Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಸಿ ಸೆಕ್ಷನ್‌ಗಿಂತ ಸಹಜ ಹೆರಿಗೆಯಾದರೆ ಮಗು ಹೆಚ್ಚು ಆರೋಗ್ಯವಾಗಿರುತ್ತೆ ಏಕೆ? ಪ್ರಮುಖ 3 ಕಾರಣ ವಿವರಿಸಿದ ಸ್ತ್ರೀರೋಗ ತಜ್ಞೆ
ಹಿಂದಿನ ವರ್ಷಗಳಲ್ಲಿ ಸಿಸೇರಿಯನ್ ಡೆಲಿವರಿ ತುಂಬಾನೇ ಅಪರೂಪ, ಇತ್ತೀಚಿನ ವರ್ಷಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾನೇ ಅಪರೂಪವಾಗುತ್ತಿದೆ. ಕೆಲವರಿಗೆ ಸಿಸೇರಿಯನ್ ಅನಿವಾರ್ಯವಾದರೆ ಇನ್ನು ಕೆಲವರು ನೋವು ಸಹಿಸಲು ಸಾಧ್ಯವಿಲ್ಲ ಎಂದು ಸಿಸೇರಿಯನ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಸಿಸೇರಿಯನ್ ಹೆರಿಗೆಯಾದರೆ ಮಗು ಸಹಜ ಹೆರಿಗೆಯಲ್ಲಿ ಜನಿಸಿದ ಮಗುವಿನಷ್ಟು ಆರೋಗ್ಯವಾಗಿರಲ್ಲ ಎಂಬುವುದನ್ನು ತಜ್ಞರೇ ಹೇಳುತ್ತಾರೆ. ಏಕೆ? ಸಿ ಸೆಕ್ಷನ್‌ಗಿಂತ ಸಹಜ ಹೆರಿಗೆಯಾದರೆ ಮಗುವಿಗೆ ಏಕೆ ಒಳ್ಳೆಯದು ಎಂಬುವುದನ್ನು ಸ್ತ್ರೀ ರೋಗ ತಜ್ಞರಾದ ಡಾ. ವಿಜಯ್ ಮೀನಾಕ್ಷಿ (Consultant - Obstetrics & Gynecology, Manipal Hospital Varthur and Whitefield) ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಏಕೆ ಸಹಜ ಹೆರಿಗೆ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ನೋಡುವುದಾದರೆ...

ಸಹಜ ಹೆರಿಗೆಯಲ್ಲಿ ಮಗುವಿಗೆ ಒತ್ತಡ ತಡೆದುಕೊಳ್ಳುವ ಶಕ್ತಿ ಹುಟ್ಟುವಾಗಲೇ ಬರುತ್ತದೆ
ಸಹಜ ಹೆರಿಗೆಯಲ್ಲಿ 9 ತಿಂಗಳು ತುಂಬಿದ ಮೇಲೆ 18-24 ಗಂಟೆಗಳ ಹೆರಿಗೆ ನೋವು ಬಂದು ನಂತರ ಮಗು ಹುಟ್ಟುತ್ತದೆ. ಹೀಗೆ ಹೆರಿಗೆ ನೋವು ಬರುವಾಗ ನಮ್ಮ ದೇಹದಲ್ಲಿ ಸ್ಟ್ರೆಸ್ ಅಂದರೆ ಒತ್ತಡದ ಹಾರ್ಮೋನ್‌ಗಳು ಬಿಡುಗಡೆಯಾಗುತ್ತದೆ, ಅಲ್ಲದೆ ಮಗುವಿಗೆ ಗರ್ಭಕೋಶದಿಮದ ರಕ್ತಸಂಚಾರ ಕಡಿಮೆಯಾಗುವುದು, ಆವಾಗ ಮಗುವಿನ ದೇಹದಿಂದ ಕಾರ್ಟಿಸೋಲ್‌ನಂಥ ಹಾರ್ಮೋನ್ ಬಿಡುಗಡೆಯಾಗುತ್ತದೆ. ಸಹಜ ಹೆರಿಗೆಯಲ್ಲಿ ಬಿಟ್ಟು-ಬಿಟ್ಟು ನೋವು ಬರುತ್ತದೆ, ಹೀಗೆ ನೋವು ಬರುವಾಗ ಮಗುವಿಗೆ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ದೊರೆಯುತ್ತದೆ.
ಸಹಜ ಹೆರಿಗೆಯಲ್ಲಿ ಮಗುವಿನ ಶ್ವಾಸಕೋಶದ ಆರೋಗ್ಯ ಚೆನ್ನಾಗಿ ಇರುತ್ತದೆ
ಸಹಜ ಹೆರಿಗೆಯಲ್ಲಿ ಜನನೇಂದ್ರೀಯ ಮೂಲಕ ಹೊರಗಡೆ ಬರುತ್ತದೆ. ಮೊದಲಿಗೆ ತಲೆ ಹೊರಗಡೆ ಬರುತ್ತದೆ, ನಂತರ ದೇಹ ಹೊರಗಡೆ ಬರುತ್ತದೆ, ಹೀಗೆ ಮಗು ಹೊರಗಡೆ ಬರುವಾಗ ಮಗುವಿನ ಶ್ವಾಸಕೋಶ ಕಂಪ್ರೆಸ್ ಆಗುತ್ತದೆ, ಗರ್ಭದೊಳಗಡೆ ಇದ್ದಾಗ ಏನಾದರೂ ನೀರು ಕುಡಿದಿದ್ದರೆ ಅದು ಹೊರಗಡೆ ಬರುತ್ತದೆ. ಇದರಿಂದ ಶ್ವಾಸಕೋಶದ ಆರೋಗ್ಯ ಚೆನ್ನಾಗಿರುತ್ತದೆ, ಮಗುವಿನ ಉಸಿರಾಟ ಚೆನ್ನಾಗಿರುತ್ತದೆ. ಇದು ಸಿ ಸೆಕ್ಷನ್ ಹೆರಿಗೆಯಲ್ಲಿ ಆಗುವುದಿಲ್ಲ, ಆದ್ದರಿಂದ ಮಗುವಿನ ಶ್ವಾಸಕೋಶದ ಆರೋಗ್ಯಕ್ಕೆ ಸಹಜ ಹೆರಿಗೆ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು
ಜನನೇಂದ್ರೀಯದಲ್ಲಿ ಕೆಲವೊಂದು ಒಳ್ಳೆಯ ಬ್ಯಾಕ್ಟಿರಿಯಾಗಳೂ ಇರುತ್ತದೆ, ಮಗು ಜಜನೇಂದ್ರೀಯ ಮೂಲಕ ಹೊರಗಡೆ ಬರುವಾಗ ಆ ಒಳ್ಳೆಯ ಬ್ಯಾಕ್ಟಿರಿಯಾಗಳು ಮಗುವಿನ ದೇಹದೊಳಗಡೆ ಸೇರುತ್ತದೆ, ಇದರಿಂದ ಆ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಇದರಿಂದಾಗಿ ಆ ಮಗುವಿನಲ್ಲಿ ಅಸ್ತಮಾ, ಅಲರ್ಜಿ, ಆಗಾಗ ಕಾಯಿಲೆ ಬೀಳುವುದು ಈ ಬಗೆಯ ಸಮಸ್ಯೆ ಕಡಿಮೆಯಾಗುವುದು. ಅಲ್ಲದೆ ಸಹಜ ಹೆರಿಗೆಯಾದ ಮಕ್ಕಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಹುಟ್ಟಿದ ತಕ್ಷಣ ಕಂಡು ಬರುವ ಉಸಿರಾಟದ ಸಮಸ್ಯೆ, ತೀವ್ರ ಉಸಿರಾಟ ಈ ಬಗೆಯ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ.
ಸಿ ಸೆಕ್ಷನ್ ಮಕ್ಕಳಲ್ಲಿ ಸಹಜ ಹೆರಿಗೆಯಲ್ಲಿ ಬಂದ ಮಗುವಿಗಿಂತ ಆರೋಗ್ಯ ಕಡಿಮೆ ಏಕೆ?
ಸಿ ಸೆಕ್ಷನ್ ಹೆರಿಗೆಯಲ್ಲಿ ಮಗು ಒತ್ತಡಕ್ಕೆ ಒಳಗಾಗುವುದಿಲ್ಲ, ಆದ್ದರಿಂದ ಒತ್ತಡದ ಹಾರ್ಮೋನ್‌ಗಳು ಬಿಡುಗಡೆಯಾಗುವುದಿಲ್ಲ, ಅಲ್ಲದೆ ಸಿ ಸೆಕ್ಷನ್‌ನಲ್ಲಿ ಮಗುವನ್ನು ತೆಗೆದಾಗ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು, ಮಗುವಿಗೆ ತಾಯಿಯಿಂದ ಒಳ್ಳೆಯ ಬ್ಯಾಕ್ಟಿರಿಯಾ ಸಿಗುವುದಿಲ್ಲ, ಹೀಗಾಗಿ ಸಿಸೆಕ್ಷನ್‌ನಲ್ಲಿ ಜನಿಸಿದ ಮಕ್ಕಳಲ್ಲಿ ಸಹಜ ಹೆರಿಗೆಯಲ್ಲಿ ಜನಿಸಿದ ಮಕ್ಕಳಿಗಿಂತ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ಸಿ ಸೆಕ್ಷನ್‌ನಲ್ಲಿ ಜನಿಸಿದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮತ್ತೆ ಹೆಚ್ಚಾಗುವುದೇ?
