ಕೃಷ್ಣ ಜನ್ಮಾಷ್ಟಮಿ ವಿಶೇಷ- ರುಚಿ ರುಚಿ ಬಾಸುಂದಿ ರೆಸಿಪಿ

Posted By: Lekhaka
Subscribe to Boldsky

ಬಾಸುಂದಿ ಎಂಬುದು ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಗುಜರಾತ್, ಮಹರಾಷ್ಟ್ರ ಮತ್ತು ಕರ್ನಾಟಕದ ವಿಶೇಷ ಸಿಹಿ ತಿನಿಸು ಎಂದು ಪರಿಗಣಿಸಲಾಗಿದೆ. ಉತ್ಸವಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಇದನ್ನು ತಯಾರಿಸುತ್ತಾರೆ. ಹಾಲು ಆಧಾರಿತ ಸಿಹಿ ತಿಂಡಿಯಾದ ಇದನ್ನು ಕುದಿಸಿ ಅರ್ಧ ಪ್ರಮಾಣಕ್ಕೆ ಇಳಿಸಲಾಗುತ್ತದೆ. ನಂತರ ಇದಕ್ಕೆ ಏಲಕ್ಕಿ ಪುಡಿ, ಒಣ ಹಣ್ಣುಗಳನ್ನು ಸೇರಿಸಲಾಗುವುದು.

ಸಾಮಾನ್ಯವಾಗಿ ಉತ್ಸವಗಳಲ್ಲಿ ವಿಶೇಷ ತಿಂಡಿಯಾಗಿ ತಯಾರಿಸುವ ಬಾಸುಂದಿ, ಗುಜರಾತ್‍ನ ವಿವಾಹ ಸಮಾರಂಭದಲ್ಲಿ ತಯಾರಿಸುವ ಪ್ರಮುಖ ಸಿಹಿ ತಿಂಡಿಯೂ ಹೌದು. ಇದನ್ನು ಬಿಸಿ ಬಿಸಿಯಾಗಿ ಅಥವಾ ಫ್ರಿಜ್‍ನಲ್ಲಿಟ್ಟು ತಂಪಾಗಿಸಿ ಸೇವಿಸುತ್ತಾರೆ. ಕೆಲವರು ಇದನ್ನು ಪೂರಿಯ ಜೊತೆಯೂ ಸೇವಿಸುತ್ತಾರೆ.

ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುವ ಈ ಸಿಹಿಯ ಪಾಕವಿಧಾನಕ್ಕೆ ಅತಿ ಹೆಚ್ಚು ಸಮಯದ ಅಗತ್ಯ ವಿರುವುದಿಲ್ಲ. ಒಮ್ಮೆ ಸವಿದರೆ ಮತ್ತೆ ಮತ್ತೆ ಬಾಯಿ ಚಪ್ಪರಿಸುವಂತೆ ಮಾಡುವ ಈ ಸಿಹಿ ತಿಂಡಿಯ ಪಾಕವಿಧಾನವನ್ನು ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಇಲ್ಲಿ ನೀಡುತ್ತಿದ್ದೇವೆ.

ಬಾಸುಂದಿ ವಿಡಿಯೋ ರೆಸಿಪಿ

basundi recipe
ಬಾಸುಂದಿ ರೆಸಿಪಿ | ಬಾಸುಂದಿ ರೆಸಿಪಿ ಮಾಡುವ ವಿಧಾನ | ಸ್ಟೆಪ್ ಬೈ ಸ್ಟೆಪ್ ಬಾಸುಂದಿ ರೆಸಿಪಿ | ಬಾಸುಂದಿ ವಿಡಿಯೋ ರೆಸಿಪಿ
ಬಾಸುಂದಿ ರೆಸಿಪಿ | ಬಾಸುಂದಿ ರೆಸಿಪಿ ಮಾಡುವ ವಿಧಾನ | ಸ್ಟೆಪ್ ಬೈ ಸ್ಟೆಪ್ ಬಾಸುಂದಿ ರೆಸಿಪಿ | ಬಾಸುಂದಿ ವಿಡಿಯೋ ರೆಸಿಪಿ
Prep Time
5 Mins
Cook Time
30M
Total Time
35 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 2 ಮಂದಿಗೆ

Ingredients
 • ಗಟ್ಟಿ ಹಾಲು/ಕ್ರೀಮ್ ಮಿಶ್ರಿತ ಹಾಲು - 1/2 ಲೀ

  ಸಕ್ಕರೆ - 3 ಟೇಬಲ್ ಚಮಚ

  ಹಚ್ಚಿದ ಗೋಡಂಬಿ - 4 ಟೀ ಚಮಚ

  ಹಚ್ಚಿದ ಬಾದಾಮಿ - 4 ಟೀ ಚಮಚ

  ಏಲಕ್ಕಿ ಪುಡಿ - 1/2 ಟೀ ಚಮಚ

Red Rice Kanda Poha
How to Prepare
 • 1. ನಾನ್ ಸ್ಟಿಕ್ ಪಾತ್ರೆ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ.

