Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಟಿಸಂ: ಈ ಮಕ್ಕಳಲ್ಲಿ ಸಂವಹನ ಕೌಶಲ್ಯ ಹೆಚ್ಚಿಸಲು ಏನು ಮಾಡಬೇಕು? ಏನು ಮಾಡಬಾರದು?
ಏಪ್ರಿಲ್ 2ರಂದು ಆಟಿಸಂ ಜಾಗ್ರತೆ ದಿನ (World Autism Awareness Day 2024) ಎಂದು ಆಚರಿಸಲಾಗುವುದು. 1000ದಲ್ಲಿ 1 ಮಗುವಿನಲ್ಲಿ ಈ ಆಟಿಸಂ ಸಮಸ್ಯೆ ಕಂಡು ಬರುತ್ತದೆ. ಆಟಿಸಂ ಸಮಸ್ಯೆ ಜನಿಸಿದಾಗ ಬಹುತೇಕ ತಿಳಿದು ಬರುವುದಿಲ್ಲ.
ಆದರೆ ಅವರು ಬೆಳೆಯುತ್ತಿದ್ದಂತೆ ಆಟಿಸಂ ಸಮಸ್ಯೆ ಕಂಡು ಬರುವುದು. ಈ ಮಕ್ಕಳಲ್ಲಿ ವಯಸ್ಸು ಬೆಳೆದರೂ ಬುದ್ಧಿ ಬೆಳೆಯಲ್ಲ. ಆಟಿಸಂ ಸಮಸ್ಯೆ ಇರುವ ಪ್ರತಿಭಾವಂತ ಮಕ್ಕಳು ಇದ್ದಾರೆ, ಪೋಷಕರು ಅವರ ಪ್ರತಿಭೆಯನ್ನು ಗುರುತಿಸಬೇಕು.
ಆಟಿಸಂ ಮಕ್ಕಳಿರುವ ಪೋಷಕರು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಮಕ್ಕಳಲ್ಲಿ ಸಂವಹನ ಸಾಮರ್ಥ್ಯ ಹೆಚ್ಚಿಸುವುದು ಹೇಗೆ?
- ನೀವು ಮಗುವಿನ ಹೆಸರು ಹೇಳಿ ಕರಿಯಬೇಕು, ಹೀಗೆ ಮಾಡುವುದರಿಂದ ಅವರಿಗೆ ನೀವು ಅವರ ಜೊತೆ ಮಾತನಾಡುತ್ತಿದ್ದೀರಿ ಎಂಬುವುದು ಗೊತ್ತಾಗುವುದು.
- ಅವರ ಜೊತೆ ಸರಳ ಪದಗಳನ್ನು ಬಳಸಿ ಮಾತನಾಡಿಸಿ
- ಅವರ ಜೊತೆ ನಿಧಾನಕ್ಕೆ ಮಾತನಾಡಿ.
- ಅವರ ಜೊತೆ ಕೈ ಸನ್ನೆ, ಅವರ ಕಣ್ಣು ನೋಡಿ ಮಾತನಾಡಿಸುವುದು ಮಾಡಿ, ಹೀಗೆ ಮಾತನಾಡಿಸುವುದರಿಂದ ಅವರಿಗೆ ನೀವು ಏನು ಹೇಳುತ್ತಿದ್ದೀರಿ ಎಂಬುವುದು ತಿಳಿಯುತ್ತದೆ.
- ಅಗ್ಯತಬಿದ್ದರೆ ನೀವು ಥೆರಪಿಸ್ಟ್ ಬಳಿ ಹೋಗಿ ಅವರಿಂದ ಕಲಿತುಕೊಂಡು ಆ ರೀತಿ ಮಾತುಕೇಳಿ ಮಕ್ಕಳ ಜೊತೆ ಮಾತನಾಡಿ.
ಏನು ಮಾಡಬಾರದು?
- ನಿಮ್ಮ ಮಗುವಿನ ಬಳಿ ತುಂಬಾ ಪ್ರಶ್ನೆ ಕೇಳಬೇಡಿ
- ತುಂಬಾ ಶಬ್ದ ಇರುವ ಕಡೆ, ಜನರು ತುಂಬಾ ಇರುವ ಕಡೆ ಮಾತನಾಡಬೇಡಿ
- ನೀವು ಮಗುವಿನ ಜೊತೆ ಅರ್ಥವಾಗದ ಭಾಷೆಯಲ್ಲಿ ಹೇಳಬೇಡಿ ಉದಾಹರಣೆಗೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರೆ ಇದ್ದಕ್ಕಿದ್ದಂತೆ ಇಂಗ್ಲಿಷ್‌ನಲ್ಲಿ ಮಾತನಾಡಿ.
ಆಟಿಸಂ ಮಕ್ಕಳಲ್ಲಿ ಕೋಪ
ಆಟಿಸಂ ಮಕ್ಕಳಲ್ಲಿ ಕೋಪ ಅಧಿಕವಿರುತ್ತದೆ, ಈ ಕಾರಣಕ್ಕೆ ಆ ಮಕ್ಕಳಿಗೆ ಕೋಪ ಹೆಚ್ಚು ಬರುತ್ತದೆ
ಬದಲಾವಣೆ: ಶಾಲೆ ಬದಲಾವಣೆ, ಅಥವಾ ಅವರಿಗೆ ಅರ್ಥವಾಗುವುದನ್ನು ನೀವು ಒತ್ತಾಯಪೂರ್ವವಾಗಿ ಕಲಿಸಲು ಪ್ರಯತ್ನಿಸುವುದು ಮಾಡಿದರೆ ಮಾನಸಿಕ ಒತ್ತಡ ಹೆಚ್ಚಾಗುವುದು, ಇದನ್ನು ಕೋಪದ ರೂಪದಲ್ಲಿ ಹೊರ ಹಾಕುತ್ತಾರೆ.
ಅವರಿಗೆ ಏನಾದರೂ ಅರ್ಥವಾಗದಿದ್ದರೆ ಅವರಲ್ಲಿ ಒತ್ತಡ ಹೆಚ್ಚಾಗುವುದು. ಯಾರನ್ನಾದರೂ ಗುರುತಿಸಲು ಅಥವಾ ನೀವು ಹೇಳಿದ್ದು ಅವರಿಗೆ ಅರ್ಥವಾಗಲು ಕಷ್ಟವಾದಾಗ ಈ ರೀತಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಅದನ್ನು ಕೋಪ ಪಡುವುದು ಅಥವಾ ಹಠ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹೊರ ಹಾಕುತ್ತಾರೆ.
ತುಂಬಾ ಗದ್ದಲ ಇರುವ ಕಡೆಗೆ ಹೋದಾಗ ಆ ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವುದು.
ಆಟಿಸಂ ಮಕ್ಕಳಲ್ಲಿ ತಿನ್ನುವ ವಿಚಾರದಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುವುದು
ಕೆಲವೊಂದು ಬಣ್ಣದ ಆಹಾರ ಮಾತ್ರ ಸೇವಿಸುವುದು
ಆಹಾರ ಸರಿಯಾಗಿ ತಿನ್ನದಿರುವುದು ಅಥವಾ ತುಂಬಾನೇ ತಿನ್ನುವುದು
ಆಹಾರವಲ್ಲದ ವಸ್ತುಗಳನ್ನು ತಿನ್ನುವುದು, ಮಣ್ಣು, ಸುಣ್ಣ ಹೀಗೆ ಇದನ್ನು ಪಿಕಾ ಎಂದು ಕರೆಯಲಾಗುವುದು.
ತಿನ್ನುವಾಗ ನೆತ್ತಿಗೆ ಹತ್ತುವುದು
ಆ ಮಕ್ಕಳಲ್ಲಿ ನಿದ್ದೆಯಲ್ಲಿ ಸಮಸ್ಯೆ ಕಂಡು ಬರುವುದು, ಅದಕ್ಕೆ ಇದು ಕಾರಣವಾಗಿರುತ್ತದೆ
ಮಾನಸಿಕ ಒತ್ತಡ
ಅತಿಯಾದ ಲೈಟ್, ಮೊಬೈಲ್ ನೋಡುವುದು
ನಿದ್ರೆ ಹಾರ್ಮೋನ್‌ಗಳಲ್ಲಿನ ವ್ಯತ್ಯಾಸ
ಹೈಪರ್ ಆಕ್ಟಿವ್ ಆಗಿರುತ್ತಾರೆ.
ಅವರು ಸರಿಯಾಗಿ ನಿದ್ದೆ ಮಾಡಲು ಏನು ಮಾಡಬೇಕು?
- ಅವರನ್ನು ಪ್ರತಿದಿನ ನಿರ್ಧಷ್ಟ ಸಮಯದಲ್ಲಿ ನಿದ್ದೆ ಮಾಡಿಸಿ, ಉದಾಹರಣೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಮಲಗಿಸುವುದು ಅಭ್ಯಾಸ ಮಾಡಿ. ಒಂದು ದಿನ 8 ಗಂಟೆಗೆ ಮತ್ತೊಂದು ದಿನ 10 ಗಂಟೆಗೆ ನಿದ್ದೆ ಮಾಡಿಸಬೇಡಿ.
- ಮಲಗಿಸುವಾಗ ಕೋಣೆಯಲ್ಲಿ ಲೈಟ್ ಹಾಕಬೇಡಿ, ಬೇಕಿದ್ದರೆ ಬೆಡ್‌ಲ್ಯಾಂಪ್ ಹಾಕಬಹುದು.
- ಮಕ್ಕಳಲ್ಲಿ ನಿದ್ದೆಗೆ ಸಮಸ್ಯೆಯಾಗುತ್ತಿದ್ದರೆ ತಜ್ಞರ ಬಳಿ ಕೇಳಿ.
ಏನು ಮಾಡಬೇಕು?
ಈ ರೀತಿ ಆಟಿಸಂ ಇರುವ ಮಕ್ಕಳ ಪೋಷಕರಿಂದ ಸಲಹೆ ಪಡೆಯಿರಿ
ಮಕ್ಕಳಲ್ಲಿ ಸಂವಹನ ಸಾಮರ್ಥ್ಯ ಹೆಚ್ಚಿಸಲು ಥೆರಪಿಸ್ಟ್ ಸಹಾಯ ಪಡೆಯಿರಿ.
ಆಟಿಸಂ ಮಕ್ಕಳಿಗೆ ಏನು ಮಾಡಬಾರದು?
ಆ ಮಕ್ಕಳ ಮೇಲೆ ಒತ್ತಡ ಹಾಕಬೇಡಿ
ಯಾವುದಾದರೂ ಫಂಕ್ಷನ್‌ಗೆ ಹೋದಾಗ ಎಲ್ಲರ ಜೊತಗೆ ಮಾತನಾಡು ಎಂದು ಒತ್ತಾಯಪಡಿಸಬೇಡಿ, ಅವರು ಅವರಷ್ಟಕ್ಕೆ ಇರಲು ಇಷ್ಟಪಟ್ಟರೆ ಬಿಡಿ.



Click it and Unblock the Notifications











