Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಬೆಳಗ್ಗಿನ ತಿಂಡಿಗೆ ಫಟಾಫಟ್ ರೆಡಿ ಮಾಡಬಹುದು ಈ ಕಡಲೆಹಿಟ್ಟಿನ ದೋಸೆ
ಕಡಲೆಹಿಟ್ಟಿನಿಂದ ಗರಿಗರಿಯಾದ ಪಕೋಡ, ಪೋಡಿ ಮಾಡಬಹುದೆಂದು ಎಲ್ಲರಿಗೂ ಗೊತ್ತು. ಆದರೆ ಇದೇ ಕಡಲೆಹಿಟ್ಟಿನಿಂದ ದೋಸೆಯನ್ನು ಎಂದಾದರೂ ಟ್ರೈ ಮಾಡಿದ್ದೀರಾ? ಹೌದು, ಬೆಳಗ್ಗಿನ ಉಪಹಾರಕ್ಕೆ ಗರಿಗರಿಯಾದ ರುಚಿಯಾದ ದೋಸೆಯನ್ನು ಈ ಕಡಲೆಹಿಟ್ಟಿನಿಂದ ತಯಾರಿಸಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಪದಾರ್ಥಗಳು:
1.5 ಕಪ್ ಕಡಲೆಹಿಟ್ಟು
¼ ಕಪ್ ರವೆ
¼ ಕಪ್ ಅಕ್ಕಿ ಹಿಟ್ಟು
ಅರ್ಧ ಚಮಚ ಓಂಕಾಳು
¼ ಚಮಚ ಅರಿಶಿನ
½ ಚಮಚ ಮೆಣಸಿನ ಪುಡಿ
¾ ಚಮಚ ಉಪ್ಪು
ನೀರು
ಎಣ್ಣೆ
-
ಮಾಡುವ ವಿಧಾನ:
ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ 1.5 ಕಪ್ ಕಡಲೆಹಿಟ್ಟು, ¼ ಕಪ್ ರವೆ ಮತ್ತು ¼ ಕಪ್ ಅಕ್ಕಿ ಹಿಟ್ಟು ಹಾಕಿ. ಅದಕ್ಕೆ
½ ಚಮಚ ಓಂಕಾಳು , ¼ ಚಮಚ ಅರಿಶಿನ, ½ ಚಮಚ ಮೆಣಸಿನ ಪುಡಿ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅದಕ್ಕೆ 2 ಕಪ್ ನೀರು ಸೇರಿಸಿ, ಯಾವುದೇ ಉಂಡೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
ಇದು ನೀರು ದೋಸೆ ಹಿಟ್ಟಿನಂತೆ ಆಗಲು, ಈಗ ಅಗತ್ಯವಿರುವಷ್ಟು ನೀರನ್ನು ಸೇರಿಸಿ.
ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ.
ಕಾದ ನಂತರ ಪ್ಯಾನ್ ಗೆ ಹಿಟ್ಟು ಸುರಿಯಿರಿ.
2 ನಿಮಿಷ ಅಥವಾ ದೋಸೆ ಗರಿಗರಿಯಾಗುವವರೆಗೆ ಬೇಯಲು ಬಿಡಿ.
ನಂತರ ಮತ್ತೊಂದು ಬದಿಗೆ ತಿರುಗಿಸಿ ಮತ್ತು ಗೋಲ್ಡನ್ ಬ್ರೌನ್ ಕಾಯಿಸಿ.
ಅಂತಿಮವಾಗಿ, ಚಟ್ನಿಯೊಂದಿಗೆ ಕಡಲೆಹಿಟ್ಟಿನ ದೋಸೆ ಸವಿಯಲು ಸಿದ್ಧ.
- People - 2
- ಕ್ಯಾಲೋರಿಗಳು - 50 ಕೆ.ಸಿ.ಎಲ್
- ಕೊಬ್ಬು - 1 ಗ್ರಾಂ
- ಪ್ರೋಟೀನ್ - 2 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 8 ಗ್ರಾಂ



Click it and Unblock the Notifications