  2. ಹಾಲನ್ನು ಚೆನ್ನಾಗಿ ಕುದಿಸಿ, ಹಾಲು ತಳ ಹಿಡಿಯದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಿ.

  3. ಹಾಲು ಕುದಿಯುವಿಕೆಯಿಂದಲೇ ಅರ್ಧ ಪ್ರಮಾಣಕ್ಕೆ ಬರಬೇಕು.

  4. ಸಕ್ಕರೆಯನ್ನು ಸೇರಿಸಿ 2-3 ನಿಮಿಷ ಕುದಿಯಲು ಬಿಡಿ.

  5. ಹಚ್ಚಿಕೊಂಡ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ.

  6. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

  7. ಉರಿಯನ್ನು ಆರಿಸುವ ಮುನ್ನ ಏಲಕ್ಕಿ ಪುಡಿಯನ್ನು ಸೇರಿಸಿ, ಸವಿಯಲು ನೀಡಿ.

Instructions
 • 1. ಹಾಲು ಕುದಿಯುವಾಗ ಕೈಯಾಡಿಸುತ್ತಲೇ ಇರಿ. ಇದರಿಂದ ಹಾಲು ಪಾತ್ರೆಯ ತಳ ಮತ್ತು ಬದಿ ಹಿಡಿಯುವುದನ್ನು ತಡೆಯಬಹುದು.
 • 2. ಹಾಲನ್ನು ಸಾಮಾನ್ಯ ಉರಿಯಲ್ಲಿ ಇರಿಸುವುದರಿಂದ ತಳ ಹಿಡಿಯುವುದನ್ನು ತಡೆಯಬಹುದು.
 • 3. ಹಾಲಿನ ಪ್ರಮಾಣ ಅರ್ಧವಾದ ನಂತರವೇ ಸಕ್ಕರೆಯನ್ನು ಸೇರಿಸಬೇಕು. ಇಲ್ಲವಾದರೆ ಬಹು ಬೇಗ ಹಾಲು ದಪ್ಪವಾದ ವಿನ್ಯಾಸಕ್ಕೆ ಬರದು.
 • 4. ಇದರ ರುಚಿ ಹಾಗೂ ಬಣ್ಣವನ್ನು ಹೆಚ್ಚಿಸಲು ಕೇಸರಿ ಎಳೆಯನ್ನು ಸೇರಿಸಬಹುದು.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರಿ - 398 ಕ್ಯಾಲ್
 • ಫ್ಯಾಟ್ - 17 ಗ್ರಾಂ.
 • ಪ್ರೋಟೀನ್ - 14 ಗ್ರಾಂ.
 • ಕಾರ್ಬೋಹೈಡ್ರೇಟ್ - 48 ಗ್ರಾಂ.
 • ಸಕ್ಕರೆ - 46 ಗ್ರಾಂ
 • ಐರನ್ - ಶೇ.1
 • ವಿಟಮಿನ್ ಎ - ಶೇ. 9

ಬಾಸುಂದಿ ಹಂತ ಹಂತವಾದ ಪಾಕವಿಧಾನ:

1. ನಾನ್ ಸ್ಟಿಕ್ ಪಾತ್ರೆ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ.

basundi recipe

2. ಹಾಲನ್ನು ಚೆನ್ನಾಗಿ ಕುದಿಸಿ, ಹಾಲು ತಳ ಹಿಡಿಯದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಿ.

basundi recipe
basundi recipe

3. ಹಾಲು ಕುದಿಯುವಿಕೆಯಿಂದಲೇ ಅರ್ಧ ಪ್ರಮಾಣಕ್ಕೆ ಬರಬೇಕು.

basundi recipe

4. ಸಕ್ಕರೆಯನ್ನು ಸೇರಿಸಿ 2-3 ನಿಮಿಷ ಕುದಿಯಲು ಬಿಡಿ.

basundi recipe
basundi recipe

5. ಹಚ್ಚಿಕೊಂಡ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ.

basundi recipe
basundi recipe

6. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

basundi recipe

7. ಉರಿಯನ್ನು ಆರಿಸುವ ಮುನ್ನ ಏಲಕ್ಕಿ ಪುಡಿಯನ್ನು ಸೇರಿಸಿ, ಸವಿಯಲು ನೀಡಿ.

basundi recipe
basundi recipe
basundi recipe
basundi recipe
[ 4.5 of 5 - 44 Users]
Story first published: Tuesday, August 8, 2017, 15:25 [IST]
Please Wait while comments are loading...
Subscribe Newsletter