Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಾಫಿ ಜೊತೆ ಬಿಸಿ ಬಿಸಿ ಅವರೆಕಾಳು ಆಂಬೋಡೆ ಒಂದ್ಸಲ ಟ್ರೈ ಮಾಡಿ
ಮಸಾಲೆ ವಡೆ ಸಾಮಾನ್ಯವಾಗಿ ಎಲ್ಲರೂ ತಿಂದಿರ್ತೀರಾ, ಆದರೆ ಅವರೆಕಾಳು ಅಂಬೋಡೆಯು ಒಂದು ವಿಶಿಷ್ಟ ಮಸಾಲ ವಡೆಯಾಗಿದೆ. ಇದನ್ನು ಅವರೆ ಬೇಳೆ ಅಂಬೋಡೆ ಅಥವಾ ಅವೆಕಾಳು ಅಂಬೋಡೆ ಎಂದು ಕರೆಯುತ್ತಾರೆ. ಈ ಪಾಕವಿಧಾನವು ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದ್ದು, ಆರೋಗ್ಯಕರವಾದ ಅವರೆಕಾಳು ಹಾಗೂ ರುಚಿಕರವಾದ ಮಸಾಲೆಗಳೊಂದಿಗೆ ಅದ್ಭುತ ರುಚಿಯನ್ನು ನೀಡುತ್ತದೆ. ಬಿಸಿ-ಬಿಸಿಯಾದ ಕಾಫಿ ಮತ್ತು ಟೀ ಯೊಂದಿಗೆ ಅಂಬೋಡೆ ಇಟ್ಟರೆ ಸೂರ್ಯ ಮುಳುಗಿದ್ದೇ ಅರಿವಿಗೆ ಬಾರದು. ಬಹಳ ಸುಲಭ ಹಾಗೂ ಸರಳವಾದ ವಿಧಾನದ ಮೂಲಕ ಈ ತಿಂಡಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ನೀವು ಈ ಪಾಕವಿಧಾನವನ್ನು ತಯಾರಿಸಿ, ನಿಮ್ಮವರಿಗೆ ಉಣಬಡಿಸಿ.

Recipe By: Shreeraksha
Recipe Type: Vegetarian
Serves: 2
-
ಪ್ರಮುಖ ಸಾಮಗ್ರಿಗಳು:
1 ಕಪ್ ಅವರೆಕಾಳು
1 ಇಂಚು ಕತ್ತರಿಸಿದ ಶುಂಠಿ
5 ಹಸಿಮೆಣಸಿನಕಾಯಿ
1/2 ಕಪ್ ತುರಿದ ತೆಂಗಿನಕಾಯಿ
1 ಮುಷ್ಟಿಯಷ್ಟು ಕರಿಬೇವು
1 ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು
1 ಕತ್ತರಿಸಿದ ಈರುಳ್ಳಿ
3 ಚಮಚ ಅಕ್ಕಿ ಹಿಟ್ಟು
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಸಂಸ್ಕರಿಸಿದ ಎಣ್ಣೆ
-
ತಯಾರಿಸುವ ವಿಧಾನ:
- ಮಿಕ್ಸರ್ ಪಾತ್ರೆಗೆ ಸ್ವಲ್ಪ ಅವರೆಕಾಳು, ಹಸಿಮೆಣಸಿನ ಕಾಯಿ ಮತ್ತು ಶುಂಠಿಯನ್ನು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಿ.
- ಇದಾದ ನಂತರ ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ. ನಂತರ ಅದೇ ಮಿಶ್ರಣಕ್ಕೆ ಉಳಿದ ಅವರೆಕಾಳು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಈರುಳ್ಳಿ, ಅಕ್ಕಿ ಹಿಟ್ಟು, ಉಪ್ಪು, ತಾಜಾ ತೆಂಗಿನ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಹಿಟ್ಟಿನ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ, ಸಿದ್ಧ ಪಡಿಸಿಕೊಂಡ ಮಿಶ್ರಣದ ಉಂಡೆಯನ್ನು ವಡೆಯ ಆಕಾರದಲ್ಲಿ ಎಣ್ಣೆಗೆ ಹಾಕಿ. ಎಣ್ಣೆಯಲ್ಲಿ ಬಿಟ್ಟ ವಡೆಯು ಎರಡು ಭಾಗದಲ್ಲೂ ಕೆಂಪು ಬಣ್ಣಕ್ಕೆ ಬರುವ ಹಾಗೆ ಕರಿಯಿರಿ. ನಂತರ ಒಂದು ಪ್ಲೇಟ್ ಗೆ ವರ್ಗಾಯಿಸಿ.
- ಈಗ ಬಿಸಿ-ಬಿಸಿಯಾದ ಅಂಬೋಡೆಯನ್ನು ಒಂದು ಕಪ್ ಟೀ/ಕಾಫಿಯೊಂದಿಗೆ ಅಥವಾ ಸಾಸ್ ನೊಂದಿಗೆ ಸವಿಯಲು ಸಿದ್ಧ.
- ಟಿಪ್ಪಣಿ: ವಡೆಯನ್ನು ಜಾಸ್ತಿ ಉರಿಯಲ್ಲಿ ಬೇಯಿಸಬೇಡಿ. ಹೀಗೆ ಮಾಡಿದಾಗ ಒಳಗಿನಿಂದ ಸರಿಯಾಗಿ ಬೇಯದೇ ಹೊರಗಷ್ಟೇ ಬಣ್ಣ ಬದಲಾಗುತ್ತದೆ.
- People - 2
- ಎನರ್ಜಿ - ೫೧ಕ್ಯಾ
- ಕೊಬ್ಬು - ೧.೪ಗ್ರಾ
- ಪ್ರೋಟೀನ್ - ೨.೪ಗ್ರಾ
- ಕಾರ್ಬೋಹೈಡ್ರೇಟ್ - ೭.೨ಗ್ರಾ
- ಫೈಬರ್ - ೧.೮ಗ್ರಾ



Click it and Unblock the Notifications
