Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶೀತ-ಕೆಮ್ಮು ಹೋಗಲಾಡಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಅಜ್ವೈನ್ ಕಷಾಯ
ವಾಯುಭಾರತ ಕುಸಿತದಿಂದಾಗಿ ಮಳೆಗಾಲದಲ್ಲಿ ಸುರಿಯುವಂತೆ ಮಳೆ ಸುರಿಯುತ್ತಿದೆ, ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಜನರಲ್ಲಿ ಕೆಮ್ಮು, ಶೀತದ ಸಮಸ್ಯೆ ಹೆಚ್ಚಾಗುತ್ತಿದೆ. ನಾವಿಲ್ಲಿ ಸಾಮಾನ್ಯ ಶೀತ ಕೆಮ್ಮು ತಡೆಯಲು ಎರಡು ಅಜ್ವೈನ್ ಕಷಾಯ ನೀಡಿದ್ದೇವೆ. ಈ ಕಷಾಯಗಳು ನಿಮಗೆ ಚಳಿಗಾಲವಾಗಿರಲಿ, ಮಳೆಗಾಲವಾಗಿರಲಿ ಸಾಮಾನ್ಯ ಶೀತ-ಕೆಮ್ಮು, ಜ್ವರ ತಡೆಗಟ್ಟಲು ಸಹಾಯ ಮಾಡುತ್ತದೆ, ಅಲ್ಲದೆ ಈ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಕಷಾಯ 1
ಬೇಕಾಗುವ ಸಾಮಗ್ರಿ
1/2 ಚಮಚ ಕರಿಮೆಣಸಿನ ಪುಡಿ
1/2 ಚಮಚ ಜೀರಿಗೆ
1/2 ಚಮಚ ಕೊತ್ತಂಬರಿ ಬೀಜ
1 ಚಮಚ ಅಜ್ವೈನ್
2 ಚಿಕ್ಕ ವೀಳ್ಯೆದೆಲೆ
ಸ್ವಲ್ಪ ಬೆಲ್ಲ
2 ಕಪ್ ನೀರು (1/2 ಲೀಟರ್)
ಸ್ವಲ್ಪ ಶುಂಠಿ (ಹಸಿ ಅಥವಾ ಒಣಗಿದ್ದು, ಪೌಡರ್ ಯಾವುದು ಬೇಕಾದರೂ
ಬಳಸಬಹುದು.
1/4 ಚಮಚ ಅರಿಶಿಣ ಪುಡಿ , ಅರಿಶಿಣ ಕೊಂಬು ಆದರೆ ಜಜ್ಜಿ ಹಾಕಿ.
ಮಾಡುವುದು ಹೇಗೆ?
* ಈ ಎಲ್ಲಾ ಸಾಮಗ್ರಿ ಒಂದು ಪಾತ್ರೆಗೆ ಹಾಕಿ ಕುದಿಸಿ.
* ನಂತರ ಸೋಸಿ ಬಿಸಿ- ಬಿಸಿ ಇರುವಾಗಲೇ ಮೆಲ್ಲ-ಮೆಲ್ಲನೆ ಸವಿಯಿರಿ.
ಪ್ರಯೋಜನಗಳು
* ನೀವು ಈ ಕಷಾಯ ಮಾಡಿ ಕುಡಿದರೆ ಗಂಟಲು ಕೆರೆತ, ಕೆಮ್ಮು ಕಡಿಮೆಯಾಗುವುದು.
* ಚಳಿಯಿಂದ ದೇಹವನ್ನು ರಕ್ಷಣೆ ಮಾಡುತ್ತದೆ.
ಈ ಕಷಾಯ ಮಕ್ಕಳಿಗೆ ಕೊಡಬಹುದೇ?
* 1 ವರ್ಷದಿಂದ-5 ವರ್ಷದೊಳಗಿನ ಮಕ್ಕಳಿಗಾದರೆ 2 ಚಮಚ ಕುಡಿಸಿ.
* 5 ವರ್ಷ ಮೇಲ್ಪಟ್ಟ ಮಕ್ಕಳಾದರೆ 1 ಲೋಟ ಕುಡಿಯಬಹುದು.
ಕೆಮ್ಮು, ಶೀತ ಶಮನ ಮಾಡುವ ತುಳಸಿ ಕಷಾಯ ರೆಸಿಪಿ
ದಿನದಲ್ಲಿ ಎಷ್ಟು ಬಾರಿ ತೆಗೆದುಕೊಳ್ಳಬೇಕು?
ಬೆಳಗ್ಗೆ ಎದ್ದಾಗ ರಾತ್ರಿ ಮಲಗುವಾಗ ತೆಗೆದುಕೊಳ್ಳಿ, ಕೆಮ್ಮು ತುಂಬಾ ಇದ್ದರೆ ಸಂಜೆ ಹೊತ್ತಿಗೆ ಒಮ್ಮೆ ತೆಗೆದುಕೊಳ್ಳಿ. ಜೇನು ಸೇರಿಸಿದರೆ ಇನ್ನೂ ಒಳ್ಳೆಯದು.
********

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತೊಂದು ಅಜ್ವೈನ್ ಕಷಾಯ
* ಬೇಕಾಗುವ ಸಾಮಗ್ರಿ
* 2 ತುಂಡು ಅಮೃತಬಳ್ಳಿ
* 2 ದೊಡ್ಡಪತ್ರೆ (Optional)
* 3 ಏಲಕ್ಕಿ
* ಸ್ವಲ್ಪ ತುಳಸಿ ಎಲೆ
* 2 ಇಂಚಿನಷ್ಟು ಉದ್ದದ ಶುಂಠಿ
* 1 ಚಮಚ ಅಜ್ವೈನ್
* 1 ಇಂಚಿನಷ್ಟು ಉದ್ದದ ಚಕ್ಕೆ
* ಅರ್ಧ ಚಮಚ ಕಾಳು ಮೆಣಸು
* ಅರ್ಧ ಕಪ್ ಬೆಲ್ಲ
* ನೀರು 3 ಕಪ್
* ಜೇನು
ಮಾಡುವ ವಿಧಾನ
ಚಿಕ್ಕ ಕಲ್ಲಿನಲ್ಲಿ ಕಾಳು ಮೆಣಸು ಹಾಗೂ ಅಜ್ವೈನ್ ಕುಟ್ಟಿ ಪುಡಿ ಮಾಡಿ.
* ಶುಂಠಿಯನ್ನು ಕೂಡ ಜಜ್ಜಿ.
* ಈಗ ಜೇನು ಬಿಟ್ಟು ಉಳಿದೆಲ್ಲಾ ಸಾಮಗ್ರಿ ನೀರಿಗೆ ಹಾಕಿ ಕುದಿಸಿ.
* 3 ಕಪ್ ನೀರು 2 ಕಪ್ ಆಗುವವವರೆಗೆ ಕುದಿಸಿ.
* ನಂತರ ಸೋಸಿ ಸ್ವಲ್ಪ ಜೇನು ಸೇರಿಸಿ ಬಿಸಿ-ಬಿಸಿ ಕಷಾಯ ಕುಡಿಯಿರಿ.
ಸೂಚನೆ : ಇಷ್ಟು ಸಾಮಗ್ರಿ ಹಾಕಿದರೆ 2 ಲೋಟ ಕಷಾಯ ತಯಾರಿಸಬಹುದು. ನಿಮ್ಮ ಮನೆಯಲ್ಲಿ ಜನ ಅಧಿಕವಿದ್ದರೆ ಸಾಮಗ್ರಿ ಅಧಿಕ ಹಾಕಿ, ಅಧಿಕ ನೀರು ಸೇರಿಸಿ ಕಷಾಯ ತಯಾರಿಸಿ.
* ಇದನ್ನು ಪ್ರತಿದಿನ ಒಂದು ಲೋಟ ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಪ್ರಯೋಜನಗಳು:
ಚಳಿಗಾಲ ಹಾಗೂ ಮಳೆಗಾಲದಲ್ಲಿ ಈ ರೀತಿಯ ಕಷಾಯ ಮಾಡಿ ಕುಡಿಯುವುದರಿಂದ ಸಾಮಾನ್ಯವಾಗಿ
ಕಾಡುವ ಕೆಮ್ಮು-ಶೀತ, ವೈರಲ್ ಸೋಂಕು, ಜ್ವರ ಈ ಬಗೆಯ ಸಮಸ್ಯೆಗಳನ್ನು
ತಡೆಗಟ್ಟಬಹುದು.
ಕಷಾಯವನ್ನು ಯಾವ ಸಮಯದಲ್ಲಿ ತೆಗೆದುಕೊಂಡರೆ
ಒಳ್ಳೆಯದು?
ಕಷಾಯವನ್ನು ಬೆಳಗ್ಗೆ ಹೊತ್ತಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಹಲ್ಲುಜ್ಜಿ
20 ನಿಮಿಷದ ಬಳಿಕ ಊಟಕ್ಕಿಂತ ಮೊದಲು ತೆಗೆದುಕೊಳ್ಳಬೇಕು. ಕಷಾಯ ತೆಗೆದುಕೊಂಡು 30
ನಿಮಿಷದ ಬಳಿಕ ಬ್ರೇಕ್ಫಾಸ್ಟ್ ಮಾಡಿ.
* ಇದಲ್ಲದೆ ಹೋದರೆ ಕಷಾಯವನ್ನು ಸಂಜೆ ಹೊತ್ತಿನಲ್ಲೂ ತೆಗೆದುಕೊಳ್ಳಬಹುದು.
* ಇನ್ನು ರಾತ್ರಿ ಊಟ ಮಾಡಿ 39 ನಿಮಿಷದ ಬಳಿಕ ಕೂಡ ತೆಗೆದುಕೊಳ್ಳಬಹುದು.
ಕಷಾಯದಿಂದ ಅಡ್ಡಪರಿಣಾಮವಿದೆಯೇ?
ಕಷಾಯದಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ಅತಿಯಾದರೆ ಅಮೃತವೂ ವಿಷವಾಗುವುದು,
ಆದ್ದರಿಂದ ಕಷಾಯವನ್ನು ಒಂದು ಲೋಟ ಸೇವಿಸಿ. ಕೆಮ್ಮು -ಶೀತವಿದ್ದಾಗ ಎರಡು ಲೋಟ
ಸೇವಿಸಿ... ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಾ 1 ಲೋಟ ಅಥವಾ ಅರ್ಧ ಲೋಟ
ಸೇವಿಸಿದರೆ ಸಾಕು. ಪ್ರತಿದಿನ ಕಷಾಯ ತೆಗೆದುಕೊಳ್ಳುತ್ತಿದ್ದರೆ ಕೆಲವೇ
ತಿಂಗಳುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಸೂಚನೆ: ನೀವು ಇತರ ಔಷಧ ತೆಗೆದುಕೊಳ್ಳುತ್ತಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಕಷಾಯ ತೆಗೆದುಕೊಳ್ಳಿ.



Click it and Unblock the Notifications
