರೆ, ಆರೋಗ್ಯಕ್ಕೂ ಉತ್ತಮ) ಮಿಕ್ಸ್ ಮಾಡಿ. ತಟ್ಟೆಯ ಮೇಲೆ ಇಡ್ಲಿ ಮಿಶ್ರಣ ಹಾಕಿ ಆನಂತರ ರೆಡಿಯಾದ ಇಡ್ಲಿ ಸ್ಟಾಂಡನ್ನು ಕುಕ್ಕರ್‌ನಲ್ಲಿಟ್ಟು ಹಬೆಯಲ್ಲಿ ಬೇಯಿಸಿ.
ಏಳೆಂಟು ನಿಮಿಷ ಎಲ್ಲ ಇಡ್ಲಿಯಂತೆಯೇ ಇದೂ ಬೆಂದ ಬಳಿಕ, ಕುಕ್ಕರ್ ಕೆಳಗಿಳಿಸಿ. ನಾಲ್ಕಾರು ನಿಮಿಷ ಬಿಟ್ಟು ಸ್ವಲ್ಪ ನೀರು ಚಿಮುಕಿಸಿ ತೆಗೆಯಿರಿ. ಇಡ್ಲಿಯ ಜೊತೆ ತೆಂಗಿನ ಚಟ್ನಿ ರೆಡಿಯಾಗಿದೆ ತಾನೇ ? ಕೈಗೂ ಬಾಯಿಗೂ ಜಗಳ ಸಾಗಲಿ !



Click it and Unblock the Notifications
