Latest Updates
-
ಸಿಎಟಿ 2026: ಪರೀಕ್ಷೆಯ ದಿನ ಸಂಗಾತಿಯ ಒತ್ತಡ ಕಡಿಮೆ ಮಾಡಿ, ಬೆಂಬಲ ನೀಡುವುದು ಹೇಗೆ? -
ಬರ್ಡ್ ಫ್ಲೂ ಆತಂಕ: ಮೊಟ್ಟೆ, ಚಿಕನ್ ಬೆಲೆ ಏರಿಕೆ ಭೀತಿ ನಡುವೆ ಪ್ರೋಟೀನ್ ಪಡೆಯಲು ಬೆಸ್ಟ್ ಪರ್ಯಾಯಗಳಿವು! -
ದಿಲ್ಜಿತ್ ದೋಸಾಂಜ್ ಬೆಂಗಳೂರು ಕನ್ಸರ್ಟ್: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉತ್ತರ ಭಾರತದಲ್ಲಿ ದಟ್ಟ ಮಂಜಿನ ಎಚ್ಚರಿಕೆ: ಚಳಿಗಾಲದಲ್ಲಿ ವಾಕಿಂಗ್ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ! -
ಬಿಹಾರದ 4 ಲಕ್ಷ ಜನರ ಮದುವೆ ವೈರಲ್: ಇಂತಹ ಬೃಹತ್ ಸಮಾರಂಭಗಳಲ್ಲಿ ನೀವು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಪರ್ಯಾಯ ಬಳಸುವುದು ಹೇಗೆ? -
ತಮಿಳುನಾಡು, ಕೇರಳದಲ್ಲಿ ಸಿಡಿಲು-ಮಳೆ ಅಬ್ಬರ: ಪ್ರಯಾಣಿಕರೇ ಎಚ್ಚರ, ಈ ಮುನ್ನೆಚ್ಚರಿಕೆ ಪಾಲಿಸಿ! -
ದೆಹಲಿ ಮಾಲಿನ್ಯ: ಉಸಿರುಗಟ್ಟುವ ಗಾಳಿಯಲ್ಲಿ ಆರೋಗ್ಯ ರಕ್ಷಣೆ ಹೇಗೆ? 12 ನಿಮಿಷದ ವರ್ಕೌಟ್ ಮತ್ತು ಮಾಸ್ಕ್ ಟಿಪ್ಸ್ -
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ!
ಬಾಳೆಕಾಯಿ ತವಾ ಫ್ರೈ ರೆಸಿಪಿ
ಬಾಳೆಕಾಯಿಯ ಬೋಂಡಾ, ಬಾಳೆಕಾಯಿ ಪಲ್ಯ, ಸಾಂಬಾರ್ ಇತ್ಯಾದಿ ಅಡುಗೆಗಳು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಬಾಳೆಕಾಯಿಯ ಬೋಂಡಾ ಮಾಡಲು ಹೋದರೆ ಎಷ್ಟು ಎಣ್ಣೆ ಇದ್ದರೂ ಸಾಲದು ಅನ್ನಿಸುತ್ತದೆ. ಅಡುಗೆಯಲ್ಲಿ ಅತಿಯಾಗಿ ಎಣ್ಣೆ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದೇ ಇದೆ. ಹಾಗಾಗಿ ಕಡಿಮೆ ಎಣ್ಣೆ ಖರ್ಚಿನಲ್ಲಿ ರುಚಿರುಚಿಯಾದ ಬಾಳೆಕಾಯಿ ಅಡುಗೆ ಮಾಡುವುದು ಹೇಗೆ ನಾವಿಲ್ಲಿ ತಿಳಿಸುತ್ತಿದ್ದೇವೆ.

ಬಾಳೆಕಾಯಿಯ ತವಾ ಫ್ರೈ. ಬಾಯಲ್ಲಿ ಇಟ್ಟ ಕೂಡ್ಲೆ ವಾವ್ ಯಮ್ಮಿ ಯಮ್ಮಿ ಅನ್ನಬೇಕು ಅಂತದ್ದೊಂದು ಬೊಂಬಾಟ್ ರೆಸಿಪಿ. ಮಕ್ಕಳಿಗಂತೂ ಚಪ್ಪರಿಸಿಕೊಂಡು ತಿನ್ನಬೇಕು ಅನ್ನಿಸುವಂತಹ ಸೂಪರ್ ರೆಸಿಪಿ ಇದು. ಎಣ್ಣೆಯೂ ಅಧಿಕ ಬೇಡ, ಸಮಯವೂ ಹೆಚ್ಚು ಬೇಡದ ಫಟಾಫಟ್ ರೆಸಿಪಿ.ಏನಾದ್ರೂ ತಿನ್ನೊಕೆ ಕೊಡು ಅಮ್ಮಾ ಅಂತ ಪದೇ ಪದೇ ಪೀಡಿಸೋ ಮಕ್ಕಳಿಗೆ ಕೇಳಿದ ಕೂಡಲೇ ಮಾಡಿಕೊಡಬಹುದಾದ ಒಂದು ರೆಪಿಸಿ ಇದು. ಹೇಗೆ ಮಾಡೋದು ಅನ್ನೋ ಕುತೂಹಲವಿದ್ದರೆ ಮುಂದೆ ಓದಿ.
Recipe By: Sushma Chatra
Recipe Type: Side Dish
Serves: 3
-
ಬೇಕಾಗುವ ಸಾಮಗ್ರಿಗಳು
ಬಾಳೆಕಾಯಿ- ನಾಲ್ಕು
ಅರಾರೊಟ್ಟಿನ ಪುಡಿ- 5 ಚಮಚ
ಕಡಲೆಹಿಟ್ಟು - 7 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ- ಒಂದು ಚಮಚ
ಪುದೀನಾ ಎಲೆಗಳು -5 ರಿಂದ 10
ಖಾರದ ಪುಡಿ - ಎರಡು ಚಮಚ
ಇಂಗು - ಚಿಟಿಕೆ
ಗರಂ ಮಸಾಲ ಪುಡಿ ಅಥವಾ ಚಾಟ್ ಮಸಾಲ ಪುಡಿ - ಅರ್ಧ ಚಮಚ
ಕೊಬ್ಬರಿ ಎಣ್ಣೆ - 20 ಸ್ಪೂನ್
-
ಮಾಡುವ ವಿಧಾನ -
. ಬಾಳೆಕಾಯಿಯನ್ನು ತೆಳ್ಳಗೆ ಹೆಚ್ಚಿ ನೀರಿಗೆ ಹಾಕಿಕ್ಕೊಳ್ಳಿ.
. ಒಂದು ಪಾತ್ರೆಯಲ್ಲಿ ಅರಾರೊಟ್ಟಿನ ಪುಡಿಯನ್ನು ಹಾಕಿ ಸ್ವಲ್ಪ ತಣ್ಣೀರು ಸೇರಿಸಿ ಮೊದಲು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
. ಅದಕ್ಕೆ ಕಡಲೆ ಹಿಟ್ಟು ಸೇರಿಸಿ ನಂತರ ಉಳಿದ ಎಲ್ಲಾ ಪುಡಿಗಳು,ಉಪ್ಪು, ಖಾರಗಳನ್ನು ಹಾಕಿ ದೋಸೆ ಹಿಟ್ಟಿನ ಹದದಲ್ಲಿ ಮಿಶ್ರಣ ರೆಡಿ ಮಾಡಿಕೊಳ್ಳಿ.
. ಇದಕ್ಕೆ ಸಣ್ಣಗೆ ಹೆಚ್ಚಿದ ಪುದೀನಾ ಎಲೆಗಳನ್ನು ಸೇರಿಸಿಕೊಳ್ಳಿ.
. ನಂತರ ಬಾಳೆಕಾಯಿಯನ್ನು ಈ ಮಿಶ್ರಣದಲ್ಲಿ ಅದ್ದಿ ಬಿಸಿಬಿಸಿ ಖಾವಲಿಯ ಮೇಲೆ ಇಡಿ.
. ಪ್ರತಿಯೊಂದು ಬಾಳೆಕಾಯಿ ತುಂಡಿಗೂ ಅರ್ಧ ಸ್ಪೂನ್ ಎಣ್ಣೆ ಹಾಕಿ ಒಂದೆರಡು ನಿಮಿಷ ಬೇಯಿಸಿ.
. ನಂತರ ಬಾಳೆಕಾಯಿಯ ಇನ್ನೊಂದು ಬದಿಯನ್ನು ಮಗುಚಿ ಬೇಯಿಸಿ.
. ರುಚಿ ರುಚಿ ಬಾಳೆಕಾಯಿಯ ತವಾ ಫ್ರೈ ಸಿದ್ಧವಾದಂತೆ. ಸಂಜೆಯ ಸ್ನ್ಯಾಕ್ಸ್ ಗೆ, ಊಟದ ಸೈಡ್ಸ್ ಆಗಿ ಬಳಸಬಹುದು.
- ಬಾಳೆಕಾಯಿಯನ್ನು ಹೆಚ್ಚಿ ಹೆಚ್ಚು ಸಮಯ ಹಾಗೆಯೇ ಬಿಟ್ಟರೆ ಕಪ್ಪಾಗುತ್ತದೆ. ಹಾಗಾಗಿ ಹೆಚ್ಚಿದ ಕೂಡಲೇ ಅಥವಾ ಸಿಪ್ಪೆ ತೆಗೆದ ಕೂಡಲೇ ನೀರಿಗೆ ಹಾಕಿಕೊಳ್ಳಬೇಕು. ಬಾಳೆಕಾಯಿ ಹೆಚ್ಚುವಾಗ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡರೆ ಅಥವಾ ನೀರು ಮುಟ್ಟಿಕೊಂಡು ಹೆಚ್ಚಿದರೆ ಅಂಟು ಅನ್ನಿಸುವುದಿಲ್ಲ. ಇನ್ನು ಬಾಳೆಕಾಯಿ ಬಹಳ ಬೇಗನೆ ಬೇಯುವ ತರಕಾರಿಗಳಲ್ಲಿ ಒಂದಾಗಿದೆ. ಬಾಳೆಕಾಯಿಯಲ್ಲಿ ಅನೇಕ ವಿಧಗಳಿದ್ದು ಎಲ್ಲವನ್ನೂ ಹೀಗೆ ಫ್ರೈ ಮಾಡುವುದಕ್ಕೆ ಬಳಸಿದರೆ ಅಷ್ಟು ರುಚಿ ಅನ್ನಿಸಲಾರದು.



Click it and Unblock the Notifications
