Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಸ್ವೀಟ್ ಪ್ರಿಯರಿಗೆ ಕಡಲೆಹಿಟ್ಟಿನ ಪೇಡಾ ರೆಸಿಪಿ
Recipes
oi-Shreeraksha
Posted By: Shreeraksha
ಹಬ್ಬ ಅಂದ್ರೆ ನೆನಪಾಗೋದೇ ತರಹೇವಾರಿ ಸಿಹಿತಿಂಡಿಗಳು, ಭಕ್ಷ್ಯ ಭೋಜನ ಇತ್ಯಾದಿ. ಆದರೆ ಪ್ರತಿಸಲ ಹೊರಗಿನಂದಲೇ ಸಿಹಿ ತಂದು ತಿನ್ನುವುದು ಕೆಲವರಿಗೆ ತೃಪ್ತಿ ನೀಡಲಾರದು. ಅಂತಹವರು ಮನೆಯಲ್ಲಿಯೇ ಏನಾದರೂ ಸ್ವೀಟ್ ಮಾಡ್ಬೇಕು ಅಂತ ಯೋಚನೆ ಮಾಡ್ತಾ ಇರ್ತಾರೆ. ಅಂಥವರಿಗೆ ನಾವಿಂದು ಸ್ಪೆಷಲ್ ಕಡಲೆಹಿಟ್ಟಿನ ಪೇಡಾ ರೆಸಿಪಿ ಹೇಳಿಕೊಡಲಿದ್ದೇವೆ.
ಕಡಲೆಹಿಟ್ಟಿನ ಪೇಡಾ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಸ್ವೀಟ್ ಪ್ರಿಯರಿಗೆ ಕಡಲೆಹಿಟ್ಟಿನ
ಪೇಡಾ ರೆಸಿಪಿ
ಸ್ವೀಟ್ ಪ್ರಿಯರಿಗೆ
ಕಡಲೆಹಿಟ್ಟಿನ ಪೇಡಾ ರೆಸಿಪಿ
Prep Time
10 Mins
Cook Time
30M
Total Time
40 Mins
Recipe By: Shreeraksha
Recipe Type: Sweet
Serves: 2
Ingredients
-
ಬೇಕಾಗುವ ಸಾಮಾಗ್ರಿಗಳು:
¼ ಕಪ್ ತುಪ್ಪ
1 ಕಪ್ ಕಡಲೆಹಿಟ್ಟು
¼ ಕಪ್ ಹಾಲಿನ ಪುಡಿ
½ ಕಪ್ ತೆಂಗಿನಕಾಯಿ (ತುರಿದ)
1 ಕಪ್ ಹಾಲು
¾ ಕಪ್ ಸಕ್ಕರೆ
How to Prepare
-
ತಯಾರಿಸುವ ವಿಧಾನ:
- ಮೊದಲು, ಒಂದು ದೊಡ್ಡ ಕಡಾಯಿಯಲ್ಲಿ ¼ ಕಪ್ ತುಪ್ಪ ಮತ್ತು 1 ಕಪ್ ಕಡಲೆಹಿಟ್ಟು ಹಾಕಿ, ಹಸಿ ವಾಸನೆ ಹೋಗುವವರೆಗೆ ಲೋ ಫ್ಲೇಮ್‌ನಲ್ಲಿ ಹುರಿಯಿರಿ.
- 15 ನಿಮಿಷಗಳ ಕಾಲ ಹುರಿದ ನಂತರ, ಕಡಲೆಹಿಟ್ಟು ಗೋಲ್ಡನ್ ಭ್ರೌನ್ ಬಣ್ಣಕ್ಕೆ ತಿರುಗಲು ಪ್ರಾರಂಭವಾಗುತ್ತದೆ.
- ಈಗ ಇದಕ್ಕೆ 1 ಟೀಸ್ಪೂನ್ ತುಪ್ಪ ಸೇರಿಸಿ, ಹುರಿಯುವುದನ್ನು ಮುಂದುವರಿಸಿ.
- ಈ ಹಂತದಲ್ಲಿ ತುಪ್ಪ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ, ಇದು ಸಂಪೂರ್ಣವಾಗಿ ಬೆಂದಿದೆ ಎಂದು ಸೂಚಿಸುತ್ತದೆ.
- ಈಗ ಇದಕ್ಕೆ ¼ ಕಪ್ ಹಾಲಿನ ಪುಡಿ ಮತ್ತು ½ ಕಪ್ ತೆಂಗಿನಕಾಯಿ ಸೇರಿಸಿ, 2 ನಿಮಿಷಗಳ ಕಾಲ ಹುರಿಯಿರಿ.
- ಮುಂದೆ, 1 ಕಪ್ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಮಿಶ್ರಣವು ಹಾಲನ್ನು ಹೀರಿಕೊಂಡು ದಪ್ಪವಾಗಲು ಪ್ರಾರಂಭವಾಗುತ್ತದೆ. ಇದು ಉಂಡೆ ಕಟ್ಟಲು ಬರುವವರೆಗೆ ಬೇಯಿಸಿ.
- ಈಗ ¾ ಕಪ್ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಸಕ್ಕರೆ ಕರಗಿದ ನಂತರ ಅದಕ್ಕೆ 1 ಟೀಸ್ಪೂನ್ ತುಪ್ಪವನ್ನು ಸೇರಿಸಿ.
- ಮಿಶ್ರಣವು ಇನ್ನೂ ಬೆಚ್ಚಗಿರುವಾಗ, ಪೇಡಾ ವಿನ್ಯಾಸದ ಅಚ್ಚು ಬಳಸಿ, ಪೇಡಾ ತಯಾರಿಸಿ.
- ಬಡಿಸುವ ಮೊದಲು ಪೇಡಾವನ್ನು 1 ಗಂಟೆ ಫ್ರಿಜರ್‌ನಲ್ಲಿಡಿ.
- ಈಗ ಸವಿಯಲು ಕಡಲೆಹಿಟ್ಟಿನ ಪೇಡಾ ಸವಿಯು ಸಿದ್ಧ.
Instructions
Nutritional Information
- People - 2
- ಕ್ಯಾಲೋರಿಗಳು - 94 ಕೆ.ಸಿ.ಎಲ್
- ಕೊಬ್ಬು - 4 ಗ್ರಾಂ
- ಪ್ರೋಟೀನ್ - 2 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 12 ಗ್ರಾಂ
- ಫೈಬರ್ - 1 ಗ್ರಾಂ
Comments
[ 5 of 5 - 22 Users]
Story first published: Saturday, November 6, 2021, 15:00 [IST]
Other articles published on Nov 6, 2021



Click it and Unblock the Notifications