6-8 ವಷರ್ದವರೆಗೆ ಮಕ್ಕಳಲ್ಲಿ ಅಲರ್ಜಿ, ಆಗಾಗ ಕಾಯಿಲೆ ಬೀಳುವುದು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಆರೋಗ್ಯಕರ ಆಹಾರ, ಮಕ್ಕಳು ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.\
ರಾಗಿ ಮಣ್ಣಿ: ಇದನ್ನು ಮಾಡುವುದು ಬಲು ಸುಲಭ
ಇತರ ಮಾಹಿತಿ
ಸಿ ಸೆಕ್ಷನ್ ಆದರೆ ದೇಹ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕು
ಸಿ ಸೆಕ್ಷನ್ ಆದರೆ ದೇಹ ಚೇತರಿಸಿಕೊಳ್ಳಲು ಹೆಚ್ಚಿನ ಸಮಯಬೇಕು. ಅದೇ ಸಹಜ ಹೆರಿಗೆಯಾದರೆ ಅವರು ಆ ದಿನವೇ ಎದ್ದು ಓಡಾಡಬಹುದು, ಬೇಗನೆ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದು.
ಸಿ ಸೆಕ್ಷನ್ ಆದರೆ 2ನೇ ಮಗುವಿಗೆ ಎಷ್ಟು ಸಮಯ ಕಾಯುವುದು ಒಳ್ಳೆಯದು?
ಇಲ್ಲಿ ವೈದ್ಯರು ತಾಯಿಯ ವಯಸ್ಸು ಗಮನಿಸುತ್ತಾರೆ, ವಯಸ್ಸು 33 ವರ್ಷ ಮೇಲ್ಪಟ್ಟಿದ್ದರೆ 2 ವರ್ಷದ ನಂತರ ಪ್ಲ್ಯಾನ್ ಮಾಡಲು ಸೂಚಿಸುತ್ತಾರೆ, ಅದೇ 25-26 ಈ ರೀತಿಯಿದ್ದರೆ 2ನೇ ಮಗುವಿಗೆ 5 ವರ್ಷ ಗ್ಯಾಪ್ ಕೊಟ್ಟರೆ ಒಳ್ಳೆಯದು.
ಮೊದಲ ಹೆರಿಗೆ ಸಿ ಸೆಕ್ಷನ್ ಆದರೆ 2ನೇ ಮಗು ನಾರ್ಮಲ್ ಆಗುವುದೇ?
ಮೊದಲ ಹೆರಿಗೆ ಸಿ ಸೆಕ್ಷನ್ ಆಗಿ 3 ವರ್ಷ ಕಳೆದಿದ್ದರೆ 2 ನೇ ಹೆರಿಗೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಬೇಗನೆ ಹೆರಿಗೆಯಾಗಬಹುದು ಎಂಬ ಸೂಚನೆ ಮಾತ್ರ ವೈದ್ಯರು ಸಹಜ ಹೆರಿಗೆ ಮಾಡುತ್ತಾರೆ, ಇಲ್ಲದಿದ್ದರೆ ಸಿ ಸೆಕ್ಷನ್ ಮಾಡಿಸಬೇಕೆಂದು ವೈದ್ಯರು ಸೂಚಿಸುತ್ತಾರೆ. ಈ ಕುರಿತು ವೈದ್ಯರು ಮೊದಲೇ ಮಾಹಿತಿ ನೀಡಿರುತ್ತಾರೆ.
ಐವಿಎಫ್ ಚಿಕಿತ್ಸೆ ಪಡೆದವರಿಗೆ ಯಾವ ಹೆರಿಗೆ ಒಳ್ಳೆಯದು?
ಫರ್ಟಿಲಿಟಿ ಚಿಕಿತ್ಸೆ ಪಡೆದವರೂ ಸಹಜ ಹೆರಿಗೆಯಾಗಬಹುದು, ಗರ್ಭಿಣಿಯಲ್ಲಿ ಇತರ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದಾದರೆ ಸಹಜ ಹೆರಿಗೆ ಮಾಡಿಸಬಹುದು, ಇಲ್ಲದಿದ್ದರೆ ಸಿ ಸಿಕ್ಷನ್ ಒಳ್ಳೆಯದು.



Click it and Unblock the Notifications