ಇಬ್ಬರು ಮಕ್ಕಳಿದ್ರೆ ತಾಯಿಯಾದವಳಿಗೆ ತುಂಬಾನೇ ಒಳ್ಳೆಯದು ಹೇಗೆ?

ಮಕ್ಕಳಿರಲವ್ವ ಮನೆತುಂಬಾ ಎಂಬ ಗಾದೆಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹೇಗಾಗಿದೆ ಅಂದ್ರೆ ದಂಪತಿಗಳು ಒಂದು ಮಗು ಮಾಡಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡ್ತಾರೆ. ಹೀಗಾಗಿ ಎರಡನೇ ಮಗುವಿನ ಬಗ್ಗೆ ಯೋಚನೆ ಮಾಡೋದಕ್ಕೂ ಅವರು ಹೆದರುತ್ತಾರೆ. ಆದ್ರೆ ಸುಂದರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಬೇಕೇ ಬೇಕು. ಹಾಗಾದ್ರೆ ದಾಂಪತ್ಯದಲ್ಲಿ ಇಬ್ಬರು ಮಕ್ಕಳು ಯಾಕೆ ಮುಖ್ಯ? ಇದ್ರಿಂದ ಯಾವ ರೀತಿ ಪ್ರಯೋಜನವಾಗಲಿದೆ ಅನ್ನೋದನ್ನು ತಿಳಿಯೋಣ.

1. ಒಬ್ಬರಿಗೊಬ್ಬರು ಜೊತೆಯಾಗುತ್ತಾರೆ
ಇಬ್ಬರು ಮಕ್ಕಳಿದ್ದರೆ ಅವರ ಭವಿಷ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಚಿಕ್ಕದಿರುವಾಗ ಪೋಷಕರ ಆಶ್ರಯದಲ್ಲಿ ಬೆಳೆಯುವ ಮಕ್ಕಳು ಮುಂದೆ ಬೆಳೆದು ದೊಡ್ಡವರಾದ ಮೇಲೆ ಅವರ ಕುಟುಂಬದ ಜೊತೆಗೆ ಬ್ಯುಸಿಯಾಗಿರುತ್ತಾರೆ. ಆದ್ರೆ ಯಾವುದಾದರೂ ಕಾರ್ಯಕ್ರಮ ನಡೆದಾಗ ಇಬ್ಬರ ಕುಟುಂಬವು ಸೇರುತ್ತದೆ. ಅಥವಾ ಅಣ್ಣ ಅಥವಾ ತಮ್ಮನಿಗೆ ಸಂಕಷ್ಟದ ಪರಿಸ್ಥಿತಿ ಬಂದಾಗ ಮತ್ತೊಬ್ಬರು ಹೆಗಲಾಗುತ್ತಾರೆ. ಅಕ್ಕ ಅಥವಾ ತಂಗಿಯಿದ್ದರೆ ದುಃಖದಲ್ಲಿ ಹೆಗಲಾಗುತ್ತಾರೆ. ಆರ್ಥಿಕವಾಗಿಯೂ ಕೂಡ ಒಬ್ಬರಿಗೊಬ್ಬರು ಸಹಾಯ ಮಾಡೋದನ್ನು ಖಂಡಿತ ಮರೆಯೋದಿಲ್ಲ.

Why should you plan for a second baby? Know the reasons in Kannada

2. ಪ್ರೆಗ್ನೆನ್ಸಿಯ ಬಗ್ಗೆ ಎಲ್ಲಾ ವಿಚಾರಗಳು ಗೊತ್ತಿರುತ್ತದೆ
ಮೊದಲನೇ ಹೆರಿಗೆಯಲ್ಲಿ ಸಾಕಷ್ಟು ನೋವು ತಿಂದವರು ಎರಡನೇ ಪ್ರೆಗ್ನೆನ್ಸಿ ಬೇಡಪ್ಪಾ ಬೇಡ ಎಂದು ಹೆದರುತ್ತಾರೆ. ನಿಜ ಹೇಳ್ಬೇಕಂದ್ರೆ ಮೊದಲನೇ ಹೆರಿಗೆಯ ಸಮಯದಲ್ಲಿ ಎದುರಿಸಿದ ಸವಾಲುಗಳನ್ನು ನೀವು ಎರಡನೇ ಹೆರಿಗೆಯ ಸಮಯದಲ್ಲಿ ಎದುರಿಸಬೇಕಾಗಿ ಇರೋದಿಲ್ಲ. ಯಾಕಂದ್ರೆ ನಿಮಗೆ ಮೊದಲನೇ ಹೆರಿಗೆಯಲ್ಲಿ ಅನುಭವ ಆಗಿರೋದ್ರಿಂದ ಎರಡನೇ ಸಲ ನಿಮಗೆ ಮಾಮೂಲಿ ಎಂದೆನಿಸುತ್ತದೆ. ನೀವು ಏನೇ ಸವಾಲುಗಳು ಬಂದರೂ ಅದನ್ನು ದೈರ್ಯದಿಂದ ಎದುರಿಸುತ್ತೀರಿ.

