ಅಂಬೋಡೆ ರೆಸಿಪಿ: ಮಸಾಲಾ ವಡೆ ಮಾಡುವುದು ಹೇಗೆ?

By: Divya
Subscribe to Boldsky

ಅಂಬೋಡೆ ಕರ್ನಾಟಕದ ಪ್ರಸಿದ್ಧ ತಿಂಡಿಯಲ್ಲಿ ಒಂದು. ಇದನ್ನು ಬಹುತೇಕ ಉತ್ಸವಗಳಲ್ಲಿ ಹಾಗೂ ಮದುವೆ ಮುಂಜಿಗಳ ಊಟದ ಒಂದು ಅಗತ್ಯ ತಿನಿಸನ್ನಾಗಿ ತಯಾರಿಸಲಾಗುತ್ತದೆ. ಇದನ್ನು ತಮಿಳುನಾಡಿನಲ್ಲಿ ಪರುಪು ವಡೆ ಅಥವಾ ಮಸಾಲ ವಡೆ ಎಂದು ಕರೆಯುತ್ತಾರೆ. ಕೇರಳದಲ್ಲಿ ಚಹಾದ ಜೊತೆ ಸವಿಯುವ ತಿಂಡಿಯನ್ನಾಗಿ ಉಪಯೋಗಿಸುತ್ತಾರೆ. ಮಳೆಗಾಲದ ಚಳಿಯಲ್ಲಿ ಬಿಸಿಬಿಸಿಯಾಗಿ ಇದನ್ನು ತಿನ್ನಲು ತಯಾರಿಸುತ್ತಾರೆ.

ಕಡ್ಲೆಬೇಳೆಯ ಮುಖ್ಯ ಪಾತ್ರದಲ್ಲಿ ವಿವಿಧ ಬಗೆಯ ಮಸಾಲ ಪದಾರ್ಥಗಳು ಹಾಗೂ ಈರುಳ್ಳಿಯನ್ನು ಸೆರಿಸಿ ಅಂಬೋಡೆಯನ್ನು ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಮತ್ತು ಉತ್ಸವದ ಸಮಯದಲ್ಲಿ ತಯಾರಿಸಬೇಕಾದರೆ ಈರುಳ್ಳಿಯನ್ನು ಸೇರಿಸುವುದಿಲ್ಲ. ಈರುಳ್ಳಿಯನ್ನು ಸೇರಿಸಿದರೆ ಪರಿಮಳ ಮತ್ತು ರುಚಿ ಹೆಚ್ಚಾಗುತ್ತದೆ.

ಕಡ್ಲೆಬೇಳೆಯನ್ನು ಒಮ್ಮೆ ನೆನೆಸಿಟ್ಟುಕೊಂಡರೆ ಅಂಬೋಡೆ ತಯಾರಿಸುವುದು ಸುಲಭ. ಕಡಿಮೆ ಸಮಯದಲ್ಲಿ ಬೇಕೆಂದಾಗ ತಯಾರಿಸಿಕೊಳ್ಳಬಹುದಾದ ಈ ತಿಂಡಿಯನ್ನು ನೀವೂ ಮಾಡಲು ಇಷ್ಟ ಪಡುವುದಾದರೆ ಇಲ್ಲಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ಬರಹವನ್ನು ವೀಕ್ಷಿಸಿ.

ambode recipe
ಅಂಬೋಡೆ ಪಾಕವಿಧಾನ | ಮಸಾಲ ವಡೆ ಮಾಡುವುದು ಹೇಗೆ | ಪರುಪು ವಡ ಪಾಕವಿಧಾನ |ದಾಲ್ ವಡ ರೆಸಿಪಿ
ಅಂಬೋಡೆ ಪಾಕವಿಧಾನ | ಮಸಾಲ ವಡೆ ಮಾಡುವುದು ಹೇಗೆ | ಪರುಪು ವಡ ಪಾಕವಿಧಾನ |ದಾಲ್ ವಡ ರೆಸಿಪಿ
Prep Time
5 Hours
Cook Time
30M
Total Time
5 Hours 30 Mins

Recipe By: ಕಾವ್ಯಶ್ರೀ ಎಸ್

Recipe Type: ಕುರುಕಲು ತಿಂಡಿ/ ಸ್ನ್ಯಾಕ್ಸ್

Serves: 10 ಅಂಬೋಡೆ

Ingredients
 • ಕಡ್ಲೆ ಬೇಳೆ - 1 ಬೌಲ್

  ನೀರು - 2 ಗ್ಲಾಸ್

  ತೆಂಗಿನ ತುರಿ - 1 ಕಪ್

  ಹಸಿ ಮೆಣಸಿನ ಕಾಯಿ - ದೊಡ್ಡ ಗಾತ್ರದ್ದು 4

  ಶುಂಠಿ - 1 ಇಂಚು

  ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಕಪ್

  ಸಬ್ಬಸ್ಸಿಗೆ ಸೊಪ್ಪು - 1 ಕಪ್

  ರುಚಿಗೆ ತಕ್ಕಷ್ಟು ಉಪ್ಪು

  ಕರಿಯಲು ಎಣ್ಣೆ

Red Rice Kanda Poha
How to Prepare
 • 1. ಒಂದು ಬೌಲ್‍ನಲ್ಲಿ ಕಡ್ಲೆ ಬೇಳೆಯನ್ನು 4-5 ತಾಸುಗಳ ಕಾಲ ನೆನೆಯಿಡಬೇಕು.

  2. ನೆನೆಸಿಕೊಂಡ ಕಡ್ಲೆ ಬೇಳೆ ಮತ್ತು ತೆಂಗಿನ ತುರಿಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.

  3. ಇದರೊಟ್ಟಿಗೆ ಹಸಿಮೆಣಸು, ಶುಂಠಿಯನ್ನು ಸೇರಿಸಿ.

  4. ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ.

  5. ಒಂದು ಬೌಲ್‍ಗೆ ಮಿಶ್ರಣವನ್ನು ವರ್ಗಾಯಿಸಿಕೊಳ್ಳಿ.

  6. ಹಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಸಬ್ಬಸ್ಸಿಗೆ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.

  7. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

  8. ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

  9. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿ.

  10. ಉಂಡೆಯನ್ನು ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಬಿಡಿ.

  11. ಚೆನ್ನಾಗಿ ಹೊಂಬಣ್ಣ ಬರುವವರೆಗೂ ಕೈಯಾಡಿಸುತ್ತಾ ಫ್ರೈ ಮಾಡಿ.

Instructions
 • 1. ಈ ಪಾಕವಿಧಾನದಲ್ಲಿ ಈರುಳ್ಳಿಯನ್ನು ಬಳಸಲಾಗುತ್ತದೆ. ಹಬ್ಬದ ಸಮಯದಲ್ಲಿ ಈರುಳ್ಳಿಯನ್ನು ಸೇರಿಸದಿದ್ದರೆ ಆಯಿತು.
 • 2. ಸಬ್ಬಸ್ಸಿಗೆ ಸೊಪ್ಪನ್ನು ನಿಮ್ಮ ಆಯ್ಕೆಯಾಗಿ ಬಳಸಬಹುದು.
 • 3. ವಡೆಯು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಬೇಕು.
Nutritional Information
 • ಸರ್ವಿಂಗ್ ಸೈಜ್ - 1 ವಡೆ
 • ಕ್ಯಾಲೋರಿ - 150 ಕ್ಯಾಲ್
 • ಫ್ಯಾಟ್ - 3 ಗ್ರಾಂ
 • ಪ್ರೋಟೀನ್ - 4 ಗ್ರಾಂ
 • ಕಾರ್ಬೋಹೈಡ್ರೇಟ್ - 20 ಗ್ರಾಂ
 • ಫೈಬರ್ - 5 ಗ್ರಾಂ

ಪಾಕವಿಧಾನ:

1. ಒಂದು ಬೌಲ್‍ನಲ್ಲಿ ಕಡ್ಲೆ ಬೇಳೆಯನ್ನು 4-5 ತಾಸುಗಳ ಕಾಲ ನೆನೆಯಿಡಬೇಕು.

ambode recipe
ambode recipe

2. ನೆನೆಸಿಕೊಂಡ ಕಡ್ಲೆ ಬೇಳೆ ಮತ್ತು ತೆಂಗಿನ ತುರಿಯನ್ನು ಮಿಕ್ಸರ್ ಪಾತ್ರೆಯಲ್ಲಿ ಹಾಕಿ.

ambode recipe
ambode recipe

3. ಇದರೊಟ್ಟಿಗೆ ಹಸಿಮೆಣಸು, ಶುಂಠಿಯನ್ನು ಸೇರಿಸಿ.

ambode recipe
ambode recipe

4. ಎಲ್ಲವನ್ನು ಒಟ್ಟಿಗೆ ರುಬ್ಬಿಕೊಳ್ಳಿ.

ambode recipe

5. ಒಂದು ಬೌಲ್‍ಗೆ ಮಿಶ್ರಣವನ್ನು ವರ್ಗಾಯಿಸಿಕೊಳ್ಳಿ.

ambode recipe

6. ಹಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಸಬ್ಬಸ್ಸಿಗೆ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.

ambode recipe
ambode recipe
ambode recipe

7. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

ambode recipe

8. ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

ambode recipe

9. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿ.

ambode recipe

10. ಉಂಡೆಯನ್ನು ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಬಿಡಿ.

ambode recipe

11. ಚೆನ್ನಾಗಿ ಹೊಂಬಣ್ಣ ಬರುವವರೆಗೂ ಕೈಯಾಡಿಸುತ್ತಾ ಫ್ರೈ ಮಾಡಿ.

ambode recipe
ambode recipe
[ 4 of 5 - 74 Users]
Please Wait while comments are loading...
Subscribe Newsletter