Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ರೆಸಿಪಿ: ಸುಲಭವಾಗಿ ಮಾಡಬಹುದು ಆಲೂ ಚಕ್ಕುಲಿ
ಸಂಜೆ ವೇಳೆ ಸುರಿಯುವ ಜಿಟಿಜಿಟಿ ಮಳೆ, ಪಕ್ಕದಲ್ಲಿ ಬಿಸಿಬಿಸಿ ಕಾಫಿ ಜೊತೆ ಏನಾದರೂ ಕುರುಕುಲು ತಿಂಡಿಯಿದ್ದರೆ, ಸೂರ್ಯ ಮುಳುಗಿ ಕತ್ತಲು ಆವರಿಸಿದ್ದೇ ಗೊತ್ತಾಗುವುದಿಲ್ಲ. ಆದರೆ, ಪ್ರತಿದಿನ ಅದೇ ಪಕೋಡಾ, ಭಜ್ಜಿ ತಿಂದು ಬೋರ್ ಆಗಿದ್ಯಾ? ಹಾಗಾದ್ರೆ ಈ ಆಲೂಗಡ್ಡೆ ಚಕ್ಕುಲಿಯನ್ನೊಮ್ಮೆ ಟ್ರೈ ಮಾಡಿ.

ಬೇಕರಿಯಿಂದ ಇಂತಹ ಚಕ್ಕುಲಿ ತರುವ ಬದಲು ನೀವೇ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು, ಜೊತೆಗೆ ಸಾಲುಸಾಳು ಹಬ್ಬಗಳು ಬೇರೆ.. ಇನ್ನೇಕೆ ತಡ, ಆಲೂಗಡ್ಡೆ ಚಕ್ಕುಲಿ ಮಾಡುವ ವಿಧಾನವನ್ನು ನೋಡಿಕೊಂಡ ಬರೋಣ.
Recipe By: Shreeraksha
Recipe Type: snacks
Serves: 10
-
ಬೇಕಾಗುವ ಪದಾರ್ಥಗಳು:
2 ಬೇಯಿಸಿದ ಆಲೂಗಡ್ಡೆ
2 ಚಮಚ ನೀರು
2 ಕಪ್ ಅಕ್ಕಿ ಹಿಟ್ಟು
1 ಕಪ್ ಕಡಲೆ ಹಿಟ್ಟು
¼ ಚಮಚ ಅರಿಶಿನ
ಅರ್ಧ ಟೀಸ್ಪೂನ್ ಮೆಣಸಿನ ಪುಡಿ
1 ಚಮಚ ಜೀರಿಗೆ
½ ಚಮಚ ಉಪ್ಪು
1 ಚಮಚ ಬೆಣ್ಣೆ
ಎಣ್ಣೆ (ಹುರಿಯಲು)
-
ತಯಾರಿಸುವ ವಿಧಾನ:
ಮೊದಲು, ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆಯನ್ನು ತೆಗೆದು, ಕತ್ತರಿಸಿ ಮಿಕ್ಸಿಗೆ ಹಾಕಿ, 2 ಚಮಚ ನೀರು ಸೇರಿಸಿ ರುಬ್ಬಿಕೊಂಡು, ಪಕ್ಕಕ್ಕೆ ಇರಿಸಿ.
ಈಗ ಒಂದು ದೊಡ್ಡ ಬಟ್ಟಲಿನಲ್ಲಿ 2 ಕಪ್ ಅಕ್ಕಿ ಹಿಟ್ಟು ಮತ್ತು 1 ಕಪ್ ಕಡಲೆಹಿಟ್ಟು ಸೇರಿಸಿ, ಅದಕ್ಕೆ ¼ ಚಮಚ ಅರಿಶಿನ, ½ ಚಮಚ ಮೆಣಸಿನ ಪುಡಿ, 1 ಚಮಚ ಜೀರಿಗೆ ಮತ್ತು ½ ಚಮಚ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಇದಕ್ಕೆ ಒಂದು ಚಮಚ ಬೆಣ್ಣೆ,, ತಯಾರಿಸಿದ ಆಲೂಗಡ್ಡೆ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅಗತ್ಯವಿರುವಂತೆ ನೀರನ್ನು ಬೆರೆಸಿಕೊಳ್ಳಿ. ಹೆಚ್ಚು ನೀರು ಸೇರಿಸಬೇಡಿ, ಹಿಟ್ಟು ತುಂಬಾ ಮೃದುವಾಗಿದ್ದರೆ ಚಕ್ಕುಲಿ ಎಣ್ಣೆ ಎಣ್ಣೆಯಾಗುತ್ತದೆ ಮತ್ತು ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಒತ್ತುವಾಗ ಒಡೆಯುತ್ತದೆ.
ಈ ಮಿಶ್ರಣವನ್ನು, ಚಕ್ಕುಲಿ ಹಾಕುವ ಅಚ್ಚಿಗೆ ಹಾಕಿಕೊಂಡು, ನಿಧಾನವಾಗಿ ಬಿಸಿ ಎಣ್ಣೆಗೆ ಒತ್ತಿ.
ಒಂದು ನಿಮಿಷ ಮುಟ್ಟಬೇಡಿ, ಏಕೆಂದರೆ ಚಕ್ಕುಲಿ ಮುರಿಯಬಹುದು.
ಒಂದು ನಿಮಿಷದ ನಂತರ, ಎರಡೂ ಬದಿಗಳಲ್ಲಿ ಮೀಡಿಯಂ ಫ್ಲೇಮ್ ನಲ್ಲಿಟ್ಟು, ಗೋಲ್ಡನ್ ಬ್ರೌನ್ ಆಗುವವರೆಗೂ ಹುರಿಯಿರಿ.
ಅಂತಿಮವಾಗಿ, ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ, ಒಂದು ವಾರ ಆಲೂ ಚಕ್ಕುಲಿಯನ್ನು ಸವಿಯಿರಿ.
- ಹಬ್ಬದ ಸಮಯಲ್ಲೂ ಇದನ್ನು ಮಾಡಬಹುದು
- ಸರ್ವ್ - 100g
- ಕ್ಯಾಲೋರಿ - 437
- ಕೊಬ್ಬು - 6g
- ಕಾರ್ಬ್ಸ್ - 82g



Click it and Unblock the Notifications