For Quick Alerts
For Daily Alerts
Just In
Don't Miss
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Besan Barfi Recipe: ಸ್ವೀಟ್ ಪ್ರಿಯರಿಗಾಗಿ ದಿಢೀರ್ ಕಡಲೆಹಿಟ್ಟಿನ ಬರ್ಫಿ
Recipes
oi-Shreeraksha
Posted By: Shreeraksha
|
ಮನೆಗೆ ಯಾರಾದರೂ ದಿಢೀರ್ ಅತಿಥಿಗಳು ಬಂದಾಗ, ಅವರಿಗಾಗಿ ಸಿಹಿತಿಂಡಿಗಳನ್ನು ಮಾಡೋದು ರೂಢಿ. ಆದರೆ, ಮನೆಯಲ್ಲಿ ಏನೂ ಇಲ್ಲದಾಗ, ಯಾವ ಸ್ವೀಟ್ಸ್ ಮಾಡೋದು ಅಂತ ಯೋಚನೆ ಶುರುವಾಗೋದುಂಟು. ಅಂತಹವರಿಗಾಗಿ ನಾವಿಂದು ಸುಲಭ ಹಾಗೂ ಹೆಚ್ಚು ಖರ್ಚಿಲ್ಲದೇ ತಯಾರಿಸುವಂತಹ ಬರ್ಫಿ ರೆಸಿಪಿಯೊಂದನ್ನು ತಿಳಿಸಿಕೊಡಲಿದ್ದೇವೆ.
ಸ್ವೀಟ್ ಪ್ರಿಯರಿಗಾಗಿ ದಿಢೀರ್
ಕಡಲೆಹಿಟ್ಟಿನ ಬರ್ಫಿ
ಸ್ವೀಟ್ ಪ್ರಿಯರಿಗಾಗಿ ದಿಢೀರ್
ಕಡಲೆಹಿಟ್ಟಿನ ಬರ್ಫಿ
Prep Time
5 Mins
Cook Time
30M
Total Time
35 Mins
Recipe By: Shreeraksha
Recipe Type: Snacks
Serves: 2
Ingredients
-
ಬೇಕಾಗುವ ಪದಾರ್ಥಗಳು:
1 ಕಪ್ ತುಪ್ಪ
3 ಕಪ್ ಕಡಲೆಹಿಟ್ಟು
2 ಟೀಸ್ಪೂನ್ ರವೆ
1½ ಕಪ್ ಸಕ್ಕರೆ
ಪಿಂಚ್ ಕೇಸರಿ ಆಹಾರ ಬಣ್ಣ
¼ ಟೀಸ್ಪೂನ್ ಏಲಕ್ಕಿ ಪುಡಿ
How to Prepare
-
ತಯಾರಿಸುವ ವಿಧಾನ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 1 ಕಪ್ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ 3 ಕಪ್ ಕಡಲೆಹಿಟ್ಟು ಸೇರಿಸಿ, ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ. ಇದು ತುಪ್ಪವನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತದೆ.
- ಆಮೇಲೆ ಅದಕ್ಕೆ 2 ಟೀಸ್ಪೂನ್ ರವೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷಗಳ ಕಾಲ ಕಡಿಮೆ ಲೋ ಫ್ಲೇಮ್ನಲ್ಲಿ ಹುರಿಯುವುದನ್ನು ಮುಂದುವರಿಸಿ.
- ಈಗ, ಕಡಲೆಹಿಟ್ಟು, ತುಪ್ಪವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಅದು ಗೋಲ್ಡನ್ ಬ್ರೌನ್ ಮತ್ತು ನಯವಾದ ಸ್ಥಿರತೆಗೆ ತಿರುಗುವವರೆಗೆ ಹುರಿಯಿರಿ.
- ಆಮೇಲೆ, ದೊಡ್ಡ ತಟ್ಟೆಗೆ ವರ್ಗಾಯಿಸಿ, ಪಕ್ಕಕ್ಕೆ ಇಡಿ.
- ಮತ್ತೊಂದು ಕಡೆ, ದೊಡ್ಡ ಕಡಾಯಿಯಲ್ಲಿ 1½ ಕಪ್ ಸಕ್ಕರೆ ಮತ್ತು ½ ಕಪ್ ನೀರು ಹಾಕಿ, ಸಕ್ಕರೆ ಕರಗಿಸಿ.
- ಈಗ ಪಿಂಚ್ ಕೇಸರಿ ಫುಡ್ ಕಲರ್ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಹುರಿದ ಕಡಲೆಹಿಟ್ಟು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಆಫ್ ಮಾಡಿ. ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ, ಅದನ್ನು ಬೇಕಿಂಗ್ ಪೇಪರ್ನಿಂದ ಮುಚ್ಚಿದ ಟ್ರೇಗೆ ವರ್ಗಾಯಿಸಿ, ಚೆನ್ನಾಗಿ ಹೊಂದಿಸಿಕೊಳ್ಳಿ.
- ನಂತರ ಇದನ್ನು30 ನಿಮಿಷಗಳ ಕಾಲ ಬಿಟ್ಟು, ನಿಮಗೆ ಬೇಕಾದ ಆಕಾರದ ತುಂಡುಗಳಾಗಿ ಕತ್ತರಿಸಿ.
- ಈಗ ಸವಿಯಲು ಕಡಲೆಹಿಟ್ಟಿನ ಬರ್ಫಿ ಸವಿಯಲು ಸಿದ್ಧ.
Instructions
Nutritional Information
- People - 2
- ಕ್ಯಾಲೋರಿಗಳು - 165 ಕೆ.ಸಿ.ಎಲ್
- ಕೊಬ್ಬು - 8 ಗ್ರಾಂ
- ಪ್ರೋಟೀನ್ - 3 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 20 ಗ್ರಾಂ
Comments
[ 5 of 5 - 54 Users]
GET THE BEST BOLDSKY STORIES!
Allow Notifications
You have already subscribed