Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
12 ಮಸಾಲೆದೋಸೆ ಮಸಾಲೆದೋಸೆ 12

ಬೇಕಾದ ಸಾಮಾಗ್ರಿ:
ಅಕ್ಕಿ -1 ಲೋಟ ತುಂಬ
ಅಕ್ಕಿ ನುಚ್ಚು - 1/4 ಲೋಟ
ಉದ್ದಿನಬೇಳೆ ಕಾಲು ಲೋಟ
ಮೆಂತ್ಯ - ಅರ್ಧ ಚಮಚ
ತೊಗರಿ ಬೇಳೆ -1 ಚಮಚ
ಸಣ್ಣ ರವೆ- ಒಂದೂವರೆ ಚಮಚ
ಉಪ್ಪು -1 ಚಮಚ
ಸಕ್ಕರೆ-ಅರ್ಧ ಚಮಚ
ಅಕ್ಕಿ ಮೆಂತ್ಯ ಮತ್ತು ಎರಡು ರೀತಿಯ ಬೇಳೆಗಳನ್ನು ಒಟ್ಟಿಗೆ 2 ರಿಂದ 3 ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ (ಅಥವಾ ಹಿಂದಿನ ದಿನ ರಾತ್ರಿ ನೆನೆಸಿ ಇಟ್ಟರೆ ಒಳ್ಳೆಯದು) ಅಕ್ಕಿ ನುಚ್ಚನ್ನು ಪ್ರತ್ಯೇಕವಾಗಿ 1 ಗಂಟೆ ನೀರಿನಲ್ಲಿ ನೆನೆಸಿದರೆ ಸಾಕು.ನೆಂದ ಎಲ್ಲಾ ಪದಾರ್ಥಗಳನ್ನು ನುಣ್ಣಗೆ, ಗಟ್ಟಿಯಾಗಿ ರುಬ್ಬಿಕೊಳ್ಳಿ. ನಿಮ್ಮ ಮನೆಯಲ್ಲಿ ಯಾವ ಬ್ರ್ಯಾಂಡ್ ಮಿಕ್ಸಿ ಇದೆ? ಕುತೂಹಲ. ದೋಸೆ ಹಿಟ್ಟು ಇಡ್ಲಿ ಹಿಟ್ಟು ರುಬ್ಬುವುದಕ್ಕೆ ಮಿಕ್ಸಿ ಸಾಕಾಗುವುದಿಲ್ಲ. ತಂತಾನೆ ನಿಧಾನವಾಗಿ ರುಬ್ಬಿಕೊಳ್ಳುವ ಒಳ್ಳೆ ಬ್ರಾಂಡಿನ ಗ್ರೈಂಡರ್ ಇರಲಿ. ರುಬ್ಬುವಾಗಲೇ ರುಚಿಗೆ ತಕ್ಕಷ್ಟು ಕಲ್ಲುಪ್ಪು ಬೆರೆಸುವುದನ್ನು ಮರೆಯಬೇಡಿ.
ಮಾರನೆ ದಿನ ದೋಸೆ ಮಾಡುವ ಒಂದು ಗಂಟೆ ಮುನ್ನ ರವೆ ಮತ್ತು ಸಕ್ಕರೆ ಸೇರಿಸಿ.ತೆಳ್ಳಗೆ ದೋಸೆಯನ್ನು ರಂಗೋಲಿಯಂತೆ ಹಂಚಿನ ಮೇಲೆ ಹರಡಿ. ದೋಸೆ ತವಾ ಸ್ವಚ್ಛವಾಗಿರಲಿ. ದರ್ಶಿನಿಗಳಲ್ಲಿ ಬಳಸುವ ಪೊರಕೆ ಇಲ್ಲದಿದ್ದರೆ ಚಿಂತೆಯಿಲ್ಲ . ಕುಂಬಳಕಾಯಿ ಅಥವಾ ತೆಂಗಿನ ತೊಟ್ಟು ಇದ್ದರಾಯ್ತು. ಸಾಕಷ್ಟು ತುಪ್ಪ ಹಾಕಿ, ಒಂದು ಕಡೆ ಮಾತ್ರ ಗರಿಗರಿಯಾಗುವಂತೆ ದೋಸೆಯನ್ನು ಬೇಯಿಸಿ.
ಒಂದು ಚಮಚ ಆಲೂಗೆಡ್ಡೆ ಮಸಾಲೆಯನ್ನು ಅದರೊಳಗಿರಿಸಿ, ಸ್ವಲ್ಪ ಬೆಣ್ಣೆಯನ್ನು ಸವರಿ. ತ್ರಿಕೋಣಾಕಾರದಲ್ಲಿ ಮಡಚಿ, ಬಿಸಿಬಿಸಿಯಾದ ದೊಸೆಯನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರಿನೊಂದಿಗೆ ಬಡಿಸಿ. ಈ ವಿಧಾನ ಮತ್ತಪ ಪ್ರಮಾಣದಿಂದ ವಿಧಾನದಿಂದ ಸುಮಾರು 12 ದೋಸೆಗಳನ್ನು ತಯಾರಿಸಬಹುದು. ದೋಸೆ ಮಾಡುವುದಕ್ಕೆ ಸೊಂಟ ಬಗ್ಗಬೇಕು. ತೊಂದರೆ ಆದರೂ ಪರವಾಗಿಲ್ಲ. ಮಾಡಿದ್ದನ್ನು ನಗುನಗುತ್ತಾ ಮೆಲ್ಲುವ ಜನ ಇದ್ದರೆ ಮಾಡಿದವರಿಗೂ ಸುಖ, ತಿಂದವರಿಗೂ ತೃಪ್ತಿ.
ಇನ್ನೊಂದು ವಿಧಾನ:
ಈರುಳ್ಳಿ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ಸವರಿ, ನಂತರ ಮಸಾಲೆಯನ್ನು ದೋಸೆಯೊಳಗಿರಿಸಿ, ನಂತರ ಬಡಿಸಿರಿ. ತೆಂಗಿನಕಾಯಿ ಕೆಂಪು ಚಟ್ನಿ ಸವರಿ, ಸ್ವಲ್ಪ ನಿಂಬೆರಸದ ಅನ್ನವನ್ನು ಮಸಾಲೆಯೊಂದಿಗೆ ದೋಸೆಯೊಳಗಿರಿಸಿ, ಬಿಸಿಬಿಸಿಯಾಗಿ ಬಡಿಸಿ.



Click it and Unblock the Notifications
