Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಹಾಃ ಸವಿರುಚಿಯ ರಾಗಿ ಮಣ್ಣಿ: ಇದನ್ನು ಮಾಡುವುದು ಬಲು ಸುಲಭ
ರಾಗಿ ಎಷ್ಟೊಂದು ಆರೋಗ್ಯಕರ ಎಂಬುವುದನ್ನು ವಿವರಿಸಬೇಕಾಗಿಲ್ಲ, ಇದರಿಂದ ಮುದ್ದೆ, ರೊಟ್ಟಿ ಜೊತೆಗೆ ರುಚಿಯಾದ ಸ್ವೀಟ್ ಕೂಡ ತಯಾರಿಸಬಹುದು. ನಾವಿಲ್ಲಿ ನೀಡಿರುವುದು ರಾಗಿ ಮಣ್ಣಿನ ರೆಸಿಪಿಯಾಗಿದೆ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸವಿಯಬಹುದು, ಹಲ್ವಾ ತರ ಮೆದುವಾಗಿ ತುಂಬಾನೇ ರುಚಿಯಾಗಿರುತ್ತೆ. ಇದನ್ನು ಮಾಡುವುದು ತುಂಬಾನೇ ಸ್ವಲ್ಪ.

ಇದನ್ನು ಮಾಡಿ ಕೊಡುವುದರಿಂದ ಮಕ್ಕಳ ಆರೋಗ್ಯಕ್ಕೆ ಪೌಷ್ಠಿಕಾಂಶವಿರುವ ಆಹಾರ ಕೂಡ ಸಿಗುವುದು. ಅಲ್ಲದೆ ಇದನ್ನು ಮಾಡಿಟ್ಟು ಒಂದೊಂದು ದುಂಡು ಬಾಯಿಗೆ ಹಾಕಿದರೆ ಆಗಾಗ ತಿನ್ನುವ ಬಾಯಿ ಚಪಲ ಕೂಡ ನಿಯಂತ್ರಿಸಬಹುದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: sweet
Serves: 5
-
ಬೇಕಾಗುವ ಸಾಮಗ್ರಿ
* ರಾಗಿ /ರಾಗಿ ಹಿಟ್ಟು 2 ಕಪ್
* ಹಾಲು 1 ಕಪ್
* ಬೆಲ್ಲ 1 ಕಪ್
* ತುಪ್ಪ 2 ಚಮಚ
* ನೀರು 2 ಕಪ್
* ಏಲಕ್ಕಿ 1
* ಡ್ರೈ ಫ್ರೂಟ್ಸ್
-
ಮಾಡುವ ವಿಧಾನ
* ರಾಗಿ ಬಳಸುವುದಾದರೆ ಅದನ್ನು 65-6 ಗಂಟೆ ನೆನೆ ಹಾಕಿ ಹಾಕಿ ನಂತರ ಗ್ರೈಂಡ್ ಮಾಡಿ ಅದರ ರಸ ಸೋಸಿ ತೆಗೆಯಿರಿ, ಹಟ್ಟು ಆದರೆ ದಕ್ಕೆ ನೀರು ಹಾಕಿ ಕಲೆಸಿ ರಾಗಿ ನೀರು ಸೋಸಿ ಪಾತ್ರೆಗೆ ಹಾಕಿ.
* ಈಗ ಸೋಸಿದ ರಾಗಿ ನೀರಿಗೆ ಬೆಲ್ಲದ ಪುಡಿ, ಹಾಲು ಸೇರಿಸಿ ಮಿಕ್ಸ್ ಮಾಡಿ, ಏಲಕ್ಕಿ ಸೇರಿಸಿ.
* ಈಗ ಆಡಿಸುತ್ತಾ ಕಡಿಮೆ ಉರಿಯಲ್ಲಿ ಬೇಯಿಸಿ. 2 ಚಮಚ ತುಪ್ಪ ಸೇರಿಸಿ ತಿರುಗಿಸಿ. 20-25 ತಿರುಗಿಸುತ್ತಲೇ ಬೇಯಿಸುತ್ತಿದ್ದರೆ ಗಟ್ಟಿಯಾಗುವುದು.
* ಹಿಟ್ಟು ಗಟ್ಟಿಯಾದ ಬಳಿಕ ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಸುರಿಯಿರಿ ನಂತರ ಒಂದು ಸ್ಪೂನ್‌ನಿಂದ ಅದರ ಮೇಲೆ ತಟ್ಟಿ, ನಂತರ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ, ತಣ್ಣಗಾಗಲು ಬಿಡಿ.
* ನಂತರ ಬೇಕಾದ ಶೇಪ್‌ಗೆ ಕತ್ತರಿಸಿ ಸವಿಯಿರಿ.
- ಇದಕ್ಕೆ ಬೇಕಿದ್ದರೆ ತೆಂಗಿನ ಹೋಳು ಕೂಡ ಸೇರಿಸಬಹುದು, ಇದನ್ನು ಮಾಡಿದರೆ ಎರಡು ದಿನ ಇಟ್ಟು ಬಳಸಬಹುದು.
- ಸರ್ವ್ - 1/2 ಕೆಜಿ ರಾಗಿ ಮಣ್ಣಿ
- ಕೊಬ್ಬು - ಶೇ.7
- ಪ್ರೊಟೀನ್ - 10ಗ್ರಾಂ
- ಕಾರ್ಬ್ಸ್ - ಶೇ.25
- ನಾರಿನಂಶ - ಶೇ.14



Click it and Unblock the Notifications
