Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ! ಅಪಾಯ ಕಟ್ಟಿಟ್ಟ ಬುತ್ತಿ!
ಪೋಷಕರು ಮಾಡುವ ದೊಡ್ಡ ತಪ್ಪು ಏನಂದ್ರೆ ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡೋದು. ಹೆಚ್ಚಿನ ಪೋಷಕರ ಉದ್ದೇಶ ಮಕ್ಕಳನ್ನು ಕೀಳಾಗಿ ಕಾಣೋದು ಆಗಿರೋದಿಲ್ಲ. ಬದಲಾಗಿ ಪೋಷಕರು ಏನು ಅಂದುಕೊಳ್ಳುತ್ತಾರೆ ಅಂದ್ರೆ ಹೋಲಿಕೆ ಮಾಡುವ ಮೂಲಕ ಮಕ್ಕಳಿಗೆ ಪ್ರೇರಣೆ ನೀಡಬಹುದು ಎಂದು.
ಆದರೆ ಈ ರೀತಿ ಹೋಲಿಕೆ ಮಾಡೋದು ನಿಮ್ಮ ಮಗುವಿನ ಆತ್ಮಸ್ಥೈರ್ಯವನ್ನೇ ಕುಗ್ಗಿಸಿ ಬಿಡಬಹುದು. ಅಷ್ಟಕ್ಕು ಮತ್ತೊಂದು ಮಗುವಿನ ಜೊತೆಗೆ ನಿಮ್ಮ ಮಗುವನ್ನು ಹೋಲಿಕೆ ಮಾಡೋದ್ರಿಂದ ಯಾವ ರೀತಿ ಅಡ್ಡ ಪರಿಣಾಮಗಳಿದೆ ಅನ್ನೋದನ್ನು ತಿಳಿಯೋಣ.

1. ಒಡ ಹುಟ್ಟಿದವರ ಮಧ್ಯೆ ಜಗಳ ಹೆಚ್ಚಾಗುತ್ತದೆ
ಪೋಷಕರು ಮೊದಲು ತಮ್ಮ ಮಕ್ಕಳನ್ನು ಒಡ ಹುಟ್ಟಿದವರ ಜೊತೆಗೆ ಹೋಲಿಕೆ ಮಾಡುತ್ತಾರೆ. ಪೋಷಕರು ಒಬ್ಬ ಮಗನ ಬಗ್ಗೆ ಹೇಳುತ್ತಾ ಅವನು ಉತ್ತಮ, ನೀನ್ಯಾಕೆ ಹೀಗಿದ್ದೀಯಾ ಎಂದು ಮತ್ತೊಬ್ಬನನ್ನು ಹೀಯಾಳಿಸುತ್ತಿದ್ದರೆ ಆ ಮಗುವಿಗೆ ನಿಧಾನವಾಗಿ ತನ್ನ ಒಡಹುಟ್ಟಿದವನ ಮೇಲೆ ಕೋಪ, ದ್ವೇಷ ಹುಟ್ಟಬಹುದು. ಹೀಗಾಗಿ ಹೋಲಿಕೆ ಮಾಡುವುದು ಸರಿಯಲ್ಲ.
2. ಆಪ್ತರಿಂದ ಬೇರ್ಪಡುತ್ತಾರೆ
ಪೋಷಕರು ಮಕ್ಕಳನ್ನು ಒಡಹುಟ್ಟಿದವರು, ಸಂಬಂಧಿಕರು, ಸ್ನೇಹಿತರ ಮಕ್ಕಳ ಜೊತೆಗೆ ಹೋಲಿಕೆ ಮಾಡುತ್ತಾರೆ. ಇದರಿಂದ ಮಕ್ಕಳ ಒಳಗೆ ಒಂದು ರೀತಿಯ ಕೀಳು ಭಾವನೆ ಬರೋದು ಮಾತ್ರವಲ್ಲದೇ, ನೀವು ಯಾರ ಜೊತೆಗೆ ನಿಮ್ಮ ಮಗುವನ್ನು ಹೋಲಿಕೆ ಮಾಡುತ್ತೀರೋ ಅವರೊಂದಿಗೆ ನಿಮ್ಮ ಮಗು ಅಂತವನ್ನು ಕಾಯ್ದುಕೊಳ್ಳುತ್ತದೆ. ಇದರಿಂದ ಅವರ ಮಧ್ಯ ಸಂಬಂಧವು ಹಾಳಾಗುತ್ತದೆ.