3. ಬಟ್ಟೆ, ಆಟದ ಸಾಮಾನು ಮರು ಬಳಕೆ ಮಾಡಬಹುದು
ಹಾಗೆ ನೋಡೋದಕ್ಕೆ ಹೋದ್ರೆ ಎರಡನೇ ಮಗುವಾದ ಸಂದರ್ಭದಲ್ಲಿ ಖರ್ಚು ಕಡಿಮೆ ಅಂತಾನೇ ಹೇಳಬಹುದು. ಏಕೆಂದರೆ ಮೊದಲ ಮಗುವಿಗೆ ನೀವು ಆದಷ್ಟು ಎಲ್ಲವನ್ನೂ ಕೊಟ್ಟಿರುತ್ತೀರಿ. ದುಬಾರಿ ಆಟದ ಸಾಮಾನು, ಬಟ್ಟೆಗಾಗಿ ಖರ್ಷು ಮಾಡಿರುತ್ತೀರಿ. ಎರಡನೇ ಮಗುವಾದ ಸಂದರ್ಭದಲ್ಲಿ ಇದನ್ನೇ ಮರು ಬಳಕೆ ಮಾಡಿದರೆ ಆಯ್ತು. ಕಡಿಮೆ ಖರ್ಚಿನಲ್ಲಿ ಎಲ್ಲವೂ ಮುಗಿದು ಹೋಗುತ್ತದೆ.

4. ಒಡಹುಟ್ಟಿದವರಿಬ್ಬರೂ ಆಟವಾಡಿಕೊಳ್ಳುತ್ತಾರೆ
ಒಂದೇ ಮಗುವಿದ್ದಾಗ ನಾವು ಅದರ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಮಗುವಿಗೆ ಒಂಟಿತನ ಕಾಡಬಾರದೆಂದು ನಾವು ಆ ಮಗುವಿನ ಜೊತೆಗೆ ಅತಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಆದರೆ ಇಬ್ಬರು ಮಕ್ಕಳಿದ್ದಾಗ ಅವರಿಬ್ಬರು ಆಟವಾಡಿಕೊಳ್ಳುತ್ತಾರೆ. ಇನ್ನೂ ದೊಡ್ಡ ಮಗ/ಮಗಳು ಚಿಕ್ಕವರ ಕಾಳಜಿ ಮಾಡುತ್ತಾರೆ. ಹೀಗಾಗಿ ನಿಮ್ಮ ಕೆಲಸ ಕಡಿಮೆಯಾಗುತ್ತದೆ.

5. ಎರಡನೇ ಮಗುವಿಗೆ ಹೆಚ್ಚಿನ ಪ್ರೀತಿ ಸಿಗುತ್ತದೆ
ಒಂದೇ ಮಗುವಾದ್ರೆ ತಂದೆ-ತಾಯಿ ಇಬ್ಬರೂ ಎಲ್ಲಾ ಪ್ರೀತಿಯನ್ನು ಆ ಮಗುವಿಗೆ ಧಾರೆ ಎರೆದು ಬಿಡುತ್ತಾರೆ. ಆದರೆ ಎರಡು ಮಕ್ಕಳಿದ್ದಾಗ ಆ ಪ್ರೀತಿ ಇಬ್ಬರಲ್ಲೂ ಹಂಚಿಕೆಯಾಗುತ್ತದೆ. ಆದರೆ ನಿಮ್ಮಗಿಂತಲೂ ನಿಮ್ಮ ಮೊದಲ ಮಗುವಿಗೆ ಎರಡನೇ ಮಗುವಿನ ಮೇಲೆ ಅತಿಯಾದ ಪ್ರೀತಿ ಇರುತ್ತದೆ. ಒಂದು ವೇಳೆ ನಿಮ್ಮ ಎರಡನೇಯ ಮಗು ಅಳುತ್ತಿದೆ ಎಂದುಕೊಳ್ಳಿ ಅಂತಹ ಸಮಯದಲ್ಲಿ ನಿಮ್ಮಿಂದ ಆ ಮಗುವನ್ನು ಸಮಾಧಾನ ಪಡಿಸೋದಕ್ಕೆ ಆಗೋದಿಲ್ಲ. ಆದರೆ ನಿಮ್ಮ ಎರಡನೇ ಮಗು ಸಮಾಧಾನ ಪಡಿಸುತ್ತದೆ.

6. ಒಡಹುಟ್ಟಿದವರಿಗೆ ಮೊದಲ ಮಗು ಹೆಗಲಾಗುತ್ತದೆ
ಮೊದಲ ಮಗು ಆಗಿರೋದ್ರಿಂದ ಅದನ್ನು ಶಾಲೆಗೆ ಕಳುಹಿಸುವುದರಿಂದ ಹಿಡಿದು ಅದಕ್ಕೆ ಜೀವನ ಮೌಲ್ಯಗಳನ್ನು ಕಲಿಸೋದಕ್ಕೆ ನಿಮಗೆ ಕೊಂಚ ಕಷ್ಟ ಎನಿಸಬಹುದು. ಆದ್ರೆ ಎರಡನೇ ಮಗುವಿನಲ್ಲಿ ನಿಮಗೆ ಈ ಕಷ್ಟಗಳೇ ಇರೋದಿಲ್ಲ. ದೊಡ್ಡ ಮಗುವನ್ನು ನೋಡಿ ಎರಡನೇ ಮಗು ಕಲಿತುಕೊಳ್ಳುತ್ತದೆ. ಜೊತೆಗೆ ಎರಡನೇ ಮಗುವಿನ ಶಾಲೆಯ ಹಂತದಿಂದ ಹಿಡಿದು ದೊಡ್ಡದಾದ ಮೇಲೂ ಮೊದಲನೇ ಮಗ/ಮಗಳು ಸಹಾಯ ಮಾಡುತ್ತಾರೆ. ಎರಡನೇ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಎರಡನೇ ಮಗುವಿನ ಪಾಲು ಇದ್ದೇ ಇರುತ್ತದೆ.

7. ಒಂಟಿತನ ಕಾಡೋದಿಲ್ಲ
ಒಂದೇ ಮಗುವಾದರೆ ಅವರಿಗೆ ತಂದೆ-ತಾಯಿ ಬಿಟ್ಟು ಬೇರೆ ಪ್ರಪಂಚ ಗೊತ್ತಿರೋದಿಲ್ಲ. ಇತರ ಮಕ್ಕಳ ಜೊತೆಗೆ ಬೆರೆಯೋದಕ್ಕೂ ಹೋಗೋದಿಲ್ಲ. ಸಂಕಷ್ಟದ ಸಂದರ್ಭ ಬಂದರೆ ಅದನ್ನು ಎದುರಿಸೋದಕ್ಕೆ ಸಾಧ್ಯವೇ ಇಲ್ಲ. ದೊಡ್ಡವರಾದ ಮೇಲೆ ಅಪ್ಪ- ಅಮ್ಮನನ್ನು ಕಳೆದುಕೊಂಡರೆ ತನಗಾಗಿ ಕುಟುಂಬ ಅನ್ನೋದು ಇರೋದಿಲ್ಲ. ಆದರೆ ಇಬ್ಬರು ಮಕ್ಕಳಿದ್ದರೆ ಇಂತಹ ಸಮಸ್ಯೆಗಳೇ ಬರೋದಿಲ್ಲ. ಅಪ್ಪ- ಅಮ್ಮನ ನಂತರವೂ ಅವರು ಜೀವನವನ್ನೂ ಸಾಗಿಸುತ್ತಾರೆ. ಒಂಟಿತನ ಎಂದಿಗೂ ಅವರನ್ನು ಕಾಡೋದಿಲ್ಲ.

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಮನಿಸಿದ್ರೆ ಇಬ್ಬರು ಮಕ್ಕಳನ್ನು ಹೊಂದುವುದು ತುಂಬಾನೇ ಒಳ್ಳೆಯದು.

English summary

Why should you plan for a second baby? Know the reasons in Kannada

Here are the reasons why should you plan for a second baby.
X
Desktop Bottom Promotion