Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಈ ಯೋಗ ಆಸನಗಳನ್ನು ಮಾಡಿದ್ರೆ ಮಕ್ಕಳ ಮೈಂಡ್ ಶಾರ್ಪ್ ಆಗುತ್ತೆ!
ಯೋಗಸಾಸನ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸೋದಕ್ಕೆ ತುಂಬಾನೇ ಒಳ್ಳೆಯದು. ಹೆಚ್ಚಾಗಿ ದೊಡ್ಡವರು ಮಾತ್ರ ಯೋಗಾಭ್ಯಾಸ ಮಾಡ್ತಾರೆ. ಮಕ್ಕಳು ಈ ಬಗ್ಗೆ ಗಮನ ನೀಡೋದಿಲ್ಲ. ಪೋಷಕರು ಕೂಡ ಮಕ್ಕಳಿಗೆ ಯೋಗಾಭ್ಯಾಸ ಮಾಡೋ ಬಗ್ಗೆ ಆಸಕ್ತಿ ತೋರೋದಿಲ್ಲ. ಆದ್ರೆ ಯೋಗಾಭ್ಯಾಸ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸೋದಕ್ಕೆ ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲದೇ, ಏಕಾಗ್ರತೆಯೂ ಹೆಚ್ಚಾಗಲಿದೆ.

ಹೆಚ್ಚಿನವರಿಗೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗೋದಿಲ್ಲ. ಯೋಗ ಮಾಡೋದ್ರಿಂದ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಮತ್ತು ಮೆದುಳಿನ ಎರಡು ಬದಿಗಳ ನಡುವೆ ಸಮತೋಲನವನ್ನು ಸಾಧಿಸುವ ಮೂಲಕ ಮೆದುಳಿನ ಕಾರ್ಯವನ್ನು ಗರಿಷ್ಠಗೊಳಿಸಲು ಪ್ರಯತ್ನಿಸುತ್ತದೆ. ಅಷ್ಟಕ್ಕು ಮಕ್ಕಳ ಬುದ್ಧಿಶಕ್ತಿ ಉತ್ತಮವಾಗಲು ಯಾವ ರೀತಿಯ ಯೋಗ ಅಭ್ಯಾಸ ಮಾಡಿಸಬೇಕು ಅನ್ನೋದನ್ನು ತಿಳಿಯೋಣ.
1. ಸರ್ವಾಂಗಾಸನ
ಸರ್ವಾಂಗಾಸನವು ಬುದ್ಧಿಶಕ್ತಿಯನ್ನು ಉತ್ತಮಗೊಳಿಸೋದಕ್ಕೆ ನೆರವಾಗುತ್ತದೆ. ಮೊದ ಮೊದಲು ಯೋಗಭ್ಯಾಸ ಕಲಿಯುತ್ತಿರುವವರಿಗೆ ಇದನ್ನು ಮಾಡೋದಕ್ಕೆ ಕೊಂಚ ಕಷ್ಟ. ಯಾಕಂದ್ರೆ ನಮ್ಮ ಸಂಪೂರ್ಣ ದೇಹದ ಭಾರವನ್ನು ತಲೆ, ಭುಜ ಹಾಗೂ ಕೈಗಳ ಮೇಲೆ ಹಾಕಿ, ಕಾಲನ್ನು ಮೇಲಕ್ಕೆ ಎತ್ತಿ ಬ್ಯಾಲೆನ್ಸ್ ಮಾಡಬೇಕು. ಇದು ನಮ್ಮ ಬುದ್ಧಿ ಶಕ್ತಿ ಉತ್ತಮಗೊಳಿಸಲು ನೆರವಾಗುತ್ತದೆ.
2. ಬಾಲ ಬಕಾಸನ
ಹೆಸರಿಗೆ ತಕ್ಕಂತೆ ಈ ಆಸನವನ್ನು ಮಾಡಿದಾಗ ನಾವು ಬಕದ ರೀತಿ ಕಾಣುತ್ತೇವೆ. ಬಕ ಎಂದರೆ ಬಾತುಕೋಳಿ. ಈ ಆಸನದಲ್ಲಿ ನಮ್ಮ ಸಂಪೂರ್ಣ ದೇಹದ ತೂಕ ಎರಡು ಕೈಗಳ ಮೇಲಿರುತ್ತದೆ. ಹಾಗೂ ಸೊಂಟವನ್ನು ಸ್ವಲ್ಪ ಬಾಗಿಸಿ, ನಮ್ಮ ಕಾಲುಗಳನ್ನು ಬಗ್ಗಿಸಬೇಕು. ನಮ್ಮ ಮುಖ ನೆಲವನ್ನು ನೋಡುತ್ತಿರಬೇಕು. ಈ ಆಸನವೂ ಕೂಡ ಮಕ್ಕಳು ಸೇರಿದಂತೆ ದೊಡ್ಡವರ ಬುದ್ಧಿಶಕ್ತಿ ಉತ್ತಮವಾಗಲು ನೆರವಾಗುತ್ತದೆ.
3. ವೃಕ್ಷಾಸನ
ವೃಕ್ಷಾಸನ ನೋಡೋಕ್ಕೆ ತುಂಬಾನೇ ಸುಲಭ. ಆದರೆ ಇದನ್ನು ಮಾಡೋದು ಕೊಂಚ ಕಷ್ಟ. ಒಂದೇ ಕಾಲಿನ ಸಹಾಯದಿಂದ ಇಡೀ ದೇಹವನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಈ ಆಸನ ಮಾಡಲು ಮೊದಲು ನೇರವಾಗಿ ನಿಂತುಕೊಳ್ಳಿ. ನಂತರ ಎರಡು ಕೈಗಳನ್ನು ನೇರವಾಗಿ ಮೇಲಕ್ಕೆ ಎತ್ತಿ ನಂತರ ನಮಸ್ಕಾರ ಮಾಡಿ. ಇನ್ನೂ ಒಂದು ಕಾಲನ್ನು ಮತ್ತೊಂದು ಕಾಲಿನ ತೊಡೆಯ ಹತ್ತಿರ ತಂದಿಡಿ.
4. ಗರುಡಾಸನ
ಗರುಡಾಸನ ನೋಡೋದಕ್ಕೆ ತುಂಬಾನೇ ಸುಲಭವಾಗಿದೆ ಅಂತ ಅನ್ನಿಸಿದ್ರೂ ಕೂಡ ಮಾಡೋದು ತುಂಬಾನೇ ಕಷ್ಟ. ಗರುಡಾಸನ ಮಾಡಲು ಕೊಂಚ ಬೆನ್ನನ್ನು ಬಾಗಿಸಿ ನಿಲ್ಲಬೇಕು. ನಂತರ ಎರಡೂ ಕೈಯನ್ನು ಸುರುಳಿ ಸುತ್ತಬೇಕು. ಇನ್ನೊಂದು ಕಡೆಯಿಂದ ಕಾಲನ್ನು ಕೂಡ ಸುರುಳಿ ಸುತ್ತಿ ನಿಲ್ಲಬೇಕು. ಈ ಆಸನವನ್ನು ಅಭ್ಯಾಸ ಇಲ್ಲದೇ ಮಾಡೋದು ಕಷ್ಟ. ಈ ಆಸನವನ್ನು ಮಾಡುವಾಗ ಒಂದೇ ಕಡೆ ಗಮನ ಕೇಂದ್ರೀಕರಿಸಬೇಕಾಗಿರೋದ್ರಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ.
5. ಮಂಡೂಕಾಸನ
ಮಕ್ಕಳು ಈ ಆಸನವನ್ನು ತುಂಬಾನೇ ಖುಷಿಪಟ್ಟು ಮಾಡುತ್ತಾರೆ. ಯಾಕಂದ್ರೆ ಈ ಆಸನ ಕಪ್ಪೆಯ ಆಕೃತಿಯನ್ನು ಹೋಲುತ್ತದೆ. ಸಾಮಾನ್ಯವಾಗಿ ಕಪ್ಪೆ ಹೇಗೆ ತನ್ನ ಕೈ ಹಾಗೂ ಕಾಲುಗಳಿಂದ ದೇಹವನ್ನು ಬ್ಯಾಲೆನ್ಸ್ ಮಾಡುತ್ತೋ ಅದೇ ರೀತಿ ನಾವು ಮಾಡಬೇಕು. ಮೊದಲಿಗೆ ಎರಡೂ ಕೈಗಳನ್ನು ನೆಲಕ್ಕೆ ಚಾಚಿ. ಆನಂತರ ಎರಡೂ ಕಾಲಗಳನ್ನು ನೆಲಕ್ಕೆ ಚಾಚಿ ನಂತರ ಬೆನ್ನನ್ನು ಬಗ್ಗಿಸಿ. ಈ ಆಸನವು ಕೂಡ ಬುದ್ಧಿ ಶಕ್ತಿ ವೃದ್ಧಿಮಾಡುತ್ತದೆ.
6. ನಟರಾಜಾಸನ
ನಟರಾಜಾಸನವನ್ನು ಮಾಡೋದು ಕೂಡ ಕೊಂಚ ಕಷ್ಟ. ಯೋಗ ಮಾಡಿ ಪಳಗಿರೋರು ಮಾತ್ರ ಈ ಆಸನವನ್ನು ಮಾಡೋದಕ್ಕೆ ಸಾಧ್ಯ. ಇದನ್ನು ಮಾಡುವ ವಿಧಾನ ಹೇಗೆಂದರೆ ಮೊದಲಿಗೆ ನಿಂತುಕೊಂಡು ಬೆನ್ನನ್ನು ಬಗ್ಗಿಸಬೇಕು. ನಂತರ ಒಂದು ಕೈಯನ್ನು ಮುಂದಕ್ಕೆ ಚಾಚಬೇಕು. ಹಾಗೂ ಇನ್ನೊಂದು ಕಾಲನ್ನು ಹಿಂದಿನಿಂದ ಮೇಲಕ್ಕೆ ಎತ್ತಿ ನಿಧಾನವಾಗಿ ಬಗ್ಗಿಸಬೇಕು. ಇನ್ನೊಂದು ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿ ಕಾಲನ್ನು ಹಿಡಿದುಕೊಂಡು ಮುಂದೆ ನೋಡಬೇಕು.
7. ಪದ್ಮಾಸನ
ಪದ್ಮಾಸನ ಕೂಡ ನಮ್ಮ ಬುದ್ಧಿಶಕ್ತಿಯನ್ನು ಉತ್ತಮಗೊಳಿಸೋದಕ್ಕೆ ನೆರವಾಗುತ್ತದೆ. ಪದ್ಮಾಸನ ಮಾಡಲು ನೆಲದ ಮೇಲೆ ಕುಳಿತುಕೊಳ್ಳಬೇಕು. ನಂತರ ಎಡಕಾಲನ್ನು ಬಲಭಾಗಕ್ಕೆ ಹಾಗೂ ಬಲಗಾಲನ್ನು ಎಡಭಾಗಕ್ಕೆ ತಂದು ಮಡಿಸಿ ಕುಳಿತುಕೊಳ್ಳಿ. ನಂತರ ಎರಡು ಕೈಯನ್ನು ಎದೆಯ ನೇರಕ್ಕೆ ತಂದು ನಮಸ್ಕಾರ ಮಾಡಿ. ಕಣ್ಣುಮುಚ್ಚಿ ಸ್ವಲ್ಪಹೊತ್ತು ಏಕಾಗ್ರತೆಯಿಂದ ಧ್ಯಾನಿಸಿದರಷ್ಟೇ ಸಾಕು.
ಈ ಎಲ್ಲಾ ಆಸನಗಳನ್ನು ಮಕ್ಕಳಿಗೆ ನಿತ್ಯ ಅಭ್ಯಾಸ ಮಾಡಿಸಿ. ಇದು ರೂಢಿಯಾದರೆ ತುಂಬಾನೇ ಒಳ್ಳೆಯದು. ಇದರಿಂದ ಅವರ ಬುದ್ಧಿಶಕ್ತಿ ಉತ್ತಮಗೊಳ್ಳುತ್ತದೆ.



Click it and Unblock the Notifications