3. ಮಗುವಿನ ಪ್ರತಿಭೆಯನ್ನು ಕೊಲ್ಲುತ್ತದೆ
ಪ್ರತಿಯೊಬ್ಬ ಮಗುವಿಗೂ ಒಂದಲ್ಲ ಒಂದು ಕೌಶಲ್ಯ ಇದ್ದೇ ಇರುತ್ತದೆ. ನಿಮ್ಮ ಮಗುವಿನಲ್ಲಿ ವಿಶೇಷ ಕೌಶಲ್ಯ ಇದ್ದರೂ ಕೂಡ ಅದು ನಿಮಗೆ ಕಾಣೋದಿಲ್ಲ. ನೀವು ಅದನ್ನು ಗುರುತಿಸೋದಕ್ಕೂ ಹೋಗೋದಿಲ್ಲ. ಅದನ್ನು ಬಿಟ್ಟು ಬೇರೆಯವರ ಮಗುವಿನಲ್ಲಿರುವ ಕೌಶಲ್ಯ ನಿಮಗೆ ಉತ್ತಮವಾಗಿ ತೋರುತ್ತದೆ. ನಿಮ್ಮ ಮಗುವಿಗೂ ನೀವು ಅದನ್ನೇ ಕಲಿಯೋದಕ್ಕೆ ಹೇಳುತ್ತೀರಿ. ಇದರಿಂದ ನಿಮ್ಮ ಮಗುವಿನ ಪ್ರತಿಭೆಯನ್ನು ನೀವು ಕೈಯಾರೆ ಹಾಳು ಮಾಡಿದಂತಾಗುತ್ತದೆ.
4. ಮಗುವಿನ ಆತ್ಮವಿಶ್ವಾಸ ಬತ್ತಿ ಹೋಗುತ್ತದೆ
ಮಕ್ಕಳು ಕಲಿಯುವ ಹಂತದಲ್ಲಿ ಅವರು ಏನು ಮಾಡಿದರೂ ಸರಿ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಅದು ಚಿಕ್ಕ ಕೆಲಸವಾಗಲಿ ಅಥವಾ ದೊಡ್ಡ ಕೆಲಸವೇ ಆಗಲಿ ಪೋಷಕರು ಯಾವಾಗಲೂ ಮಕ್ಕಳಿಗೆ ಹೆಗಲಾಗಿ ನಿಲ್ಲಬೇಕು. ಅವರು ಸೋತಾಗ ಹುರಿದುಂಬಿಸಬೇಕು. ಆಗ ಅವರ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಅದನ್ನು ಬಿಟ್ಟು ನಿಮ್ಮ ಮಗುವನ್ನು ಬೇರೆಯವರಿಗೆ ಹೋಲಿಕೆ ಮಾಡುತ್ತಾ ಅವರು ಮಾಡಿದ ಕೆಲವನ್ನು ತಪ್ಪೆಂದು ಹೇಳಿದರೆ ಅವರೊಳಗೆ ಒಂದು ರೀತಿ ಅಂಜಿಕೆ ಸೃಷ್ಟಿಯಾಗುತ್ತದೆ. ಯಾವ ಕೆಲಸ ಮಾಡೋದಕ್ಕೆ ಅವರಿಗೆ ಆತ್ಮಸ್ಥೈರ್ಯವೇ ಇಲ್ಲದಾಗುತ್ತದೆ.
5. ಒತ್ತಡ ಹೆಚ್ಚಾಗುತ್ತದೆ
ಪೋಷಕರು ತಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಕೆ ಮಾಡುವಾಗ ನೀವು ಅವರಂತೆಯೇ ಆಗಬೇಕು ಎಂಬ ಒತ್ತಡ ಹೇರುತ್ತಾರೆ. ಬೇರೆಯವರಲ್ಲಿರುವ ಕೌಶಲ್ಯ ನಿಮ್ಮ ಮಗುವಿನಲ್ಲಿ ಇರೋದಿಲ್ಲ. ಹೀಗಾಗಿ ನಿಮ್ಮ ಒತ್ತಾಯಕ್ಕೆ ಸಿಲುಕಿದ ಮಗು ಬಲವಂತವಾಗಿ ಕಲಿಯೋದಕ್ಕೆ ಹೋಗುತ್ತದೆ. ಈ ಸಂದರ್ಭದಲ್ಲಿ ಆ ಮಗುವಿನ ಮನಸ್ಸಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಮಗು ಮಾನಸಿಕ ಕಾಯಿಲೆಯಿಂದ ಬಳಲಬೇಕಾದ ಪರಿಸ್ಥಿತಿ ಸೃಷ್ಟಿಯಾದರೂ ಅನುಮಾನವಿಲ್ಲ.
ಮಕ್ಕಳ ಮನಸ್ಸು ತುಂಬಾನೇ ಸೂಕ್ಷ್ಮ. ಅವರ ಮೇಲೆ ಯಾವ ರೀತಿಯ ಒತ್ತಡವನ್ನು ಹಾಕದೇ ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡಿ. ಸಾಧ್ಯವಾದರೆ ನಿಮ್ಮ ಮಗುವಿನ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡಿ. ಖಂಡಿತ ಅವರು ಒಂದಲ್ಲ ಒಂದು ಸಾಧನೆ ಮಾಡುತ್ತಾರೆ.



Click it and Unblock the Notifications

