For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ

Posted By:
|

ಸಂಕ್ರಾಂತಿಯ ವಿಶೇಷ ಭಕ್ಷ್ಯವಾದ ಈ ಅವರೆಕಾಳು ಚಿತ್ರಾನ್ನ ಬೆಳಿಗ್ಗೆ ಉಪಹಾರದ ಫೆವರೆಟ್ ಉಪಹಾರ. ಈ ಅವರೆಕಾಳನ್ನು ತೆಲುಗು ಭಾಷೆಯಲ್ಲಿ ಅನಪಾ ಗಿಂಜಾಲು ಅಥವಾ ಚಿಕ್ಕಡು ಗಿಂಜಾಲು ಎಂದು ಕರೆಯಲಾಗುತ್ತದೆ. ಅವರೆಕಾಳು ಮಿಶ್ರಿತ ಚಿತ್ರಾನ್ನವು ವಿಶೇಷ ರುಚಿ ಹಾಗೂ ಪೋಷಕಾಂಶವನ್ನು ನೀಡುತ್ತದೆ. ಸುಲಭ ಹಾಗೂ ಸರಳ ವಿಧಾನವನ್ನು ಒಳಗೊಂಡಿರುವ ಈ ಪಾಕವಿಧಾನ ಹಬ್ಬದ ಸಮಯದ ಉತ್ತಮ ಆಯ್ಕೆಯಾಗಿದೆ. ಈ ಅವರೆಕಾಳು ಚಿತ್ರಾನ್ನವನ್ನು ಉಪ್ಪಿನಕಾಯಿ ಅಥವಾ ಹಸಿರು ಚಟ್ನಿಯೊಂದಿಗೆ ಸವಿಯಲು ನೀಡಬಹುದು. ಸುಲಭ ಹಾಗೂ ಸರಳ ವಿಧಾನವನ್ನು ಒಳಗೊಂಡಿರುವ ಅವರೆಕಾಳು ಚಿತ್ರಾನ್ನವನ್ನು ನೀವು ಮನೆಯಲ್ಲಿ ಮಾಡಲು ಬಯಸಿದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.

Avarekalu Chitranna Recipe
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 2

Ingredients
  • ಪ್ರಮುಖ ಸಾಮಗ್ರಿಗಳು:

    2 ಕಪ್‌ ಬೇಯಿಸಿದ ಅಕ್ಕಿ

    1 ಕಪ್‌ ಸಂಸ್ಕರಿಸಿದ ಎಣ್ಣೆ

    1 ಕಪ್‌ ಬೇಯಿಸಿದ ಬೀನ್ಸ್

    1 ಕಪ್‌ ತುರಿದ ತೆಂಗಿನಕಾಯಿ

    5 - ಹಸಿಮೆಣಸಿನಕಾಯಿ

    ಅಗತ್ಯಕ್ಕೆ ತಕ್ಕಷ್ಟು ಉಪ್ಪು

    1 ಚಮಚ ಸಾಸಿವೆ

    1 ಚಮಚ ಕಡಲೆ ಬೇಳೆ

    1 ಚಮಚ ಉದ್ದಿನ ಬೇಳೆ

    ೧ ಚಿಟಿಕೆ ಅರಿಶಿಣ

    1 ಕಸೂರಿ ಮೆಂತೆ ಪುಡಿ

    ಕೊತ್ತಂಬರಿ ಸೊಪ್ಪು

    ಕರಿಬೇವು

Red Rice Kanda Poha
How to Prepare
  • ತಯಾರಿಸುವ ವಿಧಾನ:

    - ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಾಸಿವೆ, ಕಡ್ಲೇ ಬೇಳೆ ಮತ್ತು ಹೆಸರು ಬೇಳೆಯನ್ನು ಸೇರಿಸಿ, 2 ನಿಮಿಷಗಳ ಕಾಲ ಹುರಿಯಿರಿ.

    - ನಂತರ ಅರಿಶಿನ, ಹಸಿ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ ಒಂದು ನಿಮಿಷಗಳ ಕಾಲ ಹುರಿಯಿರಿ. ಅದೇ ಬಾಣಲೆಗೆ ಬೇಯಿಸಿದ ಅವರೆಕಾಳನ್ನು ಸೇರಿಸಿ. - ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ಹಾಕಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ.

    - ಬಳಿಕ ಅನ್ನ, ಮೇಥಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ. ಎಲ್ಲಾ ಸಾಮಾಗ್ರಿಗಳೊಂದಿಗೆ ಬೆರೆಯುವಂತೆ ಒಮ್ಮೆ ಚೆನ್ನಾಗಿ ಮಿಶ್ರಗೊಳಿಸಿ. ಸಿದ್ಧವಾದ ಅವರೆಕಾಳು ಚಿತ್ರಾನ್ನವನ್ನು ಬಿಸಿ ಬಿಸಿಯಾಗಿರುವಾಗಲೇ ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಸವಿಯಲು ನೀಡಿ.

Instructions
  • ಸುಲಭ ಹಾಗೂ ಸರಳ ವಿಧಾನವನ್ನು ಒಳಗೊಂಡಿರುವ ಅವರೆಕಾಳು ಚಿತ್ರಾನ್ನವನ್ನು ನೀವು ಮನೆಯಲ್ಲಿ ಮಾಡಲು ಬಯಸಿದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.
Nutritional Information
  • People - 2
  • ಎನರ್ಜಿ - 414ಕ್ಯಾಲೋರಿ
  • ಕೊಬ್ಬು - 21.4ಗ್ರಾಂ
  • ಪ್ರೋಟೀನ್ - 9.4 ಗ್ರಾಂ
  • ಕಾರ್ಬೋಹೈಡ್ರೇಟ್ - 46.1ಗ್ರಾಂ
  • ಫೈಬರ್ - 6.7ಗ್ರಾಂ
[ 3.5 of 5 - 64 Users]
X
Desktop Bottom Promotion