For Quick Alerts
ALLOW NOTIFICATIONS  
For Daily Alerts

ಕಾಫಿ ಜೊತೆ ಬಿಸಿ ಬಿಸಿ ಅವರೆಕಾಳು ಆಂಬೋಡೆ ಒಂದ್ಸಲ ಟ್ರೈ ಮಾಡಿ

Posted By:
|

ಮಸಾಲೆ ವಡೆ ಸಾಮಾನ್ಯವಾಗಿ ಎಲ್ಲರೂ ತಿಂದಿರ್ತೀರಾ, ಆದರೆ ಅವರೆಕಾಳು ಅಂಬೋಡೆಯು ಒಂದು ವಿಶಿಷ್ಟ ಮಸಾಲ ವಡೆಯಾಗಿದೆ. ಇದನ್ನು ಅವರೆ ಬೇಳೆ ಅಂಬೋಡೆ ಅಥವಾ ಅವೆಕಾಳು ಅಂಬೋಡೆ ಎಂದು ಕರೆಯುತ್ತಾರೆ. ಈ ಪಾಕವಿಧಾನವು ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದ್ದು, ಆರೋಗ್ಯಕರವಾದ ಅವರೆಕಾಳು ಹಾಗೂ ರುಚಿಕರವಾದ ಮಸಾಲೆಗಳೊಂದಿಗೆ ಅದ್ಭುತ ರುಚಿಯನ್ನು ನೀಡುತ್ತದೆ. ಬಿಸಿ-ಬಿಸಿಯಾದ ಕಾಫಿ ಮತ್ತು ಟೀ ಯೊಂದಿಗೆ ಅಂಬೋಡೆ ಇಟ್ಟರೆ ಸೂರ್ಯ ಮುಳುಗಿದ್ದೇ ಅರಿವಿಗೆ ಬಾರದು. ಬಹಳ ಸುಲಭ ಹಾಗೂ ಸರಳವಾದ ವಿಧಾನದ ಮೂಲಕ ಈ ತಿಂಡಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ನೀವು ಈ ಪಾಕವಿಧಾನವನ್ನು ತಯಾರಿಸಿ, ನಿಮ್ಮವರಿಗೆ ಉಣಬಡಿಸಿ.

 Avarekalu Masala Vada Recipe In Kannada
ಕಾಫಿ ಜೊತೆ ಬಿಸಿ ಬಿಸಿ ಅವರೆಕಾಳು ಆಂಬೋಡೆ ಒಂದ್ಸಲ ಟ್ರೈ ಮಾಡಿ
ಕಾಫಿ ಜೊತೆ ಬಿಸಿ ಬಿಸಿ ಅವರೆಕಾಳು ಆಂಬೋಡೆ ಒಂದ್ಸಲ ಟ್ರೈ ಮಾಡಿ
Prep Time
10 Mins
Cook Time
15M
Total Time
25 Mins

Recipe By: Shreeraksha

Recipe Type: Vegetarian

Serves: 2

Ingredients
  • ಪ್ರಮುಖ ಸಾಮಗ್ರಿಗಳು:

    1 ಕಪ್‌ ಅವರೆಕಾಳು

    1 ಇಂಚು ಕತ್ತರಿಸಿದ ಶುಂಠಿ

    5 ಹಸಿಮೆಣಸಿನಕಾಯಿ

    1/2 ಕಪ್‌ ತುರಿದ ತೆಂಗಿನಕಾಯಿ

    1 ಮುಷ್ಟಿಯಷ್ಟು ಕರಿಬೇವು

    1 ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು

    1 ಕತ್ತರಿಸಿದ ಈರುಳ್ಳಿ

    3 ಚಮಚ ಅಕ್ಕಿ ಹಿಟ್ಟು

    ಅಗತ್ಯಕ್ಕೆ ತಕ್ಕಷ್ಟು ಉಪ್ಪು

    ಸಂಸ್ಕರಿಸಿದ ಎಣ್ಣೆ

Red Rice Kanda Poha
How to Prepare
  • ತಯಾರಿಸುವ ವಿಧಾನ:

    • ಮಿಕ್ಸರ್ ಪಾತ್ರೆಗೆ ಸ್ವಲ್ಪ ಅವರೆಕಾಳು, ಹಸಿಮೆಣಸಿನ ಕಾಯಿ ಮತ್ತು ಶುಂಠಿಯನ್ನು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಿ.
    • ಇದಾದ ನಂತರ ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ. ನಂತರ ಅದೇ ಮಿಶ್ರಣಕ್ಕೆ ಉಳಿದ ಅವರೆಕಾಳು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಈರುಳ್ಳಿ, ಅಕ್ಕಿ ಹಿಟ್ಟು, ಉಪ್ಪು, ತಾಜಾ ತೆಂಗಿನ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
    • ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಹಿಟ್ಟಿನ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ, ಸಿದ್ಧ ಪಡಿಸಿಕೊಂಡ ಮಿಶ್ರಣದ ಉಂಡೆಯನ್ನು ವಡೆಯ ಆಕಾರದಲ್ಲಿ ಎಣ್ಣೆಗೆ ಹಾಕಿ. ಎಣ್ಣೆಯಲ್ಲಿ ಬಿಟ್ಟ ವಡೆಯು ಎರಡು ಭಾಗದಲ್ಲೂ ಕೆಂಪು ಬಣ್ಣಕ್ಕೆ ಬರುವ ಹಾಗೆ ಕರಿಯಿರಿ. ನಂತರ ಒಂದು ಪ್ಲೇಟ್ ಗೆ ವರ್ಗಾಯಿಸಿ.
    • ಈಗ ಬಿಸಿ-ಬಿಸಿಯಾದ ಅಂಬೋಡೆಯನ್ನು ಒಂದು ಕಪ್ ಟೀ/ಕಾಫಿಯೊಂದಿಗೆ ಅಥವಾ ಸಾಸ್ ನೊಂದಿಗೆ ಸವಿಯಲು ಸಿದ್ಧ.
Instructions
  • ಟಿಪ್ಪಣಿ: ವಡೆಯನ್ನು ಜಾಸ್ತಿ ಉರಿಯಲ್ಲಿ ಬೇಯಿಸಬೇಡಿ. ಹೀಗೆ ಮಾಡಿದಾಗ ಒಳಗಿನಿಂದ ಸರಿಯಾಗಿ ಬೇಯದೇ ಹೊರಗಷ್ಟೇ ಬಣ್ಣ ಬದಲಾಗುತ್ತದೆ.
Nutritional Information
  • People - 2
  • ಎನರ್ಜಿ - ೫೧ಕ್ಯಾ
  • ಕೊಬ್ಬು - ೧.೪ಗ್ರಾ
  • ಪ್ರೋಟೀನ್ - ೨.೪ಗ್ರಾ
  • ಕಾರ್ಬೋಹೈಡ್ರೇಟ್ - ೭.೨ಗ್ರಾ
  • ಫೈಬರ್ - ೧.೮ಗ್ರಾ
[ 3.5 of 5 - 69 Users]
X
Desktop Bottom Promotion