Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
ಸಂಕ್ರಾಂತಿಯ ವಿಶೇಷ ಭಕ್ಷ್ಯವಾದ ಈ ಅವರೆಕಾಳು ಚಿತ್ರಾನ್ನ ಬೆಳಿಗ್ಗೆ ಉಪಹಾರದ ಫೆವರೆಟ್ ಉಪಹಾರ. ಈ ಅವರೆಕಾಳನ್ನು ತೆಲುಗು ಭಾಷೆಯಲ್ಲಿ ಅನಪಾ ಗಿಂಜಾಲು ಅಥವಾ ಚಿಕ್ಕಡು ಗಿಂಜಾಲು ಎಂದು ಕರೆಯಲಾಗುತ್ತದೆ. ಅವರೆಕಾಳು ಮಿಶ್ರಿತ ಚಿತ್ರಾನ್ನವು ವಿಶೇಷ ರುಚಿ ಹಾಗೂ ಪೋಷಕಾಂಶವನ್ನು ನೀಡುತ್ತದೆ. ಸುಲಭ ಹಾಗೂ ಸರಳ ವಿಧಾನವನ್ನು ಒಳಗೊಂಡಿರುವ ಈ ಪಾಕವಿಧಾನ ಹಬ್ಬದ ಸಮಯದ ಉತ್ತಮ ಆಯ್ಕೆಯಾಗಿದೆ. ಈ ಅವರೆಕಾಳು ಚಿತ್ರಾನ್ನವನ್ನು ಉಪ್ಪಿನಕಾಯಿ ಅಥವಾ ಹಸಿರು ಚಟ್ನಿಯೊಂದಿಗೆ ಸವಿಯಲು ನೀಡಬಹುದು. ಸುಲಭ ಹಾಗೂ ಸರಳ ವಿಧಾನವನ್ನು ಒಳಗೊಂಡಿರುವ ಅವರೆಕಾಳು ಚಿತ್ರಾನ್ನವನ್ನು ನೀವು ಮನೆಯಲ್ಲಿ ಮಾಡಲು ಬಯಸಿದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.

Recipe By: Shreeraksha
Recipe Type: Vegetarian
Serves: 2
-
ಪ್ರಮುಖ ಸಾಮಗ್ರಿಗಳು:
2 ಕಪ್ ಬೇಯಿಸಿದ ಅಕ್ಕಿ
1 ಕಪ್ ಸಂಸ್ಕರಿಸಿದ ಎಣ್ಣೆ
1 ಕಪ್ ಬೇಯಿಸಿದ ಬೀನ್ಸ್
1 ಕಪ್ ತುರಿದ ತೆಂಗಿನಕಾಯಿ
5 - ಹಸಿಮೆಣಸಿನಕಾಯಿ
ಅಗತ್ಯಕ್ಕೆ ತಕ್ಕಷ್ಟು ಉಪ್ಪು
1 ಚಮಚ ಸಾಸಿವೆ
1 ಚಮಚ ಕಡಲೆ ಬೇಳೆ
1 ಚಮಚ ಉದ್ದಿನ ಬೇಳೆ
೧ ಚಿಟಿಕೆ ಅರಿಶಿಣ
1 ಕಸೂರಿ ಮೆಂತೆ ಪುಡಿ
ಕೊತ್ತಂಬರಿ ಸೊಪ್ಪು
ಕರಿಬೇವು
-
ತಯಾರಿಸುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಾಸಿವೆ, ಕಡ್ಲೇ ಬೇಳೆ ಮತ್ತು ಹೆಸರು ಬೇಳೆಯನ್ನು ಸೇರಿಸಿ, 2 ನಿಮಿಷಗಳ ಕಾಲ ಹುರಿಯಿರಿ.
- ನಂತರ ಅರಿಶಿನ, ಹಸಿ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ ಒಂದು ನಿಮಿಷಗಳ ಕಾಲ ಹುರಿಯಿರಿ. ಅದೇ ಬಾಣಲೆಗೆ ಬೇಯಿಸಿದ ಅವರೆಕಾಳನ್ನು ಸೇರಿಸಿ. - ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ಹಾಕಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ.
- ಬಳಿಕ ಅನ್ನ, ಮೇಥಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ. ಎಲ್ಲಾ ಸಾಮಾಗ್ರಿಗಳೊಂದಿಗೆ ಬೆರೆಯುವಂತೆ ಒಮ್ಮೆ ಚೆನ್ನಾಗಿ ಮಿಶ್ರಗೊಳಿಸಿ. ಸಿದ್ಧವಾದ ಅವರೆಕಾಳು ಚಿತ್ರಾನ್ನವನ್ನು ಬಿಸಿ ಬಿಸಿಯಾಗಿರುವಾಗಲೇ ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಸವಿಯಲು ನೀಡಿ.
- ಸುಲಭ ಹಾಗೂ ಸರಳ ವಿಧಾನವನ್ನು ಒಳಗೊಂಡಿರುವ ಅವರೆಕಾಳು ಚಿತ್ರಾನ್ನವನ್ನು ನೀವು ಮನೆಯಲ್ಲಿ ಮಾಡಲು ಬಯಸಿದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- People - 2
- ಎನರ್ಜಿ - 414ಕ್ಯಾಲೋರಿ
- ಕೊಬ್ಬು - 21.4ಗ್ರಾಂ
- ಪ್ರೋಟೀನ್ - 9.4 ಗ್ರಾಂ
- ಕಾರ್ಬೋಹೈಡ್ರೇಟ್ - 46.1ಗ್ರಾಂ
- ಫೈಬರ್ - 6.7ಗ್ರಾಂ



Click it and Unblock the Notifications