Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪರೂಪದ ಪ್ರಕರಣ: ಒಂದೇ ಬಾರಿಗೆ 6 ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ..!
ತಾಯಿಯಾಗುವುದು ಯಾವುದೇ ಹೆಣ್ಣಿಗೆ ಅತ್ಯಂತ ಸಂತಸದ ಕ್ಷಣ, ಅದರಲ್ಲೂ ತನ್ನ ಕರುಳಿನ ಕುಡಿ ತನ್ನ ಹಾಲನ್ನು ಕುಡಿಯಲು ತೊಡಗುವ ಮೊದಲ ಗಂಟೆಗಳು ಅವಿಸ್ಮರಣೀಯ. ಹುಟ್ಟಿದ ಮಗು ಅತ್ಯಂತ ದುರ್ಬಲವಾಗಿದ್ದು ತಾಯಿಯೇ ಎದೆಗವಚಿ ಹಾಲನ್ನು ಕುಡಿಸಬೇಕಾಗುತ್ತದೆ. ಆದರೆ ನಿಸರ್ಗ ನೀಡಿರುವ ಯಾವುದೋ ಶಕ್ತಿ ಮಗುವನ್ನು ತಾಯಿ ಹಾಲು ಕುಡಿಯುವತ್ತ ತೆವಳುವಂತೆ ಮಾಡುತ್ತದೆ.
ಈ ಕ್ಷಣಕ್ಕಾಗಿ ತಾಯಿ ಸದಾ ಕಾಯುತ್ತಾಳೆ. ಆಕೆಗೆ ತಾಯ್ತನ ಅನುಭವಿಸುವುದೇ ಜೀವನದ ಅತ್ಯಂತ ಸಂತಸದ ಸಮರ್ಥ ಕ್ಷಣದಲ್ಲಿ ಒಂದಾಗಿರುತ್ತೆ. ಹೀಗಿರುವಾಗ ನಾವು ತಾಯಿ ಒಮ್ಮೆ ಇಬ್ಬರು ಮಕ್ಕಳಿಗೆ ಜನ್ಮ ನೀಡುವು ಮೂವರು ಮಕ್ಕಳಿಗೆ ಜನ್ಮ ನೀಡುವುದು 4 ಮಕ್ಕಳಿಗೆ ಜನ್ಮ ನೀಡುವುದು ಹೀಗೆ ಇಂತಹ ಸುದ್ದಿಗಳ ಕೇಳಿರುತ್ತೇವೆ.

ಈಗ ಇಂತಹದ್ದೆ ಇನ್ನೊಂದು ಘಟನೆ ನಡೆದಿದೆ. ತಾಯಿಯೊಬ್ಬಳು ಒಂದೇ ಬಾರಿಗೆ 6 ಶಿಶುಗಳಿಗೆ ಜನ್ಮ ನೀಡಿದ್ದಾಳೆ. ಅಪರೂಪದ ಘಟನೆಯೊಂದರಲ್ಲಿ 27 ವರ್ಷದ ಪಾಕಿಸ್ತಾನಿ ಮಹಿಳೆ ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ಆರು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಜೀನತ್ ವಹೀದ್ ಅವರು ಏಪ್ರಿಲ್ 19 ರಂದು ಒಂದು ಗಂಟೆಯ ಅವಧಿಯಲ್ಲಿ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾಳೆ.
ವಿಶೇಷವೆಂದರೆ, ಹೆರಿಗೆ ನೋವಿನಿಂದ ಗುರುವಾರ ರಾತ್ರಿ ವಹೀದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಾಮಾನ್ಯ ಹೆರಿಗೆಯಾಗುವ ಸಂಭವವಿದ್ದ ಕಾರಣ ವೈದ್ಯರು ಸಹ ಅವಳಿ ಮಕ್ಕಳಿರಬಹುದು ಎಂದು ಅಂದಾಜಿಸಿದ್ದರು. ಆದರೆ ಒಂದರ ಬಳಿಕ ಒಂದರಂತೆ ಆರು ಶಿಶುಗಳಿಗೆ ಜನ್ಮ ನೀಡಿದ್ದು ಎಲ್ಲಾ ಶಿಶುಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೂ ಇಷ್ಟು ಶಿಶುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಜನನ ಸೋಂಕುಗಳ ತಡೆಯಲು ಶಿಶುಗಳನ್ನು ಇನ್ಕ್ಯುಬೇಟರ್‌ನಲ್ಲಿ ಇರಿಸಲಾಗಿತ್ತು. ಜೊತೆಗೆ ತಾಯಿಯೂ ಸಹ ಆರೋಗ್ಯವಾಗಿದ್ದು, ಎಲ್ಲಾ ಶಿಶುಗಳು ಉತ್ತಮ ತೂಕ ಹೊಂದಿವೆ ಎಂದಿದ್ದಾರೆ. ಆಸ್ಪತ್ರೆಯ ಆಡಳಿತವು ಈ ಶಿಶುಗಳ ಜನನದಿಂದ ಸಂತೋಷವನ್ನು ವ್ಯಕ್ತಪಡಿಸಿದೆ ಮತ್ತು ಕುಟುಂಬಕ್ಕೆ ಅವರ ವಾಸ್ತವ್ಯದ ಸಮಯದಲ್ಲಿ ಎಲ್ಲಾ ವೈದ್ಯಕೀಯ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಖಚಿತಪಡಿಸಿದೆ.
ಅಂತಹ ಹೆಚ್ಚಿನ ಸಂಖ್ಯೆಯ ಶಿಶುಗಳ ನೇರ ಜನನಗಳು ಅಪರೂಪ ಮತ್ತು ಪ್ರತಿ 4.5 ಮಿಲಿಯನ್ ಗರ್ಭಾವಸ್ಥೆಯಲ್ಲಿ ಕೇವಲ ಒಂದರಲ್ಲಿ ಸೆಕ್ಸ್‌ಟಪ್ಲೆಟ್‌ಗಳ ಜನನ ಸಂಭವಿಸುತ್ತದೆ ಎಂದು ನಂಬಲಾಗಿದೆ. ಒಂದೇ ಸಮಯದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಭ್ರೂಣಗಳೊಂದಿಗೆ ಮಹಿಳೆ ಗರ್ಭಿಣಿಯಾಗಿರುವ ಬಹು ಗರ್ಭಧಾರಣೆಯು ಗರ್ಭಾಶಯದಲ್ಲಿ ಅಳವಡಿಸುವ ಮೊದಲು ಫಲವತ್ತಾದ ಮೊಟ್ಟೆಯು ವಿಭಜನೆಯಾದಾಗ (ಒಂದೇ ಅವಳಿಗಳಂತೆಯೇ) ಅಥವಾ ಪ್ರತ್ಯೇಕ ಮೊಟ್ಟೆಗಳನ್ನು ವಿಭಿನ್ನವಾಗಿ ಫಲವತ್ತಾಗಿಸಿದಾಗ ಸಂಭವಿಸುತ್ತದೆ.
ಮೂರು ಅಥವಾ ಅದಕ್ಕಿಂತ ಹೆಚ್ಚು ಭ್ರೂಣಗಳನ್ನು ಒಳಗೊಂಡಿರುವ ಗರ್ಭಧಾರಣೆಗಳು ಅತ್ಯಂತ ಅಪರೂಪ. ಒಂದೇ ಗರ್ಭಧಾರಣೆಗಿಂತ ಹೆಚ್ಚಿನ ತೊಡಕುಗಳ ಅಪಾಯದೊಂದಿಗೆ ಅವು ಸಂಬಂಧಿಸಿವೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಬಹು ಜನನಗಳು ಹೆಚ್ಚು ಸಾಮಾನ್ಯವಾಗಿದೆ. ಇದಕ್ಕೂ ಮೊದಲು 2023 ಪೋಲಾಂಡ್‌ನಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ 5 ಶಿಶುಗಳಿಗೆ ಜನ್ಮ ನೀಡಿ ಸುದ್ದಿಯಾಗಿದ್ದರು. ಅದರಲ್ಲಿ ಮೂವರು ಹುಡುಗಿಯರು ಮತ್ತು ಇಬ್ಬರು ಗಂಡು ಮಕ್ಕಳಾಗಿದ್ದರು. ಆದರೆ ಆಕೆ ಈಗಾಗಲೇ ಒಟ್ಟು 12 ಮಕ್ಕಳ ತಾಯಿಯಾಗಿದ್ದಳು. ಇದಕ್ಕು ಮೊದಲೇ ಆಕೆ 7 ಮಕ್ಕಳಿಗೆ ಜನ್ಮ ನೀಡಿದ್ದಳು, ಈಗ ಮತ್ತೆ 5 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಹಿಂದೆ ಒಂದೇ ಬಾರಿಗೆ 7 ಶಿಶುಗಳಿಗೆ ಆಕೆ ಜನ್ಮ ನೀಡಿರಲಿಲ್ಲ. ಈಗ ಒಂದೇ ಬಾರಿಗೆ 5 ಶಿಶುಗಳಿಗೆ ಜನ್ಮ ನೀಡಿದ್ದಳು.



Click it and Unblock the Notifications
