Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಾಯಲ್ಲಿ ನೀರೂರಿಸುತ್ತೆ ನವರಾತ್ರಿ ಸ್ಪೆಷಲ್ ಬಾದಾಮಿ ಲಡ್ಡು..
Recipes
oi-Shreeraksha
Posted By: Shreeraksha
ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬಗಳ ಪರ್ವ ಆರಂಭವಾಗಲಿದೆ. ನವರಾತ್ರಿ, ಅದಾದ ಬಳಿಕ ದೀಪಾವಳಿ ಹೀಗೆ ನಾನಾ ಹಬ್ಬಗಳು ನಮ್ಮ ಮುಂದಿದೆ. ಹಬ್ಬ ಅಂದ್ರೆ ನೆನಪಾಗೋದು, ಸಂಭ್ರಮ, ಉಡುಗೆ-ತೊಡುಗೆ ಜೊತೆಗೆ ಸಿಹಿತಿಂಡಿಗಳು. ಹೌದು, ಅಮ್ಮ ಮಾಡೋ ವಿವಿಧ ತರಹದ ಸ್ವೀಟ್‌ಗಳು ಎಲ್ಲರ ಫೇವರೆಟ್. ಆದ್ರೆ ಪ್ರತಿಸಲ ವಿಭಿನ್ನವಾದುದು ಮಾಡೋದಾದ್ರೂ ಏನು? ಅದೇ ರವೆ ಲಡ್ಡು, ಒಬ್ಬಟ್ಟು ಮಾಡಿ, ಬೇಜಾರಾಗಿದ್ಯಾ? ಹಾಗಾದ್ರೆ ಈ ಬಾರಿಯ ಹಬ್ಬಗಳಿಗೆ ಈ ಬಾದಾಮಿ ಲಡ್ಡು ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ.

ಬಾದಾಮಿ ಲಡ್ಡು ತಯಾರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ಬಾಯಲ್ಲಿ ನೀರೂರಿಸುತ್ತೆ ನವರಾತ್ರಿ
ಸ್ಪೆಷಲ್ ಬಾದಾಮಿ ಲಡ್ಡು..
ಬಾಯಲ್ಲಿ ನೀರೂರಿಸುತ್ತೆ
ನವರಾತ್ರಿ ಸ್ಪೆಷಲ್ ಬಾದಾಮಿ ಲಡ್ಡು..
Prep Time
10 Mins
Cook Time
15M
Total Time
25 Mins
Recipe By: Shreeraksha
Recipe Type: Snacks
Serves: 2
Ingredients
-
ಬೇಕಾಗುವ ಪದಾರ್ಥಗಳು:
1 ಕಪ್ ಬಾದಾಮಿ
1 ಕಪ್ ತುರಿದ ಕೊಬ್ಬರಿ
¾ ಕಪ್ ಬೆಲ್ಲ
¼ ಟೀಸ್ಪೂನ್ ಏಲಕ್ಕಿ ಪುಡಿ
2 ಚಮಚ ತುಪ್ಪ
10 ಗೋಡಂಬಿ
2 ಚಮಚ ಒಣದ್ರಾಕ್ಷಿ
How to Prepare
-
ತಯಾರಿಸುವ ವಿಧಾನ:
- ಮೊದಲಿಗೆ, ಬಾಣಲೆಯಲ್ಲಿ 1 ಕಪ್ ಬಾದಾಮಿಯನ್ನು ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೂ ಹುರಿದುಕೊಳ್ಳಿ.
- ಅದನ್ನು ತಣ್ಣಗಾಗಲು ಬಿಟ್ಟು, ನಂತರ ಮಿಕ್ಸಿಗೆ ಹಾಕಿ, ಚೆನ್ನಾಗಿ ಪುಡಿ ಮಾಡಿಕೊಳ್ಳಿ.
- ಇದನ್ನು ದೊಡ್ಡ ಬಟ್ಟಲಿಗೆ ಹಾಕಿ, ಪಕ್ಕಕ್ಕೆ ಇಡಿ.
- ಈಗ ಅದೇ ಬಾಣಲೆಗೆ 1 ಕಪ್ ಒಣ ತೆಂಗಿನಕಾಯಿಯನ್ನು ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
- ಹುರಿದ ತೆಂಗಿನಕಾಯಿಯನ್ನು ¾ ಕಪ್ ಬೆಲ್ಲದೊಂದಿಗೆ ಮಿಕ್ಸಿಗೆ ಹಾಕಿ, ತರಿತರಿಯಾರಿ ಪುಡಿಮಾಡಿ.
- ಇದನ್ನು ಅದೇ ಬಾದಮ್ ಪೌಡರ್ ಇರುವ ಬೌಲ್‌ಗೆ ಹಾಕಿಕೊಳ್ಳಿ, ಜತೆಗೆ, ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ, 10 ಗೋಡಂಬಿ ಮತ್ತು 2 ಚಮಚ ಒಣದ್ರಾಕ್ಷಿ ಹುರಿದುಕೊಳ್ಳಿ.
- ಹುರಿದ ಡ್ರೈ ಫ್ರೂಟ್ಸ್‌ಗಳನ್ನು ಲಡ್ಡುವಿನ ಮಿಶ್ರಣಕ್ಕೆ ಸುರಿಯಿರಿ, ಚೆನ್ನಾಗಿ ಮಿಶ್ರಣ ಮಾಡಿ.
- ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು, ಲಡ್ಡು ಕಟ್ಟಲು ಪ್ರಾರಂಭಿಸಿ, ಅಂದರೆ ಕೈಗಳಿಂದ ಉಂಡೆ ಕಟ್ಟಿ, ಲಡ್ಡು ತಯಾರಿಸಿ.
- ಅಂತಿಮವಾಗಿ, ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಡಿ.
- ಇದನ್ನು 2 ವಾರಗಳವರೆಗೆ ಇಟ್ಟು ಸವಿಯಬಹುದು.
Instructions
Nutritional Information
- People - 2
- ಕ್ಯಾಲೋರಿ - 146ಕೆ
- ಕೊಬ್ಬು - 13ಗ್ರಾ
- ಪ್ರೋಟೀನ್ - 3ಗ್ರಾ
- ಕಾರ್ಬ್ಸ್ - 3ಗ್ರಾ
Comments
[ 4.5 of 5 - 53 Users]
Story first published: Wednesday, September 29, 2021, 13:25 [IST]
Other articles published on Sep 29, 2021



Click it and Unblock the Notifications